ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು

| Published : Dec 04 2024, 12:33 AM IST

ಸಾರಾಂಶ

ಪರಿಸರವನ್ನು ಉಳಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದ್ದು, ಪ್ರತಿಯೊಬ್ಬರು ಪರಿಸರವನ್ನು ಸಂರಕ್ಷಿಸಲು ಮುಂದಾಗಬೇಕಿದೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಸಿ.ಎ ದೇವಾನಂದ್ ಹೇಳಿದರು. ಹಾನುಬಾಳು ರೋಟರಿ ಸಂಸ್ಥೆ ವತಿಯಿಂದ ಸಾರ್ವಜನಿಕರಿಗೆ ಪರಿಸರ ಮತ್ತು ಸ್ವಚ್ಛತೆಯ ಕುರಿತು ಮಾಹಿತಿ ಫಲಕವನ್ನು ಹಾನುಬಾಳ್ ಸಮೀಪದ ಮಗಜಹಳ್ಳಿ ಅಬ್ಬಿ ಫಾಲ್ಸ್ ಬಳಿ ಅನಾವರಣಗೊಳಿಸಿದ ನಂತರ ಮಾತನಾಡಿದರು. ತಾಲೂಕಿನಲ್ಲಿ ಅನೇಕ ಪ್ರವಾಸಿ ಸ್ಥಾನಗಳಿದ್ದು ಇವುಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರು ಸ್ವಚ್ಛತೆಯನ್ನು ಕಾಪಾಡುವ ಅವಶ್ಯಕತೆಯಿದೆ ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಪರಿಸರವನ್ನು ಉಳಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದ್ದು, ಪ್ರತಿಯೊಬ್ಬರು ಪರಿಸರವನ್ನು ಸಂರಕ್ಷಿಸಲು ಮುಂದಾಗಬೇಕಿದೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಸಿ.ಎ ದೇವಾನಂದ್ ಹೇಳಿದರು.

ತಾಲೂಕಿನ ಹಾನುಬಾಳು ರೋಟರಿ ಸಂಸ್ಥೆ ವತಿಯಿಂದ ಸಾರ್ವಜನಿಕರಿಗೆ ಪರಿಸರ ಮತ್ತು ಸ್ವಚ್ಛತೆಯ ಕುರಿತು ಮಾಹಿತಿ ಫಲಕವನ್ನು ಹಾನುಬಾಳ್ ಸಮೀಪದ ಮಗಜಹಳ್ಳಿ ಅಬ್ಬಿ ಫಾಲ್ಸ್ ಬಳಿ ಅನಾವರಣಗೊಳಿಸಿದ ನಂತರ ಮಾತನಾಡಿದರು. ತಾಲೂಕಿನಲ್ಲಿ ಅನೇಕ ಪ್ರವಾಸಿ ಸ್ಥಾನಗಳಿದ್ದು ಇವುಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರು ಸ್ವಚ್ಛತೆಯನ್ನು ಕಾಪಾಡುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಪ್ರವಾಸಿಗರ ಮಾರ್ಗದರ್ಶನಕ್ಕಾಗಿ ರೋಟರಿ ಸಂಸ್ಥೆ ವತಿಯಿಂದ ಪರಿಸರ ಹಾಗೂ ಸ್ವಚ್ಛತೆ ಕುರಿತು ಮಾಹಿತಿ ಫಲಕವನ್ನು ಇಲ್ಲಿ ಅನಾವರಣಗೊಳಿಸಲಾಗಿದೆ. ರೋಟರಿ ಸಂಸ್ಥೆ ಒಂದು ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು ನಿರಂತರವಾಗಿ ವಿವಿಧ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಹಾನುಬಾಳ್‌ನಂತಹ ಚಿಕ್ಕ ಹೋಬಳಿಯ ಇಲ್ಲಿಯ ರೋಟರಿ ಕ್ಲಬ್ ಸದಸ್ಯರು ನಿರಂತರವಾಗಿ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಮಾಡುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.

ಹಾನುಬಾಳ್ ರೋಟರಿ ಸಂಸ್ಥೆಯ ಕಾರ್ಯದರ್ಶಿ ಭೂಷಣ್ ಗಾಣದಹೊಳೆ ಮಾತನಾಡಿ, ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ಹಾನುಬಾಳ್‌ನಲ್ಲಿ ರೋಟರಿ ಸಂಸ್ಥೆ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಮಾಡಲಾಗಿದೆ. ಪ್ಲಾಸ್ಟಿಕ್ ಮುಕ್ತ ಹಾನುಬಾಳ್ ಮಾಡುವುದು ನಮ್ಮ ಕನಸಾಗಿದ್ದು, ಈ ನಿಟ್ಟಿನಲ್ಲಿ ಸಂಸ್ಥೆ ವತಿಯಿಂದ ಜನ ಜಾಗೃತಿ ಮಾಡಲಾಗುವುದು ಹಾಗೂ ಇನ್ನಿತರ ಸೇವಾ ಚಟುವಟಿಕೆಗಳನ್ನು ಸಾರ್ವಜನಿಕರಿಗಾಗಿ ಮಾಡಲಾಗುತ್ತದೆ ಎಂದರು. ನಂತರ ಸಂಜೆ ಹಾನುಬಾಳು ರೋಟರಿ ಭವನದಲ್ಲಿ ಜಿಲ್ಲಾ ರಾಜ್ಯಪಾಲರ ಭೇಟಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿರುವ ಮೂವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಉಪ ರಾಜ್ಯಪಾಲ ಅರುಣ್ ರಕ್ಷಿದಿ, ವಲಯ ೮ ಲೆಫ್ಟಿನೆಂಟ್ ಯಶವಂತ್, ಹಾನುಬಾಳ್ ಹೋಬಳಿ ರೋಟರಿ ಸಂಸ್ಥೆ ಅಧ್ಯಕ್ಷ ಸುಂದರೇಶ್ ಬಿ.ಕೆ, ಪದಾಧಿಕಾರಿಗಳಾದ ನಿಶಾಂತ್, ರವಿ, ವಿಜಿಕುಮಾರ್, ಧನಂಜಯ್, ಸಂದೇಶ್ ಕೀರ್ತಿ, ರತ್ನಾಕರ್ ಹಾಗೂ ಇತರೆ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.