19ರಿಂದ ಶಿವಮೊಗ್ಗದಲ್ಲಿ ಪರೀಕ್ಷಾ ಸಂಭ್ರಮ, ಸಂವಾದ

| Published : Sep 19 2024, 01:47 AM IST

ಸಾರಾಂಶ

ಪ್ರಗತಿ ಆಪಲ್ ಎಜ್ಯುಕೇಷನ್ ವತಿಯಿಂದ ಶಿವಮೊಗ್ಗದಲ್ಲಿ ಸೆ.19ರಂದು ಪರೀಕ್ಷಾ ಸಂಭ್ರಮ ಹಾಗೂ 20ರಂದು ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಛೇರ್ಮನ್ ವಿಜಯಕುಮಾರ್ ಬಳಿಗಾರ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ: ವಿಜಯಕುಮಾರ ಬಳಿಗಾರ

- - - - - -

- ಶಿವಮೊಗ್ಗದ ಜಿಪಂ ಸಿಇಒ ಎನ್.ಹೇಮಂತ್‌ರಿಂದ ಕಾರ್ಯಕ್ರಮ ಉದ್ಘಾಟನೆ

- ಶೋಭಾ ವೆಂಕಟರಮಣ ಅವರಿಂದ ಪುಸ್ತಕ ಬಿಡುಗಡೆ

- ಪದ್ಮಶ್ರೀ ಪುರಸ್ಕೃತ ಡಾ. ಸಿ.ಆರ್. ಚಂದ್ರಶೇಖರರಿಂದ ಪ್ರಮುಖ ಉಪನ್ಯಾಸ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರಗತಿ ಆಪಲ್ ಎಜ್ಯುಕೇಷನ್ ವತಿಯಿಂದ ಶಿವಮೊಗ್ಗದಲ್ಲಿ ಸೆ.19ರಂದು ಪರೀಕ್ಷಾ ಸಂಭ್ರಮ ಹಾಗೂ 20ರಂದು ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಛೇರ್ಮನ್ ವಿಜಯಕುಮಾರ್ ಬಳಿಗಾರ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.19ರಂದು ಬೆಳಗ್ಗೆ 10 ಗಂಟೆಗೆ ಶಿವಮೊಗ್ಗದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶ್ರೀ ಡಿ.ಎಂ. ವೆಂಕಟರಮಣ ಸ್ಮರಣಾರ್ಥ ಓದುವ ಖುಷಿ, ಪರೀಕ್ಷಾ ಸಂಭ್ರಮ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಪದ್ಮಶ್ರೀ ಪುರಸ್ಕೃತ ಡಾ. ಸಿ.ಆರ್. ಚಂದ್ರಶೇಖರ ಕಾರ್ಯಕ್ರಮದ ಎಲ್ಲಾ ಗೋಷ್ಠಿಗಳ ಪ್ರಮುಖ ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟನೆಯನ್ನು ಶಿವಮೊಗ್ಗದ ಜಿಪಂ ಸಿಇಒ ಎನ್.ಹೇಮಂತ್ ನೆರವೇರಿಸುವರು. ಶೋಭಾ ವೆಂಕಟರಮಣ ಪುಸ್ತಕ ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಡಿಡಿಪಿಐ ಮಂಜುನಾಥ್, ಬಿಇಒ ರಮೇಶ್ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದು, ಎಸ್.ವಿ. ಗುರುರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಳಿದಂತೆ ವಿವಿಧ ಗೋಷ್ಠಿಗಳು ನಡೆಯಲಿವೆ ಎಂದರು.

ಸೆ.20ರಂದು 10 ಗಂಟೆಗೆ ಶಿವಮೊಗ್ಗದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸ್ಕಾಲರ್ ಶಿಪ್ ಕಾರ್ಯಕ್ರಮ ನಡೆಯಲಿದೆ. ಪದ್ಮಶ್ರೀ ಪುರಸ್ಕೃತ, ವಿಶ್ರಾಂತ ಮನೋರೋಗ ತಜ್ಞ ಡಾ. ಸಿ.ಆರ್. ಚಂದ್ರಶೇಖರ ಕಾರ್ಯಕ್ರಮ ಉದ್ಘಾಟಿಸುವರು. ರೈತ ಸಂಘದ ರಾಜಾಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಕಾನಿಪ ರಾಜಾಧ್ಯಕ್ಷ ಶಿವಾನಂದ ತಗಡೂರು, ಶಿವಮೊಗ್ಗ ಎಸ್‌ಪಿ ಜಿ.ಕೆ.ಮಿಥುನ್ ಕುಮಾರ್, ಸಿ.ಎಸ್. ಷಡಾಕ್ಷರಿ, ಪಂಚಾಕ್ಷರಿ, ಡಾ.ಜಸ್ಟಿನ್ ಡಿಸೋಜ, ಎಸ್.ವಿ. ಗುರುರಾಜ್, ಕೆ.ಈ. ಕಾಂತೇಶ್, ಕೆ.ಎಂ.ಮಂಜಪ್ಪ, ಅರ್.ಜಗನ್ಮೋಹನ ರಾವ್, ಡಾ.ಪ್ರಸಾದ್ ಬಂಗೇರಾ ಆಗಮಿಸಲಿದ್ದಾರೆ. ಪ್ರಗತಿ ಆಪಲ್ ಎಜುಕೇಶನ್ ಹರ್ಷವರ್ಧನ ಶೀಲವಂತ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಸಂಜೆ 4 ಗಂಟೆಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಪದ್ಮಶ್ರೀ ಪುರಸ್ಕೃತ, ವಿಶ್ರಾಂತ ಮನೋರೋಗ ತಜ್ಞ ಡಾ. ಸಿ.ಆರ್. ಚಂದ್ರಶೇಖರ ಅಧ್ಯಕ್ಷತೆ ವಹಿಸಲಿದ್ದು, ಡಾ. ವಿ.ವಿರೂಪಾಕ್ಷಪ್ಪ, ಡಾ. ಕೆ.ಎಸ್. ಪವಿತ್ರಾ, ಡಾ.ನಮ್ರತಾ ಉಡುಪ, ಹರ್ಷವರ್ಧನ ಶೀಲವಂತ, ನಪೀಸ್ ಶೇಖ್ ಇತರರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

- - - -17ಕೆಡಿವಿಜಿ32ಃ:

ವಿಜಯಕುಮಾರ ಬಳಿಗಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.