ಸಮಾಜದ ಸಂಘಟನೆಗೆ ಪ್ರತಿಯೊಬ್ಬರೂ ಶ್ರಮಿಸಿ: ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು

| Published : Dec 12 2024, 12:34 AM IST

ಸಮಾಜದ ಸಂಘಟನೆಗೆ ಪ್ರತಿಯೊಬ್ಬರೂ ಶ್ರಮಿಸಿ: ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಜಂಗಮ ಸಮಾಜದ ಸಂಘಟನೆ ಅವಶ್ಯಕವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಸಮಾಜಕ್ಕಾಗಿ ಶ್ರಮಿಸಬೇಕು.

ಜಂಗಮ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣದ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೊಪ್ಪಳ

ಜಂಗಮ ಸಮಾಜದ ಸಂಘಟನೆ ಅವಶ್ಯಕವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಸಮಾಜಕ್ಕಾಗಿ ಶ್ರಮಿಸಬೇಕು. ನಾನು ಎನ್ನುವುದನ್ನು ಬಿಟ್ಟು ನಾವು ಎಂದಾಗ ಮಾತ್ರ ಸಂಘಟನೆ ಉಳಿಯಲು ಸಾಧ್ಯ ಎಂದು ಮೈನಳ್ಳಿ-ಬಿಕನಳ್ಳಿ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ನಗರದ ಶ್ರೀ ರೇಣುಕಾಚಾರ್ಯ ಭವನದಲ್ಲಿ ಜಂಗಮ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಸಮಾಜದ ಏಳಿಗೆ ದೃಷ್ಟಿಯಿಂದ ಮುಂಬರುವ ದಿನಗಳಲ್ಲಿ ಸಮಾಜ ಸರ್ವ ರಂಗಗಳಲ್ಲಿ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಸಾಮೂಹಿಕವಾಗಿ ಪ್ರಯತ್ನಿಸಬೇಕಾಗಿದೆ ಎಂದರು.

ಜಂಗಮರು ಯಾವಾಗಲೂ ಇಷ್ಟಲಿಂಗ ಧರಿಸಿ, ಭಸ್ಮ ಹಚ್ಚಿಕೊಳ್ಳಿರಿ, ನಿಮ್ಮ ಮಕ್ಕಳಿಗೂ ಸಹ ಧರಿಸಲು ಹೇಳಿ, ನಿತ್ಯವೂ ಪೂಜೆ ಮಾಡಲು ತಿಳಿಸಬೇಕು. ಇಷ್ಟಲಿಂಗವು ಶಿವನ ಸಂಕೇತವಾಗಿದೆ. ಇದನ್ನು ಭಕ್ತಿಯಿಂದ ಪೂಜೆ ಮಾಡಬೇಕು ಎಂದರು.

ಜಂಗಮ ಸಮಾಜದ ಗೌರವಾಧ್ಯಕ್ಷರಾಗಿ ಕೊಟ್ರಬಸಯ್ಯ ಹಿರೇಮಠ, ಅಧ್ಯಕ್ಷರಾಗಿ ಹಂಪಯ್ಯ ಮೆತಗಲ್, ಉಪಾಧ್ಯಕ್ಷರಾಗಿ ಗವಿಸಿದ್ದಯ್ಯ ಲಿಂಗಬಸಯ್ಯನಮಠ, ಕಾರ್ಯದರ್ಶಿಯಾಗಿ ಬಸಯ್ಯ ಹಿರೇಮಠ, ಸಹ ಕಾರ್ಯದರ್ಶಿಯಾಗಿ ಜಗದೀಶಯ್ಯ ನೀರಲಗಿ, ಖಜಾಂಚಿಯಾಗಿ ಚಿದಾನಂದಯ್ಯ, ಸದಸ್ಯರಾಗಿ ಬಸಯ್ಯ ಹಿರೇಮಠ, ಶಿವಕುಮಾರ ಹಿರೇಮಠ, ಪಂಪಯ್ಯ ಹಿರೇಮಠ, ಸಿದ್ದಯ್ಯ ಹಿರೇಮಠ, ವಿಜಯಕುಮಾರ ವಸ್ತ್ರದ, ಮಲ್ಲಯ್ಯ ಸಂಕಿನಮಠ, ಜಯಶ್ರೀ ಹಿರೇಮಠ, ಲಲಿತಾ ಹಿರೇಮಠ ಅಧಿಕಾರ ವಹಿಸಿಕೊಂಡರು.

ಈ ಸಂದರ್ಭ ಪ್ರಮುಖರಾದ ಸಿದ್ದಯ್ಯ ಹಿರೇಮಠ, ನೀಲಕಂಠಯ್ಯ ಹಿರೇಮಠ, ವಿರೂಪಾಕ್ಷಯ್ಯ ಗದಗಿನಮಠ, ಕಲ್ಲಯ್ಯ ಕಲ್ಯಾಣಗೌಡ್ರು, ಶರಣಯ್ಯ ಟೈಲರ್, ಗುರಯ್ಯ, ಚಂದ್ರಶೇಖರಯ್ಯ ಸೊಪ್ಪಿಮಠ, ಶಂಕ್ರಯ್ಯ ಸಾಲಿಮಠ, ದಯಾನಂದ ಸೇರಿದಂತೆ ಇತರರಿದ್ದರು.

ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಗಂಡುಗಲಿ ಕುಮಾರರಾಮ ಹೆಸರಿಡಲು ಅಲ್ಲಮಪ್ರಭು ಬೆಟ್ಟದೂರು ಒತ್ತಾಯ:

ಕೊಪ್ಪಳದ ರೈಲು ನಿಲ್ದಾಣಕ್ಕೆ ಪರನಾರಿ ಸಹೋದರ, ಗಂಡುಗಲಿ ಕುಮಾರರಾಮರ ಹೆಸರಿಡಬೇಕೆಂದು ಪ್ರಗತಿಪರ ಸಂಘಟನೆಗಳಿಂದ ಒತ್ತಾಯಿಸಲಾಗಿದೆ ಎಂದು ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.ಕೊಪ್ಪಳನಗರದ ಮೀಡಿಯಾ ಕ್ಲಬ್‌ನಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಪ್ಪಳ ಇತಿಹಾಸದಲ್ಲಿ ಎರಡು ಹೆಸರು ಐತಿಹಾಸಿಕವಾಗಿವೆ. ಇಬ್ಬರು ಮಹತ್ವ ಹೊಂದಿದ ಪುರುಷರಾಗಿದ್ದಾರೆ. ಸಾಮ್ರಾಟ ಅಶೋಕನ ಹೆಸರನ್ನು ದೇಶದ ಯಾವಾದಾದರೂ ನಿಲ್ದಾಣಕ್ಕೆ ಇಡಬಹುದು. ಆದರೆ ಇಂದಿನ ಪ್ರಸ್ತುತ ಸಂದರ್ಭದಲ್ಲಿ ಜನಪದ ಕಾವ್ಯದಲ್ಲಿ, ದೇಶದಲ್ಲಿ ನಡೆಯುವ ಮಹಿಳಾ ದೌರ್ಜನ್ಯ ತಡೆಗೆ ಸಾಂಕೇತಿಕವಾಗಿ ಪರನಾರಿ ಸಹೋದರ ಎಂಬ ಹೆಸರು ಸೂಕ್ತವಾಗಿದೆ. ಈ ಕುರಿತು ಸಚಿವರು, ಸಂಸದರು ಹಾಗೂ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ.ಕುಮ್ಮಟದುರ್ಗದಲ್ಲಿರುವ ಕುಮಾರರಾಮ ನಮ್ಮ ಸಾಂಸ್ಕೃತಿಕ ನಾಯಕ. ಅವರ ಹೆಸರು ಕೊಪ್ಪಳಕ್ಕೆ ಇಡುವುದು ಸೂಕ್ತವಾಗಿದೆ. ಕುಮಾರರಾಮ ಜಿಲ್ಲೆಯ ದೊಡ್ಡನಾಯಕರಾಗಿರುವುದರಿಂದ ಜಿಲ್ಲಾ ಕೇಂದ್ರದಲ್ಲಿರುವ ರೈಲು ನಿಲ್ದಾಣಕ್ಕಿಡುವುದು ಸೂಕ್ತವಾಗಿದೆ.

ಜಿಲ್ಲಾ ಕೇಂದ್ರದಲ್ಲಿ ಸ್ಟೆಷನ್‌ಗೆ ಹೆಸರು ಇಡುವ ಕುರಿತು ತಮ್ಮತಮ್ಮ ಅಭಿಪ್ರಾಯ ಹೇಳುತ್ತಾರೆ. ಆದರೆ ಇನ್ನೊಂದು ಹೆಸರಿಗೆ ವಿರೋಧವಿಲ್ಲ. ಸೂಕ್ತ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬೇಕು ಎಂದರು.ಪ್ರಮುಖರಾದ ಮಹಾಂತೇಶ ಕೊತಬಾಳ, ಟಿ. ರತ್ನಾಕರ, ಸುಖರಾಜ ತಾಳಕೇರಿ, ಅಂದಾನಪ್ಪ ಬೆಣಕಲ್ ಇದ್ದರು.