ಸಾರಾಂಶ
ಚಳ್ಳಕೆರೆಯಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥಾಗೆ ತಾಲೂಕು ಸ್ಪೀಪ್ ಸಮಿತಿ ಕಾರ್ಯದರ್ಶಿ, ಪೌರಾಯುಕ್ತ ಜೀವನ್‌ಕಟ್ಟಿಮನಿ ಚಾಲನೆ ನೀಡಿದರು.
ಚಳ್ಳಕೆರೆ:
ರಾಷ್ಟ್ರ ಸಂವಿಧಾನದಿಂದ ಮತದಾನದ ಹಕ್ಕನ್ನು ಪಡೆದ ಪ್ರತಿಯೊಬ್ಬ ಮತದಾರರನು ಚುನಾವಣೆ ಸಂದರ್ಭದಲ್ಲಿ ತಪ್ಪದೇ ಮತ ಚಲಾಯಿಸುವ ಮೂಲಕ ಮತದಾನದ ಪಾವಿತ್ರತೆ ಉಳಿಸಬೇಕಿದೆ. ಈ ನಿಟ್ಟಿನಲ್ಲಿ ಎಲ್ಲಾ ಮತದಾರರು ಏ.೨೬ರಂದು ನಡೆಯುವ ಚುನಾವಣೆಯಲ್ಲಿ ಮತಚಲಾಯಿಸಲು ಮರೆಯಬಾರದು ಎಂದು ತಾಲೂಕು ಸ್ಪೀಪ್ ಸಮಿತಿ ಕಾರ್ಯದರ್ಶಿ, ಪೌರಾಯುಕ್ತ ಜೀವನ್ ಕಟ್ಟಿಮನಿ ತಿಳಿಸಿದರು.ಬುಧವಾರ ತಾಪಂ ಕಾರ್ಯಾಲಯ ಮುಂಭಾಗದಿಂದ ಜಿಲ್ಲಾ ಸ್ಪೀಪ್, ತಾಲೂಕು ಸ್ಪೀಪ್ ಸಮಿತಿಯಿಂದ ಹಮ್ಮಿಕೊಳ್ಳಲಾದ ಮತದಾನ ಜಾಗೃತಿ ಜಾಥಾ ಮತ್ತು ರಂಗೋಲಿ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇದೇ ವೇಳೆ ಸ್ವಸಹಾಯ ಮಹಿಳಾ ಸಂಘದಿಂದ ರಂಗೋಲಿ ಸ್ಪರ್ಧೆ ಹಮ್ಮಿಕೊಂಡಿದ್ದು ಹಲವಾರು ಮಹಿಳೆಯರು ಸ್ಪರ್ಧೆಯಲ್ಲಿ ಪಾಲ್ಗೊಂಡು ಮತದಾನಕ್ಕೆ ಸಂಬಂಧಪಟ್ಟ ರಂಗೋಲಿ ಚಿತ್ರ ಬಿಡಿಸುವ ಮೂಲಕ ಜಾಗೃತಿ ಮೂಡಿಸಿದರು.
ಮತದಾನ ಜಾಗೃತಿ ಜಾಥಾ ತಾಪಂ ಕಾರ್ಯಾಲಯದಿಂದ ವಾಲ್ಮೀಕಿ, ಅಂಬೇಡ್ಕರ್ ನೆಹರೂ ವೃತ್ತದ ಮೂಲಕ ತಾಲೂಕು ಕಚೇರಿಗೆ ಆಗಮಿಸಿತು. ನಗರಸಭೆ ಕಂದಾಯಾಧಿಕಾರಿ ಸತೀಶ್, ಹಿರಿಯ ಆರೋಗ್ಯ ನಿರೀಕ್ಷಕರಾದ ಸುನೀಲ್, ಗಣೇಶ್, ಗೀತಾಕುಮಾರಿ, ಇಂಜಿನಿಯರ್ ಚೇತನ್, ರಾಜೇಶ್, ತಿಪ್ಪೇಸ್ವಾಮಿ, ಎಸ್.ಎಲ್.ಮಂಜಣ್ಣ, ಸುಮಾ ಮುಂತಾದವರಿದ್ದರು.