ಸ್ಥಳೀಯ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ ಮೂಡುಬಿದಿರೆಯ ಪ್ರಸಿದ್ಧ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯು ‘ಲೋಕಲ್ ಟಾಪರ್ಸ್ ಬ್ಯಾಚ್’ (Local Toppers Batch) ಎಂಬ ವಿಶೇಷ ಉಚಿತ ಶಿಕ್ಷಣ ಯೋಜನೆಯನ್ನು ಪ್ರಕಟಿಸಿದೆ.

ಮೂಡುಬಿದಿರೆ: ಸ್ಥಳೀಯ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ ಮೂಡುಬಿದಿರೆಯ ಪ್ರಸಿದ್ಧ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯು ‘ಲೋಕಲ್ ಟಾಪರ್ಸ್ ಬ್ಯಾಚ್’ (Local Toppers Batch) ಎಂಬ ವಿಶೇಷ ಉಚಿತ ಶಿಕ್ಷಣ ಯೋಜನೆಯನ್ನು ಪ್ರಕಟಿಸಿದೆ.ಮೂಡುಬಿದಿರೆ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯಡಿ ಆಯ್ಕೆಯಾಗುವ ಉನ್ನತ 50 ವಿದ್ಯಾರ್ಥಿಗಳಿಗೆ 9ನೇ ತರಗತಿಯಿಂದ 12ನೇ ತರಗತಿಯವರೆಗೆ (PUC) ಉಚಿತ ಶಿಕ್ಷಣ ನೀಡಲಾಗುವುದು. ಪರೀಕ್ಷೆಯ ಮುಖ್ಯಾಂಶಗಳು ಹಾಗೂ ವಿವರಗಳು: ಅರ್ಹತೆ: ಮೂಡುಬಿದಿರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಪ್ರಸ್ತುತ 8ನೇ ಮತ್ತು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಪರೀಕ್ಷಾ ದಿನಾಂಕ: ಅಕ್ಟೋಬರ್ 18, 2026 ಪರೀಕ್ಷಾ ಸ್ಥಳ: ಎಕ್ಸಲೆಂಟ್ ಮೂಡುಬಿದಿರೆ, ಕಲ್ಲಬೆಟ್ಟು ಕ್ಯಾಂಪಸ್ ಆಯ್ಕೆ ಪ್ರಕ್ರಿಯೆ: ಪ್ರವೇಶ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೊದಲ 50 ವಿದ್ಯಾರ್ಥಿಗಳನ್ನು ‘ಲೋಕಲ್ ಟಾಪರ್ಸ್ ಬ್ಯಾಚ್’ಗೆ ಆಯ್ಕೆ ಮಾಡಲಾಗುವುದು.

ಯೋಜನೆಯ ಪ್ರಮುಖ ಸೌಲಭ್ಯಗಳು: ಸಂಪೂರ್ಣ ಉಚಿತ ಶಿಕ್ಷಣ: 9ನೇ ತರಗತಿಯಿಂದ 12ನೇ ತರಗತಿಯವರೆಗೆ ಶೈಕ್ಷಣಿಕ ವೆಚ್ಚವಿಲ್ಲದೆ ಉಚಿತ ಶಿಕ್ಷಣ. ತರಬೇತಿ: ಅನುಭವಿ ಹಾಗೂ ದಕ್ಷ ಶಿಕ್ಷಕ ವೃಂದದಿಂದ ಬೋಧನೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ: NEET ಮತ್ತು JEE ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ ಮತ್ತು ಮಾರ್ಗದರ್ಶನ. ಉತ್ತಮ ಶೈಕ್ಷಣಿಕ ವಾತಾವರಣ: ಒಂದೇ ಸೂರಿನಡಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಶಿಕ್ಷಣದೊಂದಿಗೆ ಗುಣಮಟ್ಟದ ಕಲಿಕಾ ಪರಿಸರ. ನೋಂದಣಿ ಅಥವಾ ಹೆಚ್ಚಿನ ಮಾಹಿತಿಗೆ 99000 99653 / 88677 91059 ಸಂಪರ್ಕಿಸಲು ಕೋರಲಾಗಿದೆ.