ಸಾರಾಂಶ
ಬೆಂಗಳೂರು: ನಗರದ ಕೆಂಪೇಗೌಡ ಲೇಔಟ್ ನಿವಾಸಿ ಪ್ರಕಾಶ್ ಹಾಗೂ ಚೈತ್ರ ಪ್ರಕಾಶ್ ದಂಪತಿಯ ಪುತ್ರಿ ಪ್ರೇರಣಾ (2) ತನ್ನ ವಿಶೇಷ ಗ್ರಹಿಕಾ ಶಕ್ತಿಯಿಂದ ‘ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ " ಸಂಸ್ಥೆಯಿಂದ ಸೂಪರ್ ಟ್ಯಾಲೆಂಟೆಡ್ ಕಿಡ್ ಎಂದು ಗುರುತಿಸಲ್ಪಟ್ಟು ‘ಪ್ರೈಡ್ ಆಫ್ ವರ್ಲ್ಡ್’ ಪ್ರಶಸ್ತಿ ಪಡೆದಿದ್ದಾರೆ.
ಈಕೆ 1-10 ರವರೆಗಿನ ಸಂಖ್ಯೆಗಳನ್ನು ಆಂಗ್ಲ ಮತ್ತು ಕನ್ನಡ ಭಾಷೆಗಳಲ್ಲಿ ಗುರುತಿಸುವುದು ಮತ್ತು ಪಠಿಸುವುದು, ದೇಹದ ಅಂಗಾಂಗ ಗುರುತಿಸುವುದು, ರಾಷ್ಟ್ರೀಯ ಚಿಹ್ನೆಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ವಾರದ ದಿನಗಳು, ಎಂಟು ಸಂಗೀತ ಸ್ವರಗಳು, ಕನ್ನಡ, ಆಂಗ್ಲ ಭಾಷೆಯ ವರ್ಣಮಾಲೆ ಗುರುತಿಸುವ ಮೂಲಕ ಚಕಿತಗೊಳಿಸುತ್ತಾಳೆ. ಶ್ಲೋಕ ಪಠಣ ಸೇರಿ ಇನ್ನಿತರ ಕೌಶಲ್ಯ ಹೊಂದಿದ್ದಾಳೆ.
ಹಿಂದೆ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’, ‘ಕರ್ನಾಟಕ ಬುಕ್ ಆಫ್ ರೆಕಾರ್ಡ್’ ಸಂಸ್ಥೆ (ವೇಗದ ಕಲಿಕೆಯ ಸಾಮರ್ಥ್ಯ) ಮತ್ತು ‘ಜಾಕಿ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆ (ಅಸಾಧಾರಣ ಗ್ರಹಿಕಾ ಶಕ್ತಿ ಪ್ರತಿಭೆ )ಎಂದು ಗುರುತಿಸಿ ಪ್ರಮಾಣ ಪತ್ರ ನೀಡಿದೆ.