ಸಾರಾಂಶ
ರಾಯಚೂರು ತಾಲೂಕಿನ ಬಿ.ಯದ್ಲಾಪೂರು ನಾಲಾ ಹೊಳೆತ್ತುವ ಕಾಮಗಾರಿ ಸ್ಥಳದಲ್ಲಿ ಮತದಾನದ ಮಹತ್ವದ ಕುರಿತ ಜಾಗೃತಿ ಜಾಥಾವನ್ನು ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ರಾಯಚೂರು
ಇದೇ ಮೇ.7ರಂದು ನಡೆಯುವ ಲೋಕಸಭಾ ಚುನಾವಣೆಗೆ ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ನಮ್ಮ ಜವಾಬ್ದಾರಿಯುತ ಕರ್ತವ್ಯ ಎಂದು ತಪ್ಪದೇ ಮತ ಚಲಾಯಿಸಿ. ಶತಪ್ರತಿಶತ ಮತದಾನ ರಾಯಚೂರು ಜಿಲ್ಲೆ ವಾಗ್ಧಾನ ಪೂರೈಸಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ತಿಳಿಸಿದರು.ತಾಲೂಕಿನ ಬಿಚ್ಚಾಲಿ ಗ್ರಾಪಂ ಬಿ.ಯದ್ಲಾಪೂರು ನಾಲಾ ಹೊಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಕೂಲಿಕಾರರಿಗೆ, ತಾಲೂಕು ಸ್ವೀಪ್ ಸಮಿತಿಯಿಂದ ಹಮ್ಮಿಕೊಂಡಿದ್ದ ಮತದಾನದ ಮಹತ್ವದ ಕುರಿತು ಮತದಾರರ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. 18 ವರ್ಷ ತುಂಬಿದ ಎಲ್ಲಾ ವಯಸ್ಕ ಪ್ರೌಢ ಪ್ರಜೆಗಳಿಗೆ ಮತ ಚಲಾಯಿಸುವ ಹಕ್ಕು ನೀಡಲಾಗಿದೆ. ಇಂತಹ ಅತ್ಯುತ್ತಮ ವ್ಯವಸ್ಥೆಯಲ್ಲಿ ಭಾರತೀಯ ಪ್ರಜೆಗಳಾದ ನಾವು ಪ್ರಬುದ್ಧತೆಯಿಂದ ಅಮೂಲ್ಯ ಮತ ಚಲಾಯಿಸಿ, ವಾಗ್ಧಾನ ಯಶಸ್ವಿಯಾಗಿಸೋಣ ಎಂದರು. ಈ ವೇಳೆ ಪಿಡಿಒ ಮಾಳಮ್ಮ ಶಿವಂಗಿ, ಐಇಸಿ ಸಂಯೋಜಕ ಧನರಾಜ, ತಾಂತ್ರಿಕ ಸಹಾಯಕ ಇಂಜೀನಿಯರ್ ಗುಡದಪ್ಪ, ಸಿ.ಅರ್.ಪಿ ಶ್ರೀಧರ, ಕಾರ್ಯದರ್ಶಿ ನರಸಿಂಹ, ಗ್ರಾ.ಪಂ ಡಿಇಒ ಕೃಷ್ಣ, ಬಿ.ಎಪ್.ಟಿ ಇಮಾನವೇಲ್, ಜಿಕೆಎಮ್ ಮೀನಾಕ್ಷಿ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಮತ್ತು ನರೇಗಾ ಮೇಟ್ ಕೂಲಿಕಾರರು ಉಪಸ್ಥಿತರಿದ್ದರು.