ಬೇಲೂರು ವಾರ್ಡ್‌ಗೆ ಮಾಜಿ ಪುರಸಭೆ ಅಧ್ಯಕ್ಷೆ ಭೇಟಿ: ಸ್ವಚ್ಛತೆ ವೀಕ್ಷಣೆ

| Published : May 24 2024, 12:57 AM IST

ಸಾರಾಂಶ

ಬೇಲೂರು ಪಟ್ಟಣದ 7ನೇ ವಾರ್ಡ್‌ಗೆ ಭೇಟಿ ನೀಡಿ ಸ್ವಚ್ಛತೆ ಕುರಿತು ಮಾಜಿ ಪುರಸಭೆ ಅಧ್ಯಕ್ಷೆ ತೀರ್ಥ ಕುಮಾರಿ ವೆಂಕಟೇಶ್ ಪರಿಶೀಲನೆ ನಡೆಸಿದರು. ಪಟ್ಟಣದ ವಾರ್ಡ್ ನಂಬರ್ 7ಕ್ಕೆ ಪುರಸಭೆ ಸಿಬ್ಬಂದಿ ಹಾಗೂ ಆರೋಗ್ಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿ ಸ್ವಚ್ಚತೆ ಕಾರ್ಯ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ವಾರ್ಡ್‌ ಪರಿಶೀಲಿಸಿದ ತೀರ್ಥ ಕುಮಾರಿ

ಬೇಲೂರು: ಪಟ್ಟಣದ 7ನೇ ವಾರ್ಡ್‌ಗೆ ಭೇಟಿ ನೀಡಿ ಸ್ವಚ್ಛತೆ ಕುರಿತು ಮಾಜಿ ಪುರಸಭೆ ಅಧ್ಯಕ್ಷೆ ತೀರ್ಥ ಕುಮಾರಿ ವೆಂಕಟೇಶ್ ಪರಿಶೀಲನೆ ನಡೆಸಿದರು.

ಪಟ್ಟಣದ ವಾರ್ಡ್ ನಂಬರ್ 7ಕ್ಕೆ ಭೇಟಿ ನೀಡಿದ ತೀರ್ಥ ಕುಮಾರಿ ವೆಂಕಟೇಶ್ ತಮ್ಮ ವಾರ್ಡಿನ ಸ್ವಚ್ಛತೆ ಬಗ್ಗೆ ಪರಿಶೀಲಿಸಿ ನಂತರ ಪತ್ರಿಕೆಯೊಂದಿಗೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪಟ್ಟಣದೆಲ್ಲೆಡೆ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಹರಡುತ್ತಿದ್ದು ಪಟ್ಟಣದ ನಾಗರಿಕರು ಸಾಂಕ್ರಾಮಿಕ ರೋಗಗಳಾದ ಡೆಂಘೀ. ಮಲೇರಿಯಾ. ಪ್ರಕರಣಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದ ನಿತ್ಯ ಸಾರ್ವಜನಿಕರು ಭಯಭೀತರಾಗಿರುವುದನ್ನು ಪುರಸಭೆ ಮನಗಂಡು ಪುರಸಭೆ ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಅದರಂತೆ ಇಂದು ಪಟ್ಟಣದ ವಾರ್ಡ್ ನಂಬರ್ 7ಕ್ಕೆ ಪುರಸಭೆ ಸಿಬ್ಬಂದಿ ಹಾಗೂ ಆರೋಗ್ಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿ ಸ್ವಚ್ಚತೆ ಕಾರ್ಯ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಮಳೆ ಹೆಚ್ಚಾಗುತ್ತಿರುವುದರಿಂದ ಮನೆಗಳ ಮುಂದೆ ಹೂವಿನ ಪಾಟ್, ಎಳನೀರು ಬುರಡೆಗಳು, ಟೈರ್‌ಗಳು ಸೇರಿದಂತೆ ಮನೆಯ ಮುಂದೆ ಗುಂಡಿಗಳಲ್ಲಿ ನೀರು ಶೇಖರಣೆ ಆಗುವುದರಿಂದ ಸೊಳ್ಳೆ ಸಂತತಿ ಹೆಚ್ಚಾಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗವಾಗಿ ಮಲೇರಿಯ, ಡೆಂಘೀ ಜ್ವರದ ಪ್ರಕರಣಗಳು ಹೆಚ್ಚಾಗಿ ಕಾಣಿಸುತ್ತವೆ. ಇದರಿಂದ ಪಟ್ಟಣದ ನಾಗರಿಕರು ಯಾವುದೇ ಕಾರಣಕ್ಕೂ ಆತಂಕ ಪಡುವುದು ಬೇಡ. ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಅದೇ ರೀತಿ ಪುರಸಭೆ ವತಿಯಿಂದ ಸ್ವಚ್ಛತೆ ಮಾಡುತ್ತಿದ್ದೇವೆ. ಪಟ್ಟಣದ ನಿವಾಸಿಗಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಸಿ ತ್ಯಾಜ್ಯ, ಒಣ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೆ ಪುರಸಭೆಯಿಂದ ಬರುವ ಕಸದ ಗಾಡಿಯಲ್ಲೆ ತ್ಯಾಜ್ಯ ಹಾಕಬೇಕು. ಈ ಬಗ್ಗೆ ತಾಲೂಕು ಆರೋಗ್ಯ ಕೇಂದ್ರದಲ್ಲೂ ಸೂಕ್ತ ಸಲಹೆ ಸಹಕಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.

ಪುರಸಭೆ ಆರೋಗ್ಯಾಧಿಕಾರಿ ಲೋಹಿತ್, ಸಿಬ್ಬಂದಿ ಹಾಗು ಸ್ಥಳೀಯ ನಿವಾಸಿಗಳು ಹಾಜರಿದ್ದರು.