6 ವರ್ಷದಲ್ಲಿ ಮೊದಲ ಬಾರಿ ಅಬಕಾರಿ ಗುರಿ ವಿಫಲ!

| Published : Apr 01 2024, 02:31 AM IST / Updated: Apr 01 2024, 05:35 AM IST

ಸಾರಾಂಶ

ರಾಜ್ಯದ ಬೊಕ್ಕಸಕ್ಕೆ ಮಹತ್ವದ ‘ಪಾಲು’ ನೀಡುವ ಅಬಕಾರಿ ಇಲಾಖೆಯು, ಕಳೆದ ಆರು ವರ್ಷಕ್ಕೆ ಹೋಲಿಸಿದರೆ ಇದೇ ಮೊದಲ ಬಾರಿಗೆ ರಾಜಸ್ವ ಸಂಗ್ರಹದಲ್ಲಿ ನಿರೀಕ್ಷಿತ ಗುರಿ ತಲುಪಿಲ್ಲ.

ಸಿದ್ದು ಚಿಕ್ಕಬಳ್ಳೇಕೆರೆ

 ಬೆಂಗಳೂರು :  ರಾಜ್ಯದ ಬೊಕ್ಕಸಕ್ಕೆ ಮಹತ್ವದ ‘ಪಾಲು’ ನೀಡುವ ಅಬಕಾರಿ ಇಲಾಖೆಯು, ಕಳೆದ ಆರು ವರ್ಷಕ್ಕೆ ಹೋಲಿಸಿದರೆ ಇದೇ ಮೊದಲ ಬಾರಿಗೆ ರಾಜಸ್ವ ಸಂಗ್ರಹದಲ್ಲಿ ನಿರೀಕ್ಷಿತ ಗುರಿ ತಲುಪಿಲ್ಲ.

ಒಂದೊಮ್ಮೆ ಯಾವ ಮೂಲದಿಂದ ಸರ್ಕಾರದ ಬೊಕ್ಕಸಕ್ಕೆ ಆದಾಯ ಖೋತಾ ಆದರೂ ಅಬಕಾರಿಯಿಂದ ಮಾತ್ರ ನಿರೀಕ್ಷಿತ ರಾಜಸ್ವ ಬರುವುದು ಪಕ್ಕಾ ಎಂಬುದು ಹಿಂದಿನ ವರ್ಷಗಳ ಅಂಕಿ-ಅಂಶಗಳನ್ನು ಗಮನಿಸಿದರೆ ಸ್ಪಷ್ಟವಾಗುತ್ತದೆ. ಆದರೆ 2023-24ನೇ ಸಾಲಿನಲ್ಲಿ ಭಾರತೀಯ ಮದ್ಯ, ಬಿಯರ್‌, ಸನ್ನದು ಶುಲ್ಕ, ದಂಡ ವಸೂಲಿ ಮತ್ತಿತರ ಮೂಲಗಳಿಂದ ಬೊಕ್ಕಸಕ್ಕೆ ನಿರೀಕ್ಷಿತ ಪ್ರಮಾಣದ ರಾಜಸ್ವ ಸಂಗ್ರಹವಾಗಿಲ್ಲ. 720 ಲಕ್ಷ ಬಾಕ್ಸ್‌ ಮದ್ಯ ಮಾರಾಟ ಅಂದಾಜಿಸಲಾಗಿತ್ತಾದರೂ ಸುಮಾರು 700 ಲಕ್ಷ ಬಾಕ್ಸ್‌ ಮಾತ್ರ ಮಾರಾಟವಾಗಿದೆ.

