ದೂರಸಂಪರ್ಕ ವಿಭಾಗದ ಅಂತಿಮ ವರ್ಷದ ಡಿಪ್ಲೋಮಾ ವಿದ್ಯಾರ್ಥಿನಿಯರ ಉತ್ತಮ ಸಾಧನೆ

| Published : Apr 05 2025, 12:47 AM IST

ದೂರಸಂಪರ್ಕ ವಿಭಾಗದ ಅಂತಿಮ ವರ್ಷದ ಡಿಪ್ಲೋಮಾ ವಿದ್ಯಾರ್ಥಿನಿಯರ ಉತ್ತಮ ಸಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಾಶುಗರ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಾಜಿಯಲ್ಲಿ ಜರುಗಿದ Technovision-25 ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಈಚೆಗೆ ನಡೆದ ರಾಜ್ಯಮಟ್ಟದ ತಂತ್ರಜ್ಞಾನ ಮಾದರಿಗಳ ಸ್ಪರ್ಧೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಹಿರಾಶುಗರ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಾಜಿಯಲ್ಲಿ ಜರುಗಿದ Technovision-25 ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಈಚೆಗೆ ನಡೆದ ರಾಜ್ಯಮಟ್ಟದ ತಂತ್ರಜ್ಞಾನ ಮಾದರಿಗಳ ಸ್ಪರ್ಧೆ ನಡೆಯಿತು.

ಬೆಳಗಾವಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯ ದೂರಸಂಪರ್ಕ ವಿಭಾಗದ ಅಂತಿಮ ವರ್ಷದ ಡಿಪ್ಲೋಮಾ ವಿದ್ಯಾರ್ಥಿನಿಯರಾದ ವಾಣಿಶ್ರೀ ತಂಡವು IOT BASED AUTONOMOUS TRAIN SAFETY ವಸ್ತು ಪ್ರದರ್ಶನ ಸ್ಪರ್ಧೆ ಹಾಗೂ IDEA PRESENTATION ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಹಾಗೂ ರೇಣಕಾ ಸುತಾರ ಅವರು POSTER PRESENTATION ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಸಂಸ್ಥೆಯ ಪ್ರಾಚಾರ್ಯ ವಾಸುದೇವ ಕೆ.ಅಪ್ಪಾಜಿಗೋಳ ಹಾಗೂ ದೂರಸಂಪರ್ಕ ವಿಭಾಗದ ಮುಖ್ಯಸ್ಥೆ ನಸೀಮಾ ಮುನ್ಷಿ ಅಭಿನಂದಿಸಿದ್ದಾರೆ. ಮಾರ್ಗದರ್ಶಕರದ ಮಹೇಶ ತುಬಾಕಿ ಅವರನ್ನು ಸಹ ಪ್ರಾಚಾರ್ಯರು ಹಾಗೂ ವಿಭಾಗ ಮುಖ್ಯಸ್ಥರು ಅಭಿನಂದಿಸಿದ್ದಾರೆ.