ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಭಾರತೀಯ ಚಿತ್ರಕಲೆಯು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಭಾವಗಳನ್ನು ಹೊಂದಿರುವ ಕಲೆಯಾಗಿದ್ದರೂ ಇದು ಪ್ರಾಚೀನ ಕಾಲದ ಗುಹೆಗಳಿಂದ ಹಿಡಿದು ಆಧುನಿಕ ಶೈಲಿಗಳವರೆಗೆ ವಿಕಸನಗೊಂಡಿದೆ ಎಂದು ಖಾಸ್ಗತೇಶ್ವರ ಮಠದ ಪೀಠಾಧಿಪತಿ ಬಾಲಶಿವಯೋಗಿ ಸಿದ್ದಲಿಂಗದೇವರು ನುಡಿದರು.ಪೌರಾಣಿಕ ಕಥೆಗಳು ಧಾರ್ಮಿಕ ವಿಷಯಗಳು ಮತ್ತು ದೈನಂದಿನ ಜೀವನವನ್ನು ಚಿತ್ರಕಲಾಕಾರರು ಚಿತ್ರಿಸುವ ಕಲೆಗಳ ಶೈಲಿಗಳು ಅನೇಕ ಇವೆ. ಅವುಗಳಲ್ಲಿ ವಿಜಯಪುರದ ದೈಶ್ಯಬಿಂಬ ಕಲಾಪ್ರತಿಷ್ಠಾನದವರು ಪವಾಡಗಳ ಆಧಾರಿತ ಚಿತ್ರಕಲಾ ಶಿಬಿರವನ್ನು ಏರ್ಪಡಿಸುತ್ತಿರುವುದು ಇದೊಂದು ಮಹತ್ವದ ಕಲೆಯಾಗಿ ಪರಿಣಮಿಸಿದೆ. ಇಂದು ತಾಳಿಕೋಟೆಯ ಖಾಸ್ಗತಮಠದ ಸಂಯೋಗದೊಂದಿಗೆ ಖಾಸ್ಗತರ, ವಿರಕ್ತಶ್ರೀಗಳ, ಶಿವಬಸವ ದೇವರ ಪವಾಡಗಳ ಆಧಾರಿತ ಚಿತ್ರಕಲೆ 5 ದಿನಗಳವರೆಗೆ ರಾಜ್ಯಮಟ್ಟದ ಚಿತ್ರಕಲಾ ಶಿಬಿರ 2025- ಏರ್ಪಡಿಸಿರುವದು ಸಂತಸ ತಂದಿದೆ ಎಂದ ಶ್ರೀಗಳು ಕಲಾಕಾರರ ಜೀವನವೆಂಬುದು ಗುಲಾಬಿ ಹೂವಿನಂತೆ ಕಂಡರೂ ಆ ಗುಲಾಬಿ ಗಿಡಕ್ಕೆ ಮುಳ್ಳಿನಂತೆ ಅವರಿಗೆ ತೊಂದರೆ ಎದ್ದು ಕಾಣುತ್ತಲಿದೆ. ಶ್ರೀ ಖಾಸ್ಗತರ ಹಾಗೂ ಅಜ್ಜನ ಪವಾಡಗಳು ಹಿಂದೆ ಆಗಿದ್ದರೂ ಇಂದೂ ಆ ಕಾರ್ಯ ನಡೆದೆ ಇದೆ. ಇಂತಹ ಕಾರ್ಯ ಹೊರತರಲು ವಿಜಯಪುರದ ದೃಶ್ಯ ಬಿಂಬ ಕಲಾ ಪ್ರತಿಷ್ಠಾನ ಮುಂದಾಗಿರುವದು ಅದ್ಭುತ ಎಂದರು. ಖ್ಯಾತ ಕಲಾವಿದ ಪಿ.ಎಸ್.