ಮೊದಲಿಗೆ ಬಜೆಟ್‌ನಲ್ಲಿ ಅಬಕಾರಿ ಇಲಾಖೆಯಿಂದ ವಾರ್ಷಿಕ 36 ಸಾವಿರ ಕೋಟಿ ರು. ರಾಜಸ್ವ ನಿರೀಕ್ಷಿಸಲಾಗಿತ್ತು. ಆದರೆ ಇದು ಭಾರೀ ಹೆಚ್ಚಳವಾಯಿತು ಎಂಬ ಅಬಕಾರಿ ಇಲಾಖೆಯ ಮನವಿ ಹಿನ್ನೆಲೆಯಲ್ಲಿ ಪರಿಷ್ಕೃತವಾಗಿ 34,500 ಕೋಟಿ ರುಪಾಯಿ ನಿಗದಿ ಮಾಡಲಾಗಿತ್ತು. ಆದರೆ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಅಬಕಾರಿ ಇಲಾಖೆಯು ಸುಮಾರು 34,200 ಕೋಟಿ ರು. ರಾಜಸ್ವ ಸಂಗ್ರಹಿಸುವಲ್ಲಿ ಮಾತ್ರ ಸಫಲವಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಯಾವ ವರ್ಷ, ಎಷ್ಟು ರಾಜಸ್ವ ಸಂಗ್ರಹ:

2018ರಿಂದೀಚೆಗೆ ಅಬಕಾರಿ ಇಲಾಖೆಯು ನಿರೀಕ್ಷಿತ ಗುರಿ ಸಾಧಿಸದಿರುವುದು ಇದೇ ಮೊದಲ ಸಲವಾಗಿದೆ. 2018-19ರಲ್ಲಿ 19,750 ಕೋಟಿ ರು. ಗುರಿ ನಿಗದಿಯಾಗಿದ್ದು, 19,943.93 ಕೋಟಿ ರು. ರಾಜಸ್ವ ಸಂಗ್ರಹವಾಗಿತ್ತು. 2019-20ರಲ್ಲಿ 20,950 ಕೋಟಿಗೆ ಬದಲಾಗಿ 21,583.95 ಕೋಟಿ ರು., 2020-21ರಲ್ಲಿ 22,700ಕ್ಕೆ ಬದಲಾಗಿ 23,332.10 ಕೋಟಿ, 2021-22ರಲ್ಲಿ 24,580 ಕೋಟಿಗೆ ಬದಲು 26,377.68 ಕೋಟಿ, 2022-23ರಲ್ಲಿ 29,000 ಕೋಟಿ ಬದಲಿಗೆ 29.920.37 ಕೋಟಿ ರು. ರಾಜಸ್ವ ಸಂಗ್ರಹವಾಗಿತ್ತು. ನಿರೀಕ್ಷಿತ ಗುರಿಗಿಂತಲೂ ಇಲ್ಲಿ ಅಧಿಕ ರಾಜಸ್ವ ಸಂಗ್ರವಾಗಿದ್ದು ಗಮನಾರ್ಹವಾಗಿದೆ.

2018-19ರಿಂದ 2022-23 ರವರೆಗೂ ವಿವಿಧ ಮೂಲಗಳಿಂದ ಸಂಗ್ರಹವಾದ ಅಬಕಾರಿ ರಾಜಸ್ವ (ರು. ಕೋಟಿಗಳಲ್ಲಿ)ಮೂಲ2018-192019-202020-212021-222022-23ಭಾರತೀಯ ತಯಾರಿಕಾ ಮದ್ಯ16,894.8317,899.0120,217.8022,899.1024,663.85

ಬಿಯರ್23,96.293018.902438.162757.304460.60

ಸನ್ನದು ಶುಲ್ಕ616.77620.89643.87684.10745.84

ಇತರೆ36.0445.1532.2737.1850.08

ಒಟ್ಟು19,943.9321,583.9523,332.1026,377.6829,920.37

----

2018-19ರಿಂದ 2022-23 ರವರೆಗೂ ಭಾರತೀಯ ತಯಾರಿಕಾ ಮದ್ಯ (ವೈನ್ ಮತ್ತು ಲೋ ಆಲ್ಕೋಹಾಲ್ ಬಿವರೇಜ್ ಸೇರಿದಂತೆ) ಹಾಗೂ ಬಿಯರ್ ಮಾರಾಟದ ವಿವರ (ಲಕ್ಷ ಪೆಟ್ಟಿಗೆಗಳಲ್ಲಿ)ಮದ್ಯದ ವಿಧ2018-192019-202020-212021-222022-23

ಭಾರತೀಯ ತಯಾರಿಕಾ ಮದ್ಯ569.92600.92583.23660.16698.46

ಬಿಯರ್300.85289.6237.82268.83390.66