ನೀಟ್‌ ಪರೀಕ್ಷೆಯಲ್ಲಿ ಸರ್ವಜ್ಞ ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ

| Published : Jun 06 2024, 12:31 AM IST

ನೀಟ್‌ ಪರೀಕ್ಷೆಯಲ್ಲಿ ಸರ್ವಜ್ಞ ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿ ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಕಾಲೇಜಿನ ವಿದ್ಯಾರ್ಥೀಗಳು ನೀಟ್‍ನಲ್ಲಿ ಅಮೋಘ ಸಾಧನೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಇಲ್ಲಿನ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಕಾಲೇಜಿನ ವಿದ್ಯಾರ್ಥೀಗಳು ನೀಟ್‍ನಲ್ಲಿ ಅಮೋಘ ಸಾಧನೆ ಮಾಡಿದ್ದಾರೆ.

ಸರ್ವಜ್ಞ ಕಾಲೇಜು ಮಕ್ಕಳ ನೀಟ್ ಪರೀಕ್ಷೆಯಲ್ಲಿನ ಸಾಧನೆ ಎಲ್ಲರು ನೋಡುವಂತ ಮಾಡಿದೆ. ಈ ಕಾಲೇಜಿನ ಮೊಹಮ್ಮದ್ ಮುಜಾಮಿಲ್ 667 ಅಂಕ ಪಡೆದು ಕಾಲೇಜಿಗೆ ಪ್ರಥಮನಾಗಿ, ಸಂಧ್ಯಾ 651 ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ಪ್ರಮೋದ್ ಕುಮಾರ 646 ಅಂಕ ಪಡೆದು ತೃತೀಯ ಸ್ಥಾನದಲ್ಲಿ ಮಿಂಚಿದ್ದಾರೆ. ಕಾಲೇಜಿನ ಅಧಿಕ ವಿದ್ಯಾರ್ಥಿಗಳು “ನೀಟ್” ಪರೀಕ್ಷೆಯಲ್ಲಿ ಪಾಸಾಗಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ.

ಸರ್ವಜ್ಞ ಕಾಲೇಜಿನ ನೀಟ್ 2024 ರಲ್ಲಿ ಮೊಹಮ್ಮದ್ ಮುಜಾಮಿಲ್: 667, ಸಂಧ್ಯಾ ಬಸನಗೌಡ: 651, ಪ್ರಮೋದ್ ಕುಮಾರ: 646, ಭಾವನಾ ಚಿತ್ರಶೇಖರ ಮುಲಗೆ: 601, ಸುಮಿತ್ ನಾಮದೇವ: 590, ರಮೇಶ್ ಅಶೋಕರೆಡ್ಡಿ: 579, ಅತುಲ್ಯಾ: 538, ಮಿರಜಾ ಕಾಸೀಫ್ ಬೆಗ್: 536, ಬಸನಗೌಡÀ ವೆಂಕಟರೆಡ್ಡಿ: 510 ಸಾಧನೆ ಮಾಡಿದ ಕಾಲೇಜಿನ ಟಾಪ್‌ ವಿದ್ಯಾರ್ಥಿಗಳಾಗಿದ್ದಾರೆ.

ಜೆ.ಇ.ಇ. ಮೇನ್ಸ್ ಹಾಗೂ ಸಿ.ಇ.ಟಿ ಪರೀಕ್ಷೆಗೆ ತಯಾರಿ ಮಾಡುವ ಗುರಿಯನ್ನು ಇಟ್ಟುಕೊಂಡು ಐಐಟಿಯನ್ ಅಭಿಷೇಕ್ ಚನ್ನಾರಡ್ಡಿ ಪಾಟೀಲ ಅವರ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಬೋಧನೆಗಾಗಿ ಮತ್ತು ಅವರ ಮಾರ್ಗದರ್ಶನಕ್ಕಾಗಿ ಹಾಗೂ ಪ್ರತಿಭಾನ್ವಿತ ನುರಿತ ಶಿಕ್ಷಕರು ಸರ್ವಜ್ಞ ಕಾಲೇಜಿನಲ್ಲಿ ಲಭ್ಯ ವಿರುವದರಿಂದ ಈ ಸಾಧನೆ ಸಾಧ್ಯವಾ್ತು ಎಂದು ನೀಟ್‌ ಸಾಧಕರು ಹೇಳಿದ್ದಾರೆ.

ಸರ್ವಜ್ಞ ಕಾಲೇಜಲ್ಲಿ ನನಗೆ ಅತ್ಯುತ್ತಮ ತರಬೇತಿ ನೀಡಿದ ಪರಿಣಾಮ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ವಿಧಾನದಿಂದ ಹಾಗೂ ಚನ್ನರೆಡ್ಡಿ ಪಾಟೀಲರ ಯೋಜನೆ ಮತ್ತು ಗುಣಮಟ್ಟದ ಶಿಕ್ಷಣ ಮತ್ತು ತಂದೆ-ತಾಯಿಯ ಸಹಕಾರ ಹಾಗೂ ನನ್ನ ನಿರಂತರ ಪರಿಶ್ರಮಕ್ಕೆ ಇದೊಂದು ಉತ್ತಮ ಸಾಧನೆ, ತುಂಬ ಖುಷಿಯಾಗುತ್ತಿದ ಎಂದು 667 ನೀಟ್ ಅಂಕ ಪಡೆದು ಸಾಧನೆ ಮಾಡಿದ ಮೊಹಮ್ಮದ್ ಮುಜಾಮಿಲ್ ಹೇಳಿದ್ದಾನೆ.