ಕಡೇಮನಿ ಮಾತನಾಡಿ, ಶ್ರೀ ಖಾಸ್ಗತ ಮಠ ಪ್ರಸಿದ್ಧಿ ಪಡೆದ ಮಠವಾಗಿದೆ.ಇದರ ತಿಹಾಸವನ್ನು ನಾವು ಅರಿತಿದ್ದೇವೆ. ಶ್ರೀಮಠದ ಸೇವಾ ಕಾರ್ಯ ಮಾಡಲು ಇಂದು ನಮಗೆ ಅವಕಾಶ ದೊರೆತಿರುವದು ಶ್ರೀಗಳ ಆಶೀರ್ವಾದ. ಈ ಸೇವಾ ಕಾರ್ಯ ನಮಗೆ ದೊರೆತಿರುವದು ಸಂತಸ ತಂದಿದೆ ಎಂದ ಅವರು, ಈ ಚಿತ್ರ ಕಲಾಕೃತಿಗಳು ರಚನೆಗೊಂಡಿರುವವು ಶಾಶ್ವತವಾಗಿ ಉಳಿಯಲಿವೆ. ಇವುಗಳನ್ನು ರಕ್ಷಿಸುವುದು ಅಗತ್ಯವಾಗಿದೆ ಎಂದು ಹೇಳಿದರು.ಈ ವೇಳೆ ಕಲಾವಿದ ಪಿ.ಎಸ್.ಕಡೆಮನಿ ಹಾಗೂ ದೃಶ್ಯಬಿಂಬ ಕಲಾಪ್ರತಿಷ್ಠಾನದ ಅಧ್ಯಕ್ಷ ಸತೀಶ ಕೇಮಶೆಟ್ಟಿ ಸಿದ್ದಲಿಂಗಶ್ರೀಗಳಿಗೆ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಕೈಬರಹದ ಭಾವಚಿತ್ರ ನೀಡಿ ಗೌರವಿಸಿದರು. ಚಿತ್ರಕಲಾವಿದರಾದ ಕೆ. ಗಂಗಾಧರ, ಎಸ್.ಟಿ.ಕೆಂಬಾವಿ, ಪಿ.ಬಿ. ಗವಾನಿ, ಡಿ.ಕೆ.ಕಾಮಕಾರ, ಬಸವರಾಜ ಅಗ್ನಿ, ಆರ್.ಎಚ್.ಸಾಸನೂರ, ಎಚ್.ಎಸ್.ಮಲಕಾಪೂರ, ಬಸವರಾಜ ಕುರಿ, ರಾಜು ಸುತಾರ ಶ್ರೀಗಳ ಆಶೀರ್ವಾದ ಪಡೆದರು.ಪ್ರತಿಷ್ಠಾನದ ಕಾರ್ಯದರ್ಶಿ ಅಯ್ಯನಗೌಡ ಉಮ್ಮಣ್ಣವರ, ಖಜಾಂಚಿ ಸಿದ್ದನಗೌಡ ಪಾಟೀಲ, ಸಂಘಟನಾ ಕಾರ್ಯದರ್ಶಿ ಶಿವನಗೌಡ ಬಿರಾದಾರ, ಸದಸ್ಯರಾದ ಸಚೀನ ಅಸ್ಕಿ, ಪತ್ರಕರ್ತ ಜಿ.ಟಿ. ಘೋರ್ಪಡೆ, ಜಯಸಿಂಗ್ ಮೂಲಿಮನಿ, ಮಲ್ಲು ಆನೇಸೂರ, ಬಸವರಾಜ ದೊಡಮನಿ, ಪ್ರಶಾಂತ ಸಜ್ಜನ, ಚಿತ್ರಕಲಾ ಶಿಕ್ಷಕರಾದ ಫಾರೂಕ್ ಸೇರಿದಂತೆ ಇನ್ನು ಹಲವರು ಉಪಸ್ಥಿತರಿದ್ದರು. ಸಂಸ್ಥೆಯ ಉಪಾಧ್ಯಕ್ಷ ಭೀಮನಗೌಡ ಗುಣಕನಾಳ ಸ್ವಾಗತಿಸಿ, ನಿರೂಪಿಸಿದರು.