ವಸ್ತುಪ್ರದರ್ಶನದಿಂದ ಬೌದ್ಧಿಕ ಮಟ್ಟ ಹೆಚ್ಚಳ: ಸ್ವಾಮೀಜಿ

| