ಮಾಜಿ ಸೈನಿಕ ಧನಶೇಖರ್ ಪಾಂಡ್ಯನ್ ನಿಧನ

| Published : Jan 29 2025, 01:33 AM IST

ಸಾರಾಂಶ

ಮಾಜಿ ಸೈನಿಕರಾದ ಎನ್. ಧನಶೇಖರ್ ಪಾಂಡ್ಯನ್ (84) ಅವರು ಸೋಮವಾರ ಸಂಜೆ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಮೃತರು ತಮ್ಮ ಮರಣಾನಂತರ ದೇಹವನ್ನು ದಾನಮಾಡುವುದಾಗಿ ಬರೆದುಕೊಟ್ಟ ಹಿನ್ನೆಲೆಯಲ್ಲಿ ಮೃತದೇಹವನ್ನು ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದಿಕ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಕಳುಹಿಸಲಾಯಿತು. ಮೃತರು ಲೇ ಲಡಾಕ್‌ನ ಎಂಇಜಿ ರೆಜಿಮೆಂಟ್‌ನಲ್ಲಿ 14 ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಶಾಸಕ ಎ.ಮಂಜು ಮೃತರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿ ಕುಟುಂದವರಿಗೆ ಸಾಂತ್ವನ ಹೇಳಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಕೊಣನೂರಿನ ದಂತವೈದ್ಯ ಡಾ. ನಟರಾಜ್ ಅವರ ತಂದೆ ಮಾಜಿ ಸೈನಿಕರಾದ ಎನ್. ಧನಶೇಖರ್ ಪಾಂಡ್ಯನ್ (84) ಅವರು ಸೋಮವಾರ ಸಂಜೆ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.

ಮೃತರಿಗೆ ಪತ್ನಿ ಇಂದಿರಾ ದೇವಿ, ಪುತ್ರ ಡಾ. ನಟರಾಜ್, ಪುತ್ರಿ ಎನ್.ಡಿ. ಆಶಾದೇವಿ ಇದ್ದಾರೆ. ಮೃತರು ತಮ್ಮ ಮರಣಾನಂತರ ದೇಹವನ್ನು ದಾನಮಾಡುವುದಾಗಿ ಬರೆದುಕೊಟ್ಟ ಹಿನ್ನೆಲೆಯಲ್ಲಿ ಮೃತದೇಹವನ್ನು ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದಿಕ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಕಳುಹಿಸಲಾಯಿತು. ಮೃತರು ಲೇ ಲಡಾಕ್‌ನ ಎಂಇಜಿ ರೆಜಿಮೆಂಟ್‌ನಲ್ಲಿ 14 ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಶಾಸಕ ಎ.ಮಂಜು ಮೃತರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿ ಕುಟುಂದವರಿಗೆ ಸಾಂತ್ವನ ಹೇಳಿದರು.

ಮಾಜಿ ಸೈನಿಕರಾದ ಎನ್. ಧನಶೇಖರ್ ಪಾಂಡ್ಯನ್ ಅವರು ನಿಧನರಾದ ಹಿನ್ನೆಲೆ ಅರಕಲಗೂಡು ತಹಸೀಲ್ದಾರ್ ಮಲ್ಲಿಕಾರ್ಜುನ್, ಶಿರಸ್ತೇದಾರ್ ಸಿ. ಸ್ವಾಮಿ, ತಾಲೂಕಿನ ಮಾಜಿ ಸೈನಿಕರುಗಳಾದ ವಾರಿಯರ್ಸ್ ಅಕಾಡೆಮಿಯ ನಿರ್ದೇಶಕ ಮಂಜುನಾಥ್, ಶಿವೇಗೌಡ್ರು, ಅರುಣ್, ದಿಲೀಪ್, ಕೊಣನೂರಿನ ಅನಂತ್, ಅರಕಲಗೂಡು ವಾರಿಯರ್ಸ್ ಅಕಾಡೆಮಿ ವತಿಯಿಂದ ಸೇನೆ ಹಾಗೂ ಸಿಆರ್‌ಪಿಎಫ್ ಗೆ ಆಯ್ಕೆಯಾದ 9 ಮಂದಿ ಮೃತರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಹಾಗೂ ಒಂದು ನಿಮಿಷ ಮೌನಾಚರಣೆ ಸಲ್ಲಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.