ಕನ್ನಡಪ್ರಭ ವಾರ್ತೆ ಭಟ್ಕಳ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಿದ್ಧಾರ್ಥ ಪಪೂ ಕಾಲೇಜು ಭಟ್ಕಳ ಮತ್ತು ಸಿದ್ಧಾರ್ಥ ಸಂಯುಕ್ತ ಪಿಯು ಕಾಲೇಜು, ಶಿರಾಲಿಯ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಸಿದ್ಧಾರ್ಥ ಪಪೂ ಕಾಲೇಜು ಭಟ್ಕಳ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಭಾಗದಲ್ಲಿ ತನ್ಮಯ್ ಶೇಟ್ ಶೇ.೯೮.೩೩, ಪ್ರತೀಕ್ ಚಿಪ್ಕರ್ ಹಾಗೂ ಭಾವನಾ ಪ್ರಭಾಕರ್ ನಾಯ್ಕ ಶೇ.೯೭.೭೬, ಪ್ರತೀಕ್ಷಾ ದೇವಾಡಿಗ ಶೇ.೯೭.೫೦ ಪಡೆದು ಕಾಲೇಜಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಮಹೇಶ್ವರ ನಾಯ್ಕ ಶೇ.೯೨.೦೦, ಸಹನಾ ಆರ್. ನಾಯ್ಕ ಶೇ.೯೦.೧೬, ಪ್ರೀತಮ್ ನಾಯ್ಕ ಶೇ.೮೯.೮೩ ಪಡೆದು ಕಾಲೇಜಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಿಯಾಗಿದ್ದಾರೆ.

ಸಿದ್ಧಾರ್ಥ ಸಂಯುಕ್ತ ಪದವಿ ಪೂರ್ವ ಕಾಲೇಜು ಶಿರಾಲಿಯಲ್ಲಿ ಪರೀಕ್ಷೆಗೆ ಕುಳಿತ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.೧೦೦ ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ ಗಣೇಶಕುಮಾರ್ ಆಚಾರಿ ಶೇ.೯೭.೮೩, ಕೌಶಲ್ಯಾ ಮಾದೇವ ನಾಯ್ಕ ಶೇ.೯೫.೮೩, ಪೂಜಾ ರಾಜು ನಾಯ್ಕ ಶೇ.೯೫.೬೭ ಪಡೆದು ಕಾಲೇಜಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನಿಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪ್ರತೀಶ ಪಿ.ಎನ್. ಶೇ.೯೩.೧೭, ಐಶ್ವರ್ಯ ಎನ್. ನಾಯ್ಕ ಮತ್ತು ಕೃತೀಕಾ ಆರ್. ಶೇ.೯೨.೩೩, ವಿನಯ್ ಆರ್. ಸಿ. ಶೇ.೯೦.೮೩ ಪಡೆದು ಪ್ರಥಮ, ದ್ವಿತೀಯ ಹಾಗೂ ತೃತೀಯರಾಗಿದ್ದಾರೆ. ಭೌತಶಾಸ್ತ್ರ ವಿಷಯದಲ್ಲಿ ೬ ವಿದ್ಯಾರ್ಥಿಗಳು, ರಸಾಯನ ಶಾಸ್ತ್ರದಲ್ಲಿ ೧ ವಿದ್ಯಾರ್ಥಿ, ಗಣಿತ ವಿಷಯದಲ್ಲಿ ೧೦ ವಿದ್ಯಾರ್ಥಿಗಳು, ಗಣಕಯಂತ್ರ ವಿಜ್ಞಾನ ವಿಷಯದಲ್ಲಿ ೧೧ ವಿದ್ಯಾರ್ಥಿಗಳು, ಜೀವಶಾಸ್ತ್ರ ವಿಷಯದಲ್ಲಿ ೪ ವಿದ್ಯಾರ್ಥಿಗಳು, ಕನ್ನಡ ವಿಷಯದಲ್ಲಿ ೮ ವಿದ್ಯಾರ್ಥಿಗಳು ಹಿಂದಿ ವಿಷಯದಲ್ಲಿ ೨ ವಿದ್ಯಾರ್ಥಿಗಳು ೧೦೦ ಕ್ಕೆ ೧೦೦ ಅಂಕ ಪಡೆದು ಸಾಧನೆಗೈದಿದ್ದಾರೆ. ಪರೀಕ್ಷೆಗೆ ಕುಳಿತ ಒಟ್ಟೂ ವಿದ್ಯಾರ್ಥಿಗಳಲ್ಲಿ ೧೭೪ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೨೭೧ ವಿದ್ಯಾರ್ಥಿಗಳು ಪ್ರಥಮ ದರ್ಜೆ, ೧೨ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.