ಸಾರಾಂಶ
2024- 25ನೇ ಸಾಲಿನ ಕೆಸಿಇಟಿ ಫಲಿತಾಂಶ ಪ್ರಕಟಿಸಿದ್ದು, ದಾವಣಗೆರೆಯ ಸಿದ್ಧಗಂಗಾ ಪದವಿಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ನೀಡಿ ಅಮೋಘ ಸಾಧನೆಗೈದಿದ್ದಾರೆ. ಸಚಿನ್ ರಮೇಶ್ ಮಳಗಿ ಕೃಷಿ ವಿಜ್ಞಾನ ವಿಭಾಗದಲ್ಲಿ 16ನೇ ರ‍್ಯಾಂಕ್ ಪಡೆದರೆ ಸಂಜನಾ ರಾಮಪ್ಪ ಬಕ್ರಿ, ಎನ್.ಎಂ. ಸಾಗರ್, ತರನುಂ ಸುಲ್ತಾನ ಕ್ರಮವಾಗಿ 295, 502, 949ನೇ ರ‍್ಯಾಂಕ್ ಪಡೆದು ಸಂಸ್ಥೆಗೆ ಪೋಷಕರಿಗೆ ಕೀರ್ತಿ ತಂದಿದ್ದಾರೆ.
ಕನ್ನಡಪ್ರಭ ವಾರ್ತೆ, ದಾವಣಗೆರೆ 2024- 25ನೇ ಸಾಲಿನ ಕೆಸಿಇಟಿ ಫಲಿತಾಂಶ ಪ್ರಕಟಿಸಿದ್ದು, ದಾವಣಗೆರೆಯ ಸಿದ್ಧಗಂಗಾ ಪದವಿಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ನೀಡಿ ಅಮೋಘ ಸಾಧನೆಗೈದಿದ್ದಾರೆ.
ಸಚಿನ್ ರಮೇಶ್ ಮಳಗಿ ಕೃಷಿ ವಿಜ್ಞಾನ ವಿಭಾಗದಲ್ಲಿ 16ನೇ ರ‍್ಯಾಂಕ್ ಪಡೆದರೆ ಸಂಜನಾ ರಾಮಪ್ಪ ಬಕ್ರಿ, ಎನ್.ಎಂ. ಸಾಗರ್, ತರನುಂ ಸುಲ್ತಾನ ಕ್ರಮವಾಗಿ 295, 502, 949ನೇ ರ‍್ಯಾಂಕ್ ಪಡೆದು ಸಂಸ್ಥೆಗೆ ಪೋಷಕರಿಗೆ ಕೀರ್ತಿ ತಂದಿದ್ದಾರೆ.ಪಶು ವೈದ್ಯಕೀಯ ವಿಭಾಗದಲ್ಲಿ ಜೆ.ಆರ್. ಸಂಜಯ್ 134ನೇ ರ‍್ಯಾಂಕ್, ಪಿ.ಹೇಮಂತ್ 379ನೇ ರ‍್ಯಾಂಕ್, ಟಿ.ಆರ್.ಹೇಮಂತ್ 539ನೇ ರ‍್ಯಾಂಕ್ ಶ್ರೀಕಾಂತ್ ಹಾವೇರಿ 880 ನೇ ರ‍್ಯಾಂಕ್ ಪಡೆದು ಅದ್ಭುತ ಸಾಧನೆ ಮಾಡಿದ್ದಾರೆ.
ಪಶು ವೈದ್ಯಕೀಯ ಕೃಷಿ ವಿಜ್ಞಾನ ತೋಟಗಾರಿಕೆ ಹಾಗೂ ಎಂಜಿನಿಯರಿಂಗ್ ವಿಭಾಗಗಳಿಗೆ ಕಾಲೇಜಿನಿಂದ 48 ವಿದ್ಯಾರ್ಥಿಗಳು 3000 ದೊಳಗೆ ರ‍್ಯಾಂಕ್ ಪಡೆದು ಆಯ್ಕೆಯಾಗಿದ್ದಾರಲ್ಲದೇ, 5000 ಒಳಗಿನ ರ‍್ಯಾಂಕ್‌ನವರು ಒಟ್ಟು 63 ವಿದ್ಯಾರ್ಥಿಗಳು ಇರುತ್ತಾರೆ. ಹತ್ತು ಸಾವಿರದ ಒಳಗೆ ಒಟ್ಟು 109 ವಿದ್ಯಾರ್ಥಿಗಳು ರ‍್ಯಾಂಕ್ ಪಡೆದಿದ್ದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.ಈ ಎಲ್ಲ ವಿದ್ಯಾರ್ಥಿಗಳ ಸಾಧನೆಯನ್ನು ಅಭಿಮಾನ ಹಾಗೂ ಗೌರವದೊಂದಿಗೆ ಅಭಿನಂದಿಸಿದ ಸಂಸ್ಥೆಯ ಮುಖ್ಯಸ್ಥರಾದ ಡಾ.ಜಸ್ಟಿನ್ ಡಿಸೌಜಾ ರವರು ಈ ಎಲ್ಲಾ ಮಕ್ಕಳ ಮುಂದಿನ ವೃತ್ತಿ ಶಿಕ್ಷಣದಲ್ಲಿ ಅವರ ಭವಿಷ್ಯ ಮತ್ತಷ್ಟು ಉಜ್ವಲವಾಗಲಿ ಎಂದು ಹಾರೈಸಿದರು.
ಪದವಿಪೂರ್ವ ಕಾಲೇಜಿನ ನಿರ್ದೇಶಕರಾದ ಡಾ.ಡಿ.ಎಸ್.ಜಯಂತ್, ಕಾರ್ಯದರ್ಶಿ ಡಿ.ಎಸ್.ಹೇಮಂತ್ ಡಿ ಎಸ್ ಹಾಗೂ ಅಧ್ಯಕ್ಷ ಡಿ.ಎಸ್.ಪ್ರಶಾಂತ್ ಡಿ.ಎಸ್. ಶುಭ ಕೋರಿದರು. ಕಾಲೇಜಿನ ಪ್ರಾಚಾರ್ಯರು , ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ, ಅದ್ಭುತ ಸಾಧನೆ ಮಾಡಿ ಸಂಸ್ಥೆಗೆ ಕೀರ್ತಿ ತಂದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.- - - -2ಕೆಡಿವಿಜಿ49ಃ: ಪಿ.ಹೇಮಂತ್
-B2ಕೆಡಿವಿಜಿ50ಃ: ಟಿ.ಆರ್.ಹೇಮಂತ್-2ಕೆಡಿವಿಜಿ51ಃ: ಸಚಿನ್ ರಮೇಶ ಮಾಳಗಿ
-2ಕೆಡಿವಿಜಿ52ಃ: ಎನ್.ಎಂ.ಸಾಗರ್-2ಕೆಡಿವಿಜಿ53ಃ: ಸಂಜನ ರಾಮಪ್ಪ
-2ಕೆಡಿವಿಜಿ54ಃ: ಜೆ.ಆರ್.ಸಂಜಯ್-2ಕೆಡಿವಿಜಿ55ಃ: ಶ್ರೀಕಾಂತ್ ಹಾವೇರಿ
-2ಕೆಡಿವಿಜಿ56ಃ: ತರನಂ ಸುಲ್ತಾನ- - -