ಜಿಲ್ಲಾಡಳಿತವು ಗ್ರಾಮ ಪಂಚಾಯಿತಿಯ ಸೂಕ್ಷ್ಮ ಪ್ರದೇಶವೆಂದು ಸೂಚಿಸಲಾದ ಗ್ರಾಮಸಭೆಯಲ್ಲಿ ನಿರ್ಣಯದೊಂದಿಗೆ ಸ್ಥಳಿಯ ಜನಜೀವನದ ವ್ಯವಸ್ಥೆಯ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕು.

ಶಿರಸಿ: ಕಸ್ತೂರಿರಂಗನ್ ವರದಿಯ ೭ನೇ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ ಜಿಲ್ಲೆಯ ೫೬೭ ಹಳ್ಳಿಗಳನ್ನ ಅತಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಿದಲ್ಲಿ ಜನಜೀವನಕ್ಕೆ ಮಾರಕವಾಗಲಿದೆ. ಆದ್ದರಿಂದ ಜನವಸತಿ ಪ್ರದೇಶ ಮುಕ್ತಗೊಳಿಸಬೇಕು. ಸೂಕ್ಷ್ಮ ಅಧ್ಯಯನಕ್ಕೆ ಸಮಿತಿ ರಚಿಸಿ ಆಕ್ಷೇಪ ಸಲ್ಲಿಸಬೇಕು ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಕಸ್ತೂರಿರಂಗನ್ ವರದಿ ವಿರೋಧಿಸಿ ಹಮ್ಮಿಕೊಳ್ಳಲಾದ ಒಂದು ಲಕ್ಷ ಆಕ್ಷೇಪ ಪತ್ರದ ಅಭಿಯಾನದ ಅಂಗವಾಗಿ ಶನಿವಾರ ಶಿರಸಿ ನಗರಸಭೆಯ ಬಯಲು ರಂಗಮಂದಿರದಲ್ಲಿ ಜರುಗಿದ ಬೃಹತ್ ಸಭೆಯಲ್ಲಿ ಮಾತನಾಡಿದರು.

ಈ ಹಂತದಲ್ಲಿ ಕೇಂದ್ರ ಪರಿಸರ ಇಲಾಖೆಯು ಪ್ರಕಟಿಸಿದ ಸೂಕ್ಷ್ಮ ಪ್ರದೇಶದ ಅಧಿಸೂಚನೆಯು ಅವೈಜ್ಞಾನಿಕವಾಗಿರುವುದರಿಂದ ರಾಜ್ಯ ಸರ್ಕಾರದಿಂದ ಪ್ರಬಲವಾಗಿ ವೈಜ್ಞಾನಿಕ, ತಾಂತ್ರಿಕ, ಜನಜೀವನಕ್ಕೆ ಮಾರಕ ಹಾಗೂ ಅರಣ್ಯವಾಸಿಗಳ ಅಭದ್ರತೆ ಉಂಟಾಗುವ ಅಂಶಗಳನ್ನು ಒಳಗೊಂಡಂತೆ ವೈಜ್ಞಾನಿಕ ವರದಿಯನ್ನು ದಾಖಲಿಸಿ ಆಕ್ಷೇಪ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.ಜಿಲ್ಲಾಡಳಿತವು ಗ್ರಾಮ ಪಂಚಾಯಿತಿಯ ಸೂಕ್ಷ್ಮ ಪ್ರದೇಶವೆಂದು ಸೂಚಿಸಲಾದ ಗ್ರಾಮಸಭೆಯಲ್ಲಿ ನಿರ್ಣಯದೊಂದಿಗೆ ಸ್ಥಳಿಯ ಜನಜೀವನದ ವ್ಯವಸ್ಥೆಯ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿಬೇಕೆಂದು ಹೇಳಿದರು.

ಮಹಾಬಲೇಶ್ವರ ನಾಯ್ಕ ಬೇಡ್ಕಣಿ ಸ್ವಾಗತಿಸಿದರು. ಶೋಭಾ ನಾಯ್ಕ, ಎಸ್.ಎನ್. ಹೆಗಡೆ, ರಾಘು ಗುಡ್ನಾಪುರ ಶ್ರೀಧರ ಹೆಗಡೆ, ನಾಗಪತಿ ಗೌಡ, ಹುಕ್ಕಳ್ಳಿ ಕಿರಣ, ಮರಾಠಿ ದೇವನಳ್ಳಿ ಮಾತನಾಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಇಬ್ರಾಹೀಂ ಗೌಡಳ್ಳೀ, ಮುಂಡಗೋಡ ಅಧ್ಯಕ್ಷ ಶಿವಾನಂದ ಜೋಗಿ, ಕೆ.ಟಿ. ನಾಯ್ಕ, ರಾಜು ನರೇಬೈಲ್, ಅಣ್ಣಪ್ಪ ನಾಯ್ಕ ಕಣ್ಣಿಗೇರಿ, ಆರ್.ಟಿ. ನಾಯ್ಕ ವಾಜಗೋಡ, ಸ್ವಾತಿ ಜೈನ್, ಮಲ್ಲೇಶಿ, ಸತೀಶ್ ನಾಯ್ಕ ತ್ಯಾಗಲಿ, ಲಕ್ಷ್ಮಣ ನಾಯ್ಕ, ಕಲ್ಪನಾ ನರೇಬೈಲ್, ಯಶೋದಾ ನೌಟೂರು ಮುಂತಾದವರು ಉಪಸ್ಥಿತರಿದ್ದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮಿತ್ ಚೌಹಾಣ, ನಗರಸಭೆ ಆಯುಕ್ತ ಪ್ರಕಾಶ ಇವರು ಆಕ್ಷೇಪ ಪತ್ರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಿಪಿಐ ಸಂಪತ್ ಕುಮಾರ್ ಉಪಸ್ಥಿತರಿದ್ದರು.ಕಸ್ತೂರಿರಂಗನ್ ವರದಿ ವಿರೋಧಿಸಿ ಜಿಲ್ಲಾದ್ಯಂತ ಗ್ರಾಮ ಪಂಚಾಯಿತಿ ಮಟ್ಟದಿಂದ ನವದೆಹಲಿಯವರೆಗೂ ಬೃಹತ್ ಹೋರಾಟ ಸಂಘಟಿಸಲು ಸಭೆಯು ನಿರ್ಣಯಿಸಿತು.