ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮಾನವನ ಶರೀರ ಆರೋಗ್ಯವಾಗಿರಬೇಕಿದ್ದಲ್ಲಿ ವ್ಯಾಯಾಮ ಅಗತ್ಯ. ಇಂದು ಭಾರತವನ್ನು ಯೋಗದಲ್ಲಿ ವಿಶ್ವದಲ್ಲಿ ಗುರುತಿಸಿದೆ. ಇಂತಹ ಓಟಗಳ ಮೂಲಕ ಮನುಷ್ಯ ಆರೋಗ್ಯ ಕಾಪಾಡಿಕೊಳ್ಳುವುದರೊಂದಿಗೆ ದೇಶದಲ್ಲಿ ತಾಂಡವವಾಡುತ್ತಿರುವ ಆರೋಗ್ಯ ಸಮಸ್ಯೆಗಳು ದೂರವಾಗಲಿ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದರು.ನಗರ ಹೊರವಲಯದ ಎಸ್ ಜೆ ಸಿ ತಾಂತ್ರಿಕ ಮಹಾವಿದ್ಯಾಲಯದ ಬಿಜಿಎಸ್ ಮೈದಾನದಲ್ಲಿ ಶನಿವಾರ ಮುಂಜಾನೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದಿಂದ ಆಯೋಜಿಸಿದ್ದ ನನ್ನ ಆರೋಗ್ಯ ನನ್ನ ಹಕ್ಕು ಎಂಬ ಘೋಷ ವಾಕ್ಯದೊಂದಿಗೆ ಬಿ.ಜಿ.ಎಸ್ ನಂದಿ ಓಟ 2024 ರ 5 ಕಿ.ಮೀ ಮತ್ತು 10 ಕಿ.ಮೀ ಗುಡ್ಡಗಾಡು ಓಟಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.
ಭೂಮಿ ರಕ್ಷಣೆ ಎಲ್ಲರ ಹೊಣೆನಾವು ವಾಸವಾಗಿರುವ ಭೂತಾಯಿಯ ಸಂರಕ್ಷ ಣೆ ನಮ್ಮದೇ ಹೊಣೆಗಾರಿಕೆಯಾಗಿದೆ ಎಂದು ಹಾಗಾಗಿ ನಾವೆಲ್ಲರೂ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಿಸಬೇಕಿದೆ. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಪರಿಸರ ರಕ್ಷಣೆಯ ದಿವ್ಯ ಸಂಕಲ್ಪ ಮಾಡಬೇಕು. ಇದು ಒಬ್ಬನ ಕೆಲಸವಲ್ಲ. ಎಲ್ಲರ ಕೆಸಲವಾಗಿದೆ ಎಂದು ಹೇಳಿದರು.
ಎಸ್‌ಜೆಸಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಜಿ.ಟಿ.ರಾಜು, ಎಸ್‌ಜಿಸಿಐಟಿ ಕುಲ ಸಚಿವ ಜೆ.ಸುರೇಶ್ ಮಾತನಾಡಿದರು. ನಂದಿ ಓಟ 2024 ರ ಓಟದಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರುಗಳು ಸೇರಿದಂತೆ ಸುಮಾರು 1000ಕ್ಕೂ ಹೆಚ್ಚು ಸ್ಪರ್ಧಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ 10 ಕಿ.ಮೀ ಓಟದಲ್ಲಿಮಂಡ್ಯದ ವೆಂಕಟೇಶ ಕೆ.ಕೆ. ಮೊದಲ ಬಹುಮಾನ, ಬೆಂಗಳೂರಿನ ಗುರುಪ್ರಸಾದ್ ಎರಡನೇ ಬಹುಮಾನ ಮತ್ತುಅಭಿಷೇಕ್ ಎನ್ ಮೂರನೇ ಬಹುಮಾನ ಪಡೆದು ವಿಜೇತರಾದರು.5 ಕಿ.ಮೀ ಓಟದಲ್ಲಿ ದೊಡ್ಡಬಳ್ಳಾಪುರದ ಪ್ರಣತಿ ಪ್ರಥಮ ಬಹುಮಾನ, ತೇಜಸ್ವಿನಿ ಎನ್.ಎಲ್, ಕೂರ್ಗ್ ಎರಡನೇ ಬಹುಮಾನ, ಬೆಂಗಳೂರಿನ ರಾಶಿ ಮೂರನೇ ಬಹುಮಾನ ಪಡೆದು ವಿಜೇತರಾದರು. ಎಲ್ಲ ವಿಜೇತರಿಗೆ ನಗದು ಬಹುಮಾನ ನೀಡಲಾಯಿತು. ಈ ವೇಳೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿ.ವೈ.ಎಸ್.ಪಿ ಮಂಜುನಾಥ್ , ಜಿಲ್ಲಾಸ್ಪತ್ರೆಯ ವೈದ್ಯೆ ಡಾ. ವಿಜಯ,ಎಸ್ ಜೆ ಸಿ ಐ ಟಿ ವ್ಯವಸ್ಥಾಪಕ ಜಿ.ಆರ್.ರಂಗಸ್ವಾಮಿ, ಬಿ.ಜಿ.ಎಸ್.ಸಿ.ಇ.ಟಿ ಪ್ರಾಂಶುಪಾಲ ಡಾ.ಜಿ.ಕೆ.ರವಿಕುಮಾರ್ ,ಬಿ.ಜಿ.ಎಸ್ ಪಾಲಿಟೆಕ್ನಿಕ್ ಪ್ರಾಂಶುಪಾಲ ಡಾ.ವೈ.ಆರ್ ಮಂಜುನಾಥ್, ಮತ್ತಿತರರು ಇದ್ದರು.