ರಂಜಾನ್‌ ಶುಭಾಶಯ ವಿನಿಮಯ

| Published : Apr 01 2025, 12:46 AM IST

ಸಾರಾಂಶ

ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಿದರು. ತದನಂತರ ಒಬ್ಬರಿಗೊಬ್ಬರು ಆಲಿಂಗನ ಮಾಡಿಕೊಳ್ಳುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ದೇಶದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಸಹೋದರತ್ವವು ನೆಲೆಸಲಿ. ಈ ಬಾರಿ ಉತ್ತಮ ಮಳೆ, ಬೆಳೆಯಾಗಿ ಪ್ರತೀ ಸಮುದಾಯದ ಜನರ ಬದುಕು ಹಸನಾಗಿರಲಿ ಎಂದು ದೇವರಲ್ಲಿ ಮೊರೆಯಿಟ್ಟರು. ದೇಶದ ಏಳ್ಗೆಗೆ ಹಾಗೂ ಎಲ್ಲಾ ಸಮುದಾಯದ ಜನರ ಬದುಕಿಗೆ ನೆಮ್ಮದಿಯನ್ನು ತರಲಿ ಎಂದು ಹರಸಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನ ಕೊಣನೂರು ಪಟ್ಟಣದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಆಲಂಗಿಸಿ ಅಪ್ಪಿಕೊಂಡು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಪವಿತ್ರ ರಂಜಾನ್ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಿದರು.

ಇಸ್ಲಾಂ ಸಂಸ್ಕೃತಿಯ ನಿಯಮದಂತೆ ಒಂದು ತಿಂಗಳ ಉಪವಾಸವನ್ನು ಆಚರಣೆ ಮಾಡಿದ್ದ ಮುಸ್ಲಿಂ ಬಾಂಧವರು ಹೊಸ ಬಟ್ಟೆ ಉಟ್ಟು ಸಮೀಪದ ಕೆರೆಕೋಡಿ ಗ್ರಾಮದಲ್ಲಿನ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡುವ ಮೂಲಕ ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಿದರು. ತದನಂತರ ಒಬ್ಬರಿಗೊಬ್ಬರು ಆಲಿಂಗನ ಮಾಡಿಕೊಳ್ಳುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ದೇಶದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಸಹೋದರತ್ವವು ನೆಲಸಲಿ. ಈ ಬಾರಿ ಉತ್ತಮ ಮಳೆ, ಬೆಳೆಯಾಗಿ ಪ್ರತೀ ಸಮುದಾಯದ ಜನರ ಬದುಕು ಹಸನಾಗಿರಲಿ ಎಂದು ದೇವರಲ್ಲಿ ಮೊರೆಯಿಟ್ಟರು. ಪ್ರಾರ್ಥನಾ ಸ್ಥಳದಲ್ಲಿ ನೆರೆದಿದ್ದ ಧರ್ಮಗುರುಗಳು ದೇಶದ ಏಳ್ಗೆಗೆ ಹಾಗೂ ಎಲ್ಲಾ ಸಮುದಾಯದ ಜನರ ಬದುಕಿಗೆ ನೆಮ್ಮದಿಯನ್ನು ತರಲಿ ಎಂದು ಹರಸಿದರು.