ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ರಾಷ್ಟ್ರೀಕೃತ ಬ್ಯಾಂಕ್‌ಗಳ ಮತ್ತು ಗ್ರಾಮೀಣ ಬ್ಯಾಂಕ್‌ಗಳ ಪ್ರೊಬೆಷನರಿ ಆಫೀಸರ್ಸ್ ಸಹಾಯಕ ಅಧಿಕಾರಿಗಳು ಮತ್ತು ಕ್ಲರಿಕಲ್ ಹುದ್ದೆಗಳ ನೇಮಕ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಮಂಡ್ಯ ಕೃಷಿಕ್ ಸರ್ವೋದಯ ಟ್ರಸ್ಟ್‌ನಿಂದ ತರಬೇತಿ ಹಮ್ಮಿಕೊಳ್ಳಲಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಟ್ರಸ್ಟ್‌ನ ಕಾರ್ಯಾಧ್ಯಕ್ಷ ರಾಮಲಿಂಗಯ್ಯ ಮನವಿ ಮಾಡಿದರು.ಆಸಕ್ತ ಪದವೀಧರ ಉದ್ಯೋಗಾಕಾಂಕ್ಷಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು, ಬ್ಯಾಂಕ್‌ಗಳು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಜನಸಾಮಾನ್ಯರಿಗೆ ತ್ವರಿತ ಹಾಗೂ ಸುಲಭ ರೀತಿಯಲ್ಲಿ ಬ್ಯಾಂಕಿಂಗ್ ಸೌಲಭ್ಯಗಳು ದೊರೆಯುವಂತೆ ಮಾಡಿವೆ. ಬ್ಯಾಂಕ್‌ಗಳು ವಿಲೀನಗೊಂಡ ಮೇಲೆ ಸಾಕಷ್ಟು ಸುಧಾರಿಸಿವೆ. ಉತ್ತಮ ಲಾಭಾಂಶವನ್ನು ತಂದುಕೊಟ್ಟಿವೆ. ಹೀಗಾಗಿ ಮಂಡ್ಯ ಜಿಲ್ಲೆಯ ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಸಲಹೆ ನೀಡಿದರು.
ಕಳೆದ ಒಂದು ದಶಕದಲ್ಲಿ ಸಾರ್ವಜನಿಕ ಬ್ಯಾಂಕ್‌ಗಳು ಗಣನೀಯವಾಗಿ ಸಾಧನೆ ಮಾಡಿವೆ. ನಮ್ಮ ಬ್ಯಾಂಕುಗಳು ಈ ವರ್ಷ ೧೭.೫ ಬಿಲಿಯನ್ ಅಮೇರಿಕನ್ ಡಾಲರ್ಸ್‌ನಷ್ಟು ಲಾಭಗಳಿಸಿವೆ. ಈ ಬ್ಯಾಂಕ್‌ಗಳ ಒಟ್ಟಾರೆ ನಿವ್ವಳ ಲಾಭ ಶೇ.೩೯ ಆಗಿರುತ್ತದೆ. ಇದನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಬೆಳೆಸಲು ವಿದ್ಯಾವಂತ ಪದವೀಧರರನ್ನು ಬ್ಯಾಂಕಿಂಗ್ ವಲಯದಲ್ಲಿ ಕೆಲಸ ಮಾಡಲು ಆಯ್ಕೆ ಮಾಡಿಕೊಳ್ಳುತ್ತಿರುವುದು ಸರ್ವೇಸಾಮಾನ್ಯವಾಗಿದೆ ಎಂದರು.ದೇಶದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾದ ಎಸ್‌ಬಿಐ ಇತ್ತೀಚಿಗಷ್ಟೆ ಖಾಲಿ ಇರುವ ೪ ಸಾವಿರಕ್ಕೂ ಹೆಚ್ಚು ಪ್ರೊಬೆಷನರಿ ಆಫೀಸರ್ಸ್ ಮತ್ತು ೮ ಸಾವಿರಕ್ಕೂ ಹೆಚ್ಚು ಸಹಾಯಕ ಅಧಿಕಾರಿಗಳ ನೇಮಕ ಸೇರಿ ಒಟ್ಟು ೧೨ಸಾವಿರ ಹುದ್ದೆಗಳನ್ನು ತುಂಬಲು ಅರ್ಜಿಗಳನ್ನು ಆಹ್ವಾನಿಸಲಿದೆ. ಈ ಹುದ್ದೆಗಳಲ್ಲಿ ಶೇ.೮೫ ರಷ್ಟು ’ಇಂಜಿನಿಯರಿಂಗ್ ಪದವೀಧರರಿಗೆ’ ಮೀಸಲಿಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರಂತೆ ಕ್ಷೇತ್ರೀಯ ಗ್ರಾಮೀಣ ಬ್ಯಾಂಕ್ ಹಾಗೂ ಇನ್ನಿತರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾಲಿ ಇರುವಂತಹ ಸುಮಾರು ೮,೦೦೦ ಹುದ್ದೆಗಳಿಗೆ ವಿವಿಧ ಹಂತದಲ್ಲಿ ಐಬಿಪಿಎಸ್ ಸಂಸ್ಥೆ ಮುಖಾಂತರ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಖಾಲಿ ಇರುವ ಹುದ್ದೆಗಳನ್ನು ತುಂಬಲು ನಿರ್ದೇಶಿಸಿದೆ. ಈ ಸದಾವಕಾಶವನ್ನು ನಮ್ಮ ಕನ್ನಡಿಗರು ಉಪಯೋಗಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಯನ್ನು ಕೆನರಾ ಬ್ಯಾಂಕ್ ನಿವೃತ್ತ ಜನರಲ್ ಮ್ಯಾನೇಜರ್ ಡಾ.ಎಸ್.ಟಿ.ರಾಮಚಂದ್ರ ಅವರ ಮಾರ್ಗದರ್ಶನದಲ್ಲಿ ಮತ್ತು ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ಆನ್‌ಲೈನ್ ಮತ್ತು ಆಫ್‌ಲೈನ್ ತರಗತಿಗಳನ್ನು ಜೂ.೨ ರಿಂದ ಪ್ರಾರಂಭಿಸಲಾಗುವುದು. ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಳ್ಳಲು ಹಾಗೂ ಮಾಹಿತಿಗೆ ಮೊ.೯೯೦೨೨ ೪೧೭೨೨, ೯೯೪೫೯ ೮೮೩೮೮ ಸಂಪರ್ಕಿಸಿ ಎಂದು ಮನವಿ ಮಾಡಿದರು.ಟ್ರಸ್ಟ್ನ ಕಾರ್ಯದರ್ಶಿ ಡಾ.ಕೆ.ಬಿ.ಬೋರಯ್ಯ, ಜಂಟಿ ಕಾರ್ಯದರ್ಶಿ ಎಸ್.ಟಿ.ರಾಮಚಂದ್ರು, ಖಜಾಂಚಿ ಲೋಕೇಶ್ ಇದ್ದರು.