ನೆಲಮಂಗಲ: ಮಹಿಳೆಯರು ಆನ್‍ಲೈನ್ ಹಾಗೂ ವಿವಿಧ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ಅಪರಿಚಿತ ವ್ಯಕ್ತಿಗಳ ಮಾತು ನಂಬಿ ಹಣ ವರ್ಗಾವಣೆ ಮಾಡಬೇಡಿ ಎಂದು ನೆಲಮಂಗಲ ಉಪವಿಭಾಗದ ಡಿವೈಎಸ್ಪಿ ಉಮಾರಾಣಿ ಹೇಳಿದರು
ನೆಲಮಂಗಲ: ಮಹಿಳೆಯರು ಆನ್‍ಲೈನ್ ಹಾಗೂ ವಿವಿಧ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ಅಪರಿಚಿತ ವ್ಯಕ್ತಿಗಳ ಮಾತು ನಂಬಿ ಹಣ ವರ್ಗಾವಣೆ ಮಾಡಬೇಡಿ ಎಂದು ನೆಲಮಂಗಲ ಉಪವಿಭಾಗದ ಡಿವೈಎಸ್ಪಿ ಉಮಾರಾಣಿ ಹೇಳಿದರು.
ನೆಲಮಂಗಲದಲ್ಲಿ ನೆಲಮಂಗಲ ಮಹಿಳಾ ಕಳಂಜಿಯಂ ಒಕ್ಕೂಟ ಆಯೋಜಿಸಿದ್ದ ಮೊದಲ ವಾರ್ಷಿಕೋತ್ಸವ, 150ನೇ ಕಳಂಜಿಯೋತ್ಸವದಲ್ಲಿ ಮಾತನಾಡಿದ ಅವರು, ಮಹಿಳೆಯರು ಒಡವೆ ಅಥವಾ ವಸ್ತುಗಳು ಖರೀದಿಸುವ ಆಸೆಯಿಂದ ಸಾಮಾಜಿಕ ಜಾಲತಾಣದಲ್ಲಿ ಬರುವ ಸಂದೇಶ ನಂಬಿ ಹಣ ಹೂಡಿಕೆ ಮಾಡಿ ಮೋಸ ಹೋಗಬೇಡಿ. ಯಾವುದೇ ಕಾರಣಕ್ಕೂ ಬ್ಯಾಂಕ್ ಖಾತೆ ವಿವರ, ಎಟಿಎಂ/ಡೆಬಿಟ್ ಕಾರ್ಡ್ ಈ ಮಾಹಿತಿ, ಒಟಿಪಿ ಯಾರೊಂದಿಗೂ ಹಂಚಿಕೊಳ್ಳಬಾರದು. ಅನುಮಾನಾಸ್ಪದ ಕರೆ ಅಥವಾ ಸಂದೇಶಗಳು ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಮಹಿಳೆಯರು ಹಣ ಉಳಿತಾಯ ಮಾಡುವುದು ಮಾತ್ರವಲ್ಲ, ಮನೆಯ ಮಕ್ಕಳು ಬೆಳವಣಿಗೆಗೂ ಹೆಚ್ಚು ಗಮನಹರಿಸಬೇಕು. ಮಹಿಳೆಯರು ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಗಟ್ಟಿಯಾಗಿ ಹಾಗೂ ಸದೃಢವಾಗಿ ಬೆಳೆಯಬೇಕು ಎಂದರು.
ಬಹುಮಾನ ವಿತರಣೆ: ತಾಲೂಕಿನಲ್ಲಿ 150 ಸಂಘಗಳಿದ್ದು, ಹೆಚ್ಚು ಉಳಿತಾಯ ಮಾಡಿದ 10 ಸಂಘಗಳಿಗೆ ಬಹುಮಾನ ನೀಡಿ ಗೌರಸಲಾಯಿತು. ಡಿವೈಎಸ್ಪಿ ಉಮಾರಾಣಿ ಉತ್ತಮ ಕಾರ್ಯನಿರ್ವಹಿಸುವ ಸಂಘಗಳಿಗೆ ಮುಂದಿನ ವಾರ್ಷಿಕೋತ್ಸವದಲ್ಲಿ ಬಹುಮಾನ ನೀಡುವುದಾಗಿ ಘೋಷಿಸಿದರು.ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಸಿ.ಪ್ರದೀಪ್, ಧಾನ್ ಫೌಂಡೇಶನ್ ರಾಘವೇಂದ್ರ, ಕೆನರಾ ಬ್ಯಾಂಕ್ ಸಿಬ್ಬಂದಿ ರಾಮನಗರ ವಲಯ ಸಂಯೋಜಕ ಪುಷ್ಪ, ಪ್ರೆಸ್ ಕ್ಲಬ್ ಅಧ್ಯಕ್ಷ ವಿಜಯ್ ಕುಮಾರ್, ಮಹಿಳಾ ಕಳಂ ಜಿಯಂ ಒಕ್ಕೂಟದ ತಾಲೂಕು ಅಧ್ಯಕ್ಷೆ ಶೈಲಜಾ, ಉಪಾಧ್ಯಕ್ಷೆ ಭಾಗ್ಯಮ್ಮ, ಕಾರ್ಯದರ್ಶಿ ಅನಿತಾ, ಜಂಟಿ ಕಾರ್ಯದರ್ಶಿ ರುದ್ರಾಣಮ್ಮ ಇತರರಿದ್ದರು.
ಪೋಟೋ 3 :ನೆಲಮಂಗಲದಲ್ಲಿ ನೆಲಮಂಗಲ ಮಹಿಳಾ ಕಳಂಜಿಯಂ ಒಕ್ಕೂಟದ ವಾರ್ಷಿಕೋತ್ಸವ, 150ನೇ ಕಳಂಜಿಯೋತ್ಸವಕ್ಕೆ ಶ್ರೀ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು. ಡಿವೈಎಸ್ಪಿ ಉಮಾರಾಣಿ ಇತರರು ಪಾಲ್ಗೊಂಡಿದ್ದರು.