ಸಾರಾಂಶ
ಸಂಪತ್ತು ಆರೋಗ್ಯವನ್ನು ಹಾಳು ಮಾಡುತ್ತದೆ. ಆರೋಗ್ಯವೇ ಸಂಪತ್ತು ಎಂಬುದನ್ನು ಗಮನದಲ್ಲಿಟ್ಟುಕೊಂಡು ಜೀವನ ನಡೆಸಬೇಕು ಎಂದು ಮಾಜಿ ಶಾಸಕ ಎ. ಟಿ. ರಾಮಸ್ವಾಮಿ ಅಭಿಪ್ರಾಯಪಟ್ಟರು. ಇಂದು ವೈದ್ಯಕೀಯ ಕ್ಷೇತ್ರದಲ್ಲಿ ನೂತನ ಅವಿಷ್ಕಾರಗಳು ಬರುತ್ತಿವೆ. ಎಲ್ಲ ರೋಗಕ್ಕೂ ಉತ್ತಮವಾದ ಚಿಕಿತ್ಸೆ ಇದೆ. ಪರಿಸರ ನಾಶ, ವಿಷಗಾಳಿ, ನೀರು ಕಲುಷಿತ, ಆಹಾರ ಬೆಳೆಯುವ ಮಣ್ಣಿಗೆ ಅತಿಯಾಗಿ ರಸಾಯನಿಕ ಬಳಕೆ, ಎಲ್ಲ ವಸ್ತುಗಳಲ್ಲೂ ಕಲಬೆರಕೆಯಿಂದ ಆರೋಗ್ಯ ಹಾಳಾಗಲು ಕಾರಣವಾಗುತ್ತಿದೆ ಎಂದರು.
ಕನ್ನಡಪ್ರಭ ವಾರ್ತೆ ಆಲೂರು
ಸಂಪತ್ತು ಆರೋಗ್ಯವನ್ನು ಹಾಳು ಮಾಡುತ್ತದೆ. ಆರೋಗ್ಯವೇ ಸಂಪತ್ತು ಎಂಬುದನ್ನು ಗಮನದಲ್ಲಿಟ್ಟುಕೊಂಡು ಜೀವನ ನಡೆಸಬೇಕು ಎಂದು ಮಾಜಿ ಶಾಸಕ ಎ. ಟಿ. ರಾಮಸ್ವಾಮಿ ಅಭಿಪ್ರಾಯಪಟ್ಟರು.ಮಗ್ಗೆ ಇನ್ಸ್‌ಪೈರ್ ಇಂಟರ್‌ನ್ಯಾಷನಲ್ ಶಾಲೆ ಆವರಣದಲ್ಲಿ ರಾಧಮ್ಮ ಜನಸ್ಪಂದನ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ ಉಚಿತ ವೈದ್ಯಕೀಯ ಶಿಬಿರ ಉದ್ಘಾಟಿಸಿ ಮಾತನಾಡಿ, ಇಂದು ವೈದ್ಯಕೀಯ ಕ್ಷೇತ್ರದಲ್ಲಿ ನೂತನ ಅವಿಷ್ಕಾರಗಳು ಬರುತ್ತಿವೆ. ಎಲ್ಲ ರೋಗಕ್ಕೂ ಉತ್ತಮವಾದ ಚಿಕಿತ್ಸೆ ಇದೆ. ಪರಿಸರ ನಾಶ, ವಿಷಗಾಳಿ, ನೀರು ಕಲುಷಿತ, ಆಹಾರ ಬೆಳೆಯುವ ಮಣ್ಣಿಗೆ ಅತಿಯಾಗಿ ರಸಾಯನಿಕ ಬಳಕೆ, ಎಲ್ಲ ವಸ್ತುಗಳಲ್ಲೂ ಕಲಬೆರಕೆಯಿಂದ ಆರೋಗ್ಯ ಹಾಳಾಗಲು ಕಾರಣವಾಗುತ್ತಿದೆ. ಇಂದು ರೋಗಗಳು ಹೆಚ್ಚುತ್ತಿರುವುದಕ್ಕೆ ನಾವೆಲ್ಲರೂ ಕಾರಣ. ನಾವು ತಕ್ಷಣದಿಂದ ಜಾಗೃತರಾಗದಿದ್ದರೆ ಭವಿಷ್ಯದಲ್ಲಿ ಘೋರವಾದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪರಮೇಶ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ತಪಾಸಣೆ ಶಿಬಿರಗಳು ನಡೆಯುವುದರಿಂದ ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಆಲೂರು ರಾಧಮ್ಮ ಜನಸ್ಪಂದನ ವೇದಿಕೆ ಅಧ್ಯಕ್ಷ ಹೇಮಂತಕುಮಾರ್ ಅವರು ತಮ್ಮ ತಾಯಿಯವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಉದ್ದೇಶದಿಂದ, ಪ್ರತಿ ವರ್ಷ ಮನೆ ಬಾಗಿಲಿಗೆ ಉಚಿತ ಆರೋಗ್ಯ ಮತ್ತು ವೈದ್ಯಕೀಯ ಶಿಬಿರ ಏರ್ಪಡಿಸುತ್ತಿರುವುದು ಶ್ಲಾಘನೀಯ ಎಂದರು. ಡಾ. ಶಿವಸ್ವಾಮಿಯವರು ಮಾತನಾಡಿ, ಅನಾರೋಗ್ಯವು ಶ್ರೀಮಂತ, ಬಡವ ಎಂಬುದನ್ನು ಅರಿಯವುದಿಲ್ಲ. ಉಚಿತ ವೈದ್ಯಕೀಯ ಶಿಬಿರಗಳು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವುದರಿಂದ ಬಡ, ಮಧ್ಯಮ ವರ್ಗದವರ ಪಾಲಿಗೆ ಆಶಾಕಿರಣವಾಗಿದೆ. ಹಲವು ಪರೀಕ್ಷೆಗಳಿಂದ ಕಾಯಿಲೆ ಪ್ರಾರಂಭದಲ್ಲಿ ಗೊತ್ತಾದರೆ ಶಾಶ್ವತ ಗುಣಮುಖ ಮಾಡಬಹುದು. ಹೆಚ್ಚಿನ ಚಿಕಿತ್ಸೆಗೆ ಪ್ರಧಾನಮಂತ್ರಿ ಆರೋಗ್ಯ ಯೋಜನೆಯಲ್ಲಿ ಒಂದು ಕುಟುಂಬಕ್ಕೆ ೫ ಲಕ್ಷ ರು. ವರೆಗೆ ಉಚಿತ ಚಿಕಿತ್ಸೆ ದೊರಕಲಿದೆ ಎಂದರು. ಶಿಬಿರದಲ್ಲಿ ಇನ್ಸ್‌ಪೈರ್ ಇಂಟರ್‌ನ್ಯಾಷನಲ್ ಸಂಸ್ಥಾಪಕ ಅಶೋಕ್, ಕ್ಷೇತ್ರ ಶಿಕ್ಷಣಾಧಿಕಾರಿ ಎ. ಜೆ. ಕೃಷ್ಣೇಗೌಡ, ಪ್ರೊ. ರಾಜಶೇಖರ್, ಆದಿಚುಂಚನಗಿರಿ ವಿಶ್ವವಿದ್ಯಾಲಯ ನ್ಯೂರೋ ಸರ್ಜನ್ ಹರ್ಷ, ಸ್ಪರ್ಷ ಆಸ್ಪತ್ರೆ ವೈದ್ಯ ಸುರೇಶ್, ಪಿಡಿಒ ಸಣ್ಣಪ್ಪ, ನಾಯಕರಹಳ್ಳಿ ಮಂಜೇಗೌಡ, ಶ್ರೀಕಾಂತ, ಪಿಆರ್‌ಒ ಶಿವಕುಮಾರ್, ಆದಿಚುಂಚನಗಿರಿ ವೈದ್ಯರು ಭಾಗವಹಿಸಿದ್ದರು.