ಸಾರಾಂಶ
ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯದ ಬಿ.ಎ. ಪ್ರವಾಸೋದ್ಯಮದ ಟೂರ್ ಗೈಡ್ ಆ್ಯಂಡ್ ಸರ್ವೀಸ್ ವಿಷಯದ ಪರೀಕ್ಷೆಯನ್ನು 60ರ ಬದಲು 30 ಅಂಕಗಳಿಗೆ ನಡೆಸಿ ನಂತರ ಅದನ್ನು 60 ಅಂಕಗಳಿಗೆ ಲೆಕ್ಕಾಚಾರ ಮಾಡಿರುವ ಎಡವಟ್ಟು ನಡೆದಿದ್ದು, ಈ ಲೋಪಕ್ಕೆ ಕಾರಣರಾದ ಎಲ್ಲ ಸಿಬ್ಬಂದಿಗೂ ನೋಟಿಸ್ ನೋಡಲು ವಿವಿ ಆಲೋಚಿಸಿದೆ.
ಈ ಸಂಬಂಧ ವಾಣಿಜ್ಯ ಪರೀಕ್ಷಾ ವಿಭಾಗದ ಮುಖ್ಯಸ್ಥೆ ಪ್ರೊ.ಸಿದ್ದಗಂಗಮ್ಮ ಎನ್ನುವವರಿಗೆ ₹5 ಸಾವಿರ ದಂಡ ಹಾಕಿ ಕೈತೊಳೆದುಕೊಳ್ಳಲು ಮುಂದಾಗಿರುವ ವಿವಿಯ ಕ್ರಮಕ್ಕೆ ವಿದ್ಯಾರ್ಥಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಲೋಪಕ್ಕೆ ಕಾರಣರಾದ ಎಲ್ಲರನ್ನೂ ಪತ್ತೆ ಮಾಡಲು ವಿವಿ ಮುಂದಾಗಿದೆ.
ಈ ಲೋಪವನ್ನು ಯಾರೊಬ್ಬರ ಮೇಲೆ ಹೊರಿಸಲು ಸಾಧ್ಯವಿಲ್ಲ. ಇದರಲ್ಲಿ ಒಂದು ರೀತಿ ನಿರ್ಲಕ್ಷ್ಯ ಧೋರಣೆ, ಮತ್ತೊಂದು ಕಡೆ ಲೋಪ ತಿಳಿದ ಮೇಲೂ ಅದನ್ನು ಅಧಿಕಾರಿಗಳ ಗಮನಕ್ಕೆ ತಾರದೆ ವಿಭಾಗದ ಬೋಧಕರು, ಪರೀಕ್ಷೆ ನಡೆಸಿದ ಸಿಬ್ಬಂದಿ ಮರೆಮಾಚಿ 30 ಅಂಕದ ಪರೀಕ್ಷೆ ನಡೆಸಿ 60 ಅಂಕಕ್ಕೆ ಲೆಕ್ಕಾಚಾರ ಮಾಡಿರುವುದು ಸಣ್ಣ ವಿಷಯವಲ್ಲ. ಹಾಗಾಗಿ ಸಂಬಂಧಪಟ್ಟ ಎಲ್ಲರಿಗೂ ನೋಟಿಸ್ ನೀಡಿ ಉತ್ತರ ಪಡೆಯಲಾಗುವುದು. ಅವರು ನೀಡುವ ಉತ್ತರದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ವಿವಿಯ ಮೂಲಗಳು ತಿಳಿಸಿವೆ.
ಏನಿದು ಎಕ್ಸಾಂ ಎಡವಟ್ಟು?
ಬಿ.ಎ. ಪ್ರವಾಸೋದ್ಯಮ ಎಂಬ ಮುಕ್ತ ಆಯ್ಕೆಯಡಿ ಲಭ್ಯವಿರುವ ಟೂರ್ ಗೈಡ್ ಅಂಡ್ ಸರ್ವೀಸ್ ವಿಷಯದ ಪರೀಕ್ಷೆಯನ್ನು 184 ವಿದ್ಯಾರ್ಥಿಗಳಿಗೆ ಇತ್ತೀಚೆಗೆ ನಡೆಸಲಾಗಿತ್ತು. 60 ಅಂಕಗಳಿಗೆ ನಡೆಸಬೇಕಾದ ಪರೀಕ್ಷೆಯನ್ನು ಕೇವಲ 30 ಅಂಕಗಳಿಗೆ ನಡೆಸಿತ್ತು. ತಪ್ಪು ಅರಿವಾದ ಬಳಿಕ 30 ಅಂಕಗಳಿಗೆ ನಡೆಸಿದ ಪರೀಕ್ಷೆಯ ಮೌಲ್ಯಮಾಪನದ ವೇಳೆ 60 ಅಂಕಗಳಿಗೆ ಲೆಕ್ಕಾಚಾರ ಮಾಡಿ (ಉದಾಹರಣೆಗೆ 15 ಅಂಕ ಪಡೆದಿರುವ ವಿದ್ಯಾರ್ಥಿಗೆ 30 ಅಂಕ ನೀಡುವುದು) ಮತ್ತೊಂದು ಪ್ರಮಾದ ಮಾಡಲಾಗಿತ್ತು.
)
)
;Resize=(128,128))
;Resize=(128,128))
;Resize=(128,128))
;Resize=(128,128))