ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ರಾಜಸಭಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವವನ್ನು ವೈಭವದೊಂದಿಗೆಆಚರಿಸಲಾಯಿತು. ಮುದ್ದು ಕೃಷ್ಣ ಮತ್ತುಯಶೋದೆಯರ ಸಮ್ಮುಖದಲ್ಲಿ ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.

ಮೂಡುಬಿದಿರೆ: ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ರಾಜಸಭಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವವನ್ನು ವೈಭವದೊಂದಿಗೆಆಚರಿಸಲಾಯಿತು. ಮುದ್ದು ಕೃಷ್ಣ ಮತ್ತುಯಶೋದೆಯರ ಸಮ್ಮುಖದಲ್ಲಿ ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.

ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್‌ ಸ್ವಾಗತಿಸಿ, ಶ್ರೀಕೃಷ್ಣನ ಜೀವನ ಮೌಲ್ಯಗಳು , ಧರ್ಮ ಹಾಗೂ ಸಂಸ್ಕೃತಿಯ ಮಹತ್ವ ವಿವರಿಸಿದರು.

ಎಸ್‌ಡಿಎಂ ಕಲಾ ಕೇಂದ್ರದ ಮುಖ್ಯ ಸಲಹೆಗಾರರಾದ ಸೋನಿಯಾ ವರ್ಮಾ ಮಾತನಾಡಿ, ಪ್ರತಿಯೊಬ್ಬರ ಆತ್ಮದಲ್ಲಿಯೂ ದೈವಿಕ ಶಕ್ತಿ ಅಡಗಿದೆ ಎಂದರು.

ಸಂಸ್ಥೆಯ ನಿರ್ದೇಶಕ ಬಿ.ಪಿ.ಸಂಪತ್‌ ಕುಮಾರ್‌ ಜೈನ್‌ ಮಾತನಾಡಿ, ಎಲ್ಲರನ್ನುತನ್ನತ್ತ ಸೆಳೆಯುವ ಆಯಸ್ಕಾಂತೀಯ ವ್ಯಕ್ತಿತ್ವ ಶ್ರೀ ಕೃಷ್ಣನದು ಎಂದರು

ಖ್ಯಾತ ನೃತ್ಯ ಸಂಯೋಜಕ ರೂಪೇಶ್ ಶೆಟ್ಟಿ ಅವರು ಮಾತನಾಡಿ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಶ್ಲಾಘಿಸುತ್ತಾ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯಅಧ್ಯಕ್ಷ ಯುವರಾಜ್‌ಜೈನ್‌ ಮಾತನಾಡಿ, ಜೀವನದಲ್ಲಿ ಸಂಸ್ಕಾರ ಮತ್ತುಉತ್ತಮ ಮೌಲ್ಯಗಳು ಇದ್ದರೆ ನಾವು ಎಲ್ಲಿ ಬೇಕಾದರೂ ನೆಮ್ಮದಿಯಿಂದ ಬದುಕಬಹುದು ಎಂಬುದಕ್ಕೆ ಶ್ರೀ ಕೃಷ್ಣನ ಜೀವನವೇ ಸಾಕ್ಷಿಯಾಗಿದೆ ಎಂದು ಹೇಳಿದರು.

ಸೋನಿಯಾ ವರ್ಮಾ ಅವರನ್ನು ಸನ್ಮಾನಿಸಲಾಯಿತು. ಯಶೋದಾ-ಕೃಷ್ಣ ವೇಷಭೂಷಣ ಸ್ಪರ್ಧೆ ಹಾಗೂ ಇನ್ನಿತರ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.

ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್, ಉಪಮುಖ್ಯ ಶಿಕ್ಷಕ ಜಯಶೀಲ, ಸಿ.ಬಿ.ಎಸ್.ಸಿ ವಿಭಾಗದ ಸಂಯೋಜಕಿ ವಿಮಲಾ ಶೆಟ್ಟಿ, ಪ್ರಭಾತ್ ಸಿಲ್ಕ್ ಮಾಲಕಿ ಅಪೇಕ್ಷಾ ಜೈನ್, ಯಶಸ್ವಿ ವೆಲ್ಡಿಂಗ್‌ ಇಂಜಿನಿಯರಿಂಗ್ ವರ್ಕ್ ಮಾಲಕ ಲೀಲೇಶ್‌ ಕೋಟ್ಯಾನ್ ಸೇರಿದಂತೆ ಸಂಸ್ಥೆಯ ಶಿಕ್ಷಕ ವೃಂದದವರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಾನ್ವಿ ಹಾಗೂ ಮಾನಸ ನಿರೂಪಿಸಿದರು. ಮೌಲ್ಯ ವೈ ಆರ್‌ಜೈನ್‌ ಇವರು ಅತಿಥಿಗಳನ್ನು ಪರಿಚಯಿಸಿದರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮಗಳು ಪ್ರದರ್ಶನಗೊಂಡವು.