ಕಾಲೇಜಿನ ಮಕ್ಕಳ ಈ ಅಮೋಘ ಸಾಧನೆಗೆ ಅಧ್ಯಕ್ಷರಾದ ಪ್ರೊ. ಚೆನ್ನರೆಡ್ಡಿ ಪಾಟೀಲ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಉನ್ನತ ಗುರಿ ಮತ್ತು ಪ್ರಾಮಾಣಿಕ ಪ್ರಯತ್ನ ಇದ್ದರೆ ಸಾಧನೆ ಸಾಧ್ಯ ಎಂಬುದನ್ನು ನಮ್ಮ ವಿದ್ಯಾರ್ಥಿಗಳು ಪುನಃ ಸಾಬೀತು ಪಡಿಸಿದ್ದಾರೆ.ಪ್ರತಿವರ್ಷ ಹಲವಾರು ವಿದ್ಯಾರ್ಥಿಗಳು ನಮ್ಮ ಕಾಲೇಜಿನಿಂದ ಡಾಕ್ಟರ್, ಇಂಜಿನಿಯರ್ ಆಗುವ ಕನಸನ್ನು ನನಸಾಗಿಸುತ್ತಿದ್ದಾರೆ. ವಿದ್ಯಾರ್ಥಿಗಳು ಯಾವುದೇ ಒತ್ತಡಕ್ಕೆ ಒಳಗಾಗದೆ ಬದಲು ಉತ್ತಮ ಯೋಜನೆ ಮಾಡಿಕೊಂಡು ಅಧ್ಯಯನ ನಡೆಸಬೇಕು ಎಂದು ಚೆನ್ನಾರೆಡ್ಡಿ ಪಾಟೀಲರು ಸಲಹೆ ನೀಡಿದ್ದಾರೆ.

ತಮ್ಮ ಕಾಲೇಜಲ್ಲಿ ಪ್ರಥಮ ಪಿಯುಸಿ ದಿಂದನೆ ಪಿಸಿಎಮ್‍ಬಿ ಪಠ್ಯದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ನಿರಂತರ ತಯಾರಿ ಮಾಡಲಾಗುತ್ತಿದೆ. ನ್ಯಾ. ಶಿವರಾಜ ಪಾಟೀಲ ಅವರ ಆಶೀರ್ವಾದ ಹಾಗೂ ಶ್ರೇಷ್ಠ ನುರಿತ ಉಪನ್ಯಾಸಕ ವರ್ಗದಿಂದ ಭೋಧನೆ ಇವುಗಳ ಸಂಗಮದಿಂದ ಕಾಲೇಜು ಮಕ್ಕಳ ಅಧ್ಯಯನ ಸಾಗಿದೆ. ನಮ್ಮ ಭಾಗದ ವಿದ್ಯಾರ್ಥಿಗಳು ಯಾವುದರಲ್ಲಿಯೂ ಕಡಿಮೆ ಇಲ್ಲ ಎಂಬುದಕ್ಕೆ ಕಾಲೇಜಿನ ಸಾಧಕರೆ ಸಾಕ್ಷಿ ಎಂದು ಚೆನನರೆಡ್ಡಿ ಹರ್ಷ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸರ್ವಜ್ಞ ಕಾಲೇಜಿನ ಅಧ್ಯಕ್ಷರಾದ ಗೀತಾ ಪಾಟೀಲ ಮತ್ತು ಐಐಟಿ ಬಾಂಬೆಯಲ್ಲಿ ಎಮ್. ಎಸ್. ರಸಾಯನಶಾಸ್ತ್ರ ಪದವಿಧರರಾದ ಹಾಗೂ ಕಾಲೇಜಿನ ನಿರ್ದೇಶಕರಾದ ಶ್ರೀ ಅಭಿಷೇಕ್ ಚನ್ನಾರಡ್ಡಿ ಪಾಟೀಲ, ವಿನುತಾ ಆರ್.ಬಿ., ಪ್ರಶಾಂತ ಕುಲಕರ್ಣಿ, ಕರುಣೇಶ್ ಹಿರೇಮಠ್, ಶಿವಶಂಕರ ಡೆರೆದ್, ಗುರುರಾಜ ಕುಲಕರ್ಣಿ ಮತ್ತು ಉಪನ್ಯಾಸಕರು ಅಭಿನಂದಿಸಿ ಹರ್ಷವ್ಯಕ್ತಪಡಿಸಿದ್ದಾರೆ.