ಎಕ್ಸಲೆಂಟ್ ಸಿಬಿಎಸ್ಇ ಶಾಲೆ ಪ್ರಾರಂಭೋತ್ಸವ

| Published : Jun 08 2024, 12:32 AM IST

ಸಾರಾಂಶ

ಕಳೆದ ಸಾಲಿನ ಹತ್ತನೆಯ ತರಗತಿಯಲ್ಲಿ ಅತ್ಯುನ್ನತ ಅಂಕ ಗಳಿಸಿದ ಸುವಿತ್ ಭಂಡಾರಿ, ಸುಯೋಗ್‌ ಅಂಚನ್, ಪೃಥ್ವಿ ಪ್ರಕಾಶ್ ಭಂಡಾರಿ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಎಕ್ಸಲೆಂಟ್ ಸಿ.ಬಿ.ಎಸ್.ಇ ಶಾಲಾ ಪ್ರಾರಂಭೋತ್ಸವ ಸೋಮವಾರ ಶಾಲಾ ಆವರಣದಲ್ಲಿ ನೆರವೇರಿತು. ಮೂಡುಬಿದಿರೆಯ ಖ್ಯಾತ ಲೆಕ್ಕ ಪರಿಶೋಧಕ ಉಮೇಶ್‌ ರಾವ್‌ ಮಿಜಾರು ಮಾತನಾಡಿ, ಕಷ್ಟವನ್ನುಎದುರಿಸುವ ಸಾಮರ್ಥ್ಯ, ಸಮಯಪ್ರಜ್ಞೆ ಹಾಗೂ ಶಾಲಾ ನಿಯಮಗಳನ್ನು ಸರಿಯಾಗಿ ವಿದ್ಯಾರ್ಥಿಗಳು ಪಾಲಿಸಿದರೆ ಗೆಲುವು ಖಂಡಿತ ಎಂದರು.

ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್‌ ಮಾತನಾಡಿ, ಶಾಲೆಯಲ್ಲಿ ಪೂರಕವಾದ ಕಲಿಕಾ ವಾತಾವರಣ ಇದ್ದಾಗ ಮಕ್ಕಳು ಉತ್ತಮ ರೀತಿಯಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.

ಕಳೆದ ಸಾಲಿನ ಹತ್ತನೆಯ ತರಗತಿಯಲ್ಲಿ ಅತ್ಯುನ್ನತ ಅಂಕ ಗಳಿಸಿದ ಸುವಿತ್ ಭಂಡಾರಿ, ಸುಯೋಗ್‌ ಅಂಚನ್, ಪೃಥ್ವಿ ಪ್ರಕಾಶ್ ಭಂಡಾರಿ ಅವರನ್ನು ಸನ್ಮಾನಿಸಲಾಯಿತು. ಇಸ್ರೋ ಯುವಿಕಕ್ಕೆ ರಾಷ್ಟ್ರಮಟ್ಟದ ಯುವ ವಿಜ್ಞಾನಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಸಂಸ್ಥೆಯ ಹಳೆಯ ವಿದ್ಯಾರ್ಥಿನಿ ಮೌಲ್ಯ. ವೈ. ಆರ್. ಜೈನ್‌ ಅವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಯುವರಾಜ್‌ ಜೈನ್, ಶಾಲಾ ಆಡಳಿತ ನಿರ್ದೇಶಕ ಡಾ. ಬಿ.ಪಿ ಸಂಪತ್‌ಕುಮಾರ್, ಶೈಕ್ಷಣಿಕ ನಿರ್ದೇಶಕ ಪುಪ್ಪರಾಜ್ ಬಿ., ಶಾಲಾ ಪ್ರಾಂಶುಪಾಲ ಸುರೇಶ ಹಾಗೂ ಶೈಕ್ಷಣಿಕ ಸಂಯೋಜಕ ಶ್ರೀಪ್ರಸಾದ್ ಉಪಸ್ಥಿತರಿದ್ದರು. ಸಿ.ಬಿ.ಎಸ್.ಇ ಸಂಯೋಜಕಿ ವಿಮಲಾ ಶೆಟ್ಟಿ ನಿರೂಪಿಸಿದರು. ಶಿಕ್ಷಕಿ ಪದ್ಮಾವತಿ ವಂದಿಸಿದರು.