ಕಾಂಗ್ರೆಸ್‌ ಚುನಾವಣೆ ಗೆದ್ದಾಗಎಲ್ಲವೂ ಸರಿ ಇರುತ್ತೆ: ಜೋಶಿ

| Published : Aug 04 2025, 12:15 AM IST

ಕಾಂಗ್ರೆಸ್‌ ಚುನಾವಣೆ ಗೆದ್ದಾಗಎಲ್ಲವೂ ಸರಿ ಇರುತ್ತೆ: ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ನವರಿಗೆ ಚುನಾವಣೆಯಲ್ಲಿ ಗೆದ್ದಾಗ ಚುನಾವಣಾ ಆಯೋಗ ಸರಿಯಿರುತ್ತದೆ. ಅವರು ಸೋತರೆ ಆಗ ಆಯೋಗ ಸರಿಯಾಗಿ ಕೆಲಸ ಮಾಡಿಲ್ಲ ಎಂದು ರಾಹುಲ್‌ ಗಾಂಧಿ ಆರೋಪ ಮಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಕಾಂಗ್ರೆಸ್‌ನವರಿಗೆ ಚುನಾವಣೆಯಲ್ಲಿ ಗೆದ್ದಾಗ ಚುನಾವಣಾ ಆಯೋಗ ಸರಿಯಿರುತ್ತದೆ. ಅವರು ಸೋತರೆ ಆಗ ಆಯೋಗ ಸರಿಯಾಗಿ ಕೆಲಸ ಮಾಡಿಲ್ಲ ಎಂದು ರಾಹುಲ್‌ ಗಾಂಧಿ ಆರೋಪ ಮಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ 2023ರಲ್ಲಿ ವಿಧಾನಸಭಾ ಚುನಾವಣೆ ಗೆದ್ದಾಗ ಚುನಾವಣಾ ಆಯೋಗ ಸರಿ ಇತ್ತು. 2024ರ ಲೋಕಸಭಾ ಚುನಾವಣೆಯಲ್ಲಿ ನಾವು ಗೆದ್ದೆವು. ಆಗ ಅಲ್ಲಿ ಗೋಲ್ಮಾಲ್ ಆಗಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಮೂರ್ಖತನಕ್ಕೂ ಒಂದು ಮಿತಿ ಇರುತ್ತದೆ. ಗೆದ್ದಾಗ ಒಂದು ರೀತಿ, ಸೋತಾಗ ಒಂದು ರೀತಿ ಆರೋಪ ಮಾಡುವ ರಾಹುಲ್ ಗಾಂಧಿಯವರೇ, ನಿಮಗೆ ನಾಚಿಕೆ ಆಗಲ್ವಾ ಎಂದು ತಿವಿದರು.

ಬೆಂಗಳೂರಲ್ಲಿ ಇದೀಗ ಹೋರಾಟ ಹಮ್ಮಿಕೊಂಡಿದ್ದಾರೆ. ಅವರು ಸೋತಿರುವುದರಿಂದ ಅವರಿಗೆ ಉದ್ಯೋಗ ಏನಿಲ್ಲ. ಹೀಗಾಗಿ, ಈ ರೀತಿ ಆರೋಪ ಮಾಡುತ್ತಾರೆ. ಕೋರ್ಟ್ ಬಗ್ಗೆನೂ ಮಾತನಾಡುತ್ತಾರೆ. ಅವರ ಪರವಾಗಿ ತೀರ್ಪು ಕೊಟ್ಟರೆ ಸರಿ. ಇಲ್ಲದಿದ್ದರೆ ತಪ್ಪು ಎನ್ನುತ್ತಾರೆ. ಮತಪಟ್ಟಿಯಲ್ಲಿ ತಪ್ಪಾಗಿದ್ದರೆ ಚುನಾವಣಾ ಆಯೋಗಕ್ಕೆ ದೂರು ಕೊಡಲಿ. ಇಷ್ಟು ದಿನ ಏನಾಗಿತ್ತು?, ಟ್ಯೂಬ್ ಲೈಟ್ ಹತ್ತಿರಲಿಲ್ವಾ?. ಸೋತ ತಕ್ಷಣ ಗೊಳೋ ಅಂತ ಅಳುತ್ತಿದ್ದಾರೆ ಎಂದರು.

ಇದೀಗ ಚುನಾವಣಾ ಆಯೋಗ ಸತ್ತಿದೆ ಎಂದು ಹೇಳುತ್ತಾರೆ. ಇವರ ಹೇಳಿಕೆ ನೋಡಿದರೆ ರಾಹುಲ್‌ ಬಾಬಾನ ಬ್ಯಾಲೆನ್ಸ್‌ ತಪ್ಪಿದೆ ಎಂದೆನ್ನಿಸುತ್ತದೆ. ಎಲೆಕ್ಷನ್ ಕಮಿಷನ್ ಅನ್ನು ನೀವು ಹಿಂದೆ ಹೇಗೆ ನಡೆಸಿಕೊಂಡಿದ್ದೀರಿ? ರಾಜೀವ್ ಗಾಂಧಿ ಹತ್ಯೆ ದುರ್ದೈವದ ಸಂಗತಿ. ಆದರೆ, ಒಬ್ಬ ವ್ಯಕ್ತಿಯ ಮರಣದ ನಂತರ ಚುನಾವಣೆ ಮುಂದಕ್ಕೆ ಹಾಕಿದಿರಿ ಯಾಕೆ? ಓಟ್‌ ಕೇಳುವುದಕ್ಕೂ ಅವರ ಚಿತಾಭಸ್ಮ ಮೆರವಣಿಗೆ ನಡೆಸಲಾಯಿತು ಎಂದು ಟೀಕಿಸಿದರು.

ಬಾಕ್ಸ್...

ಪಾಕ್‌ ರಕ್ಷಿಸಲು ಕೈ ಯತ್ನ

ಕಾಂಗ್ರೆಸ್ ದೇಶದ ಹಿತವನ್ನು ಮರೆತು ಪಾಕಿಸ್ತಾನದ ಬಗ್ಗೆ ಮೃದುಧೋರಣೆ ತಾಳುತ್ತಿದೆ. ಪಾಕಿಸ್ತಾನವನ್ನು ಭಯೋತ್ಪಾದನೆಯ ಆರೋಪಗಳಿಂದ ಮುಕ್ತಗೊಳಿಸುವ ಪ್ರಯತ್ನ ಮಾಡುತ್ತಿದೆ. ಖಲಿಸ್ತಾನಿ ಟೆರರಿಸ್ಟ್ ಜತೆ ರಾಹುಲ್ ಗಾಂಧಿಯವರ ಫೋಟೋ ಇದೆ. ಯಾಸಿನ್ ಮಲ್ಲಿಕ್ ಜೊತೆ ಇಲ್ಲಿರುವವರ ಫೋಟೋ ಇದೆ ಎಂದು ಪ್ರಹ್ಲಾದ್‌ಜೋಶಿ ದೂರಿದರು.++++ಮಾಲೇಗಾಂವ್ ಪ್ರಕರಣದ ನಂತರದ ಘಟನೆಗಳಲ್ಲಿ ಕಾಂಗ್ರೆಸ್‌ ನಡೆದುಕೊಂಡದ್ದು ಎಲ್ಲರಿಗೂ ಗೊತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಆರೋಪಿಸಿದರು.

ಆಗ ಅಧಿಕಾರದಲ್ಲಿದ್ದ ಶರದ್ ಪವಾರರ ಪಕ್ಷ ಹಿಂದೂ ಟೆರರ್‌ ಎಂದು ಹೇಳುವ ಪ್ರಯತ್ನವನ್ನು ಮಾಡಿತ್ತು. ಜತೆಗೆ ತನಿಖೆಯನ್ನೂ ಬಂದ್‌ ಮಾಡಿತ್ತು. ಸಂಜೋತಾ ಹಾಗೂ ಮಾಲೇಗಾಂವ್‌ ಲಿಂಕ್ ಮಾಡಿದ್ದರು. ಮಾಲೇಗಾಂವ್‌ನಲ್ಲಿ ಮುಸ್ಲಿಮರು ಯಾಕೆ ಬಾಂಬ್ ಸ್ಫೋಟ ಮಾಡುತ್ತಾರೆ ಎಂದಿದ್ದರು. ಅಲ್ಲದೆ, ಹಿಂದೂ ಟೆರರ್ ಎಂದು ಹೇಳಿ ಪಾಕಿಸ್ತಾನವನ್ನು ರಕ್ಷಿಸುವ ಕೆಲಸ ಮಾಡಿದರು. ದಿಗ್ವಿಜಯ ಸಿಂಗ್ ಅವರು ಮುಂಬೈನಲ್ಲಿ ಆರ್‌ಎಸ್‌ಎಸ್‌ನವರು ಬ್ಲಾಸ್ಟ್ ಮಾಡಿದ್ದಾರೆ ಎಂದಿದ್ದರು. ಇವರೆಲ್ಲ ದೇಶದಲ್ಲಿ ಹೀರೋ ಆಗುವುದನ್ನು ಬಿಟ್ಟು ಪಾಕಿಸ್ತಾನದಲ್ಲಿ ಹೀರೋ ಆಗುವುದಕ್ಕೆ ಹೊರಟಿದ್ದಾರೆ ಎಂದು ಆರೋಪಿಸಿದರು.(ಬಾಕ್ಸ್‌)...

ನಾಮನಿರ್ದೇಶನದ ಮೂಲಕ

ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ

ಕರ್ನಾಟಕ ಸೇರಿದಂತೆ ದೇಶದ ಎಲ್ಲ ರಾಜ್ಯಗಳ ಬಿಜೆಪಿ ರಾಜ್ಯಾಧ್ಯಕ್ಷರನ್ನು ರಾಷ್ಟ್ರೀಯ ನಾಯಕರು ನಾಮನಿರ್ದೇಶನದ ಮೂಲಕ ಆಯ್ಕೆ ಮಾಡುತ್ತಾರೆ. ಈ ವಿಷಯದಲ್ಲೇನೂ ಗೊಂದಲ ಇಲ್ಲ ಎಂದು ಹೇಳಿದರು.

ಹಾಲಿ ಅಧ್ಯಕ್ಷರಾಗಿರುವ ವಿಜಯೇಂದ್ರ ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಈ ಬಾರಿ ನಾನೇ ರಾಜ್ಯಾಧ್ಯಕ್ಷನಾಗುವೆ ಎಂದು ಹೇಳಿಕೊಂಡಿಲ್ಲ. ಹೀಗಾಗಿ, ರಾಷ್ಟ್ರೀಯ ಅಧ್ಯಕ್ಷರು ಅರ್ಹರನ್ನು ಆಯ್ಕೆ ಮಾಡಲಿದ್ದಾರೆ ಎಂದರು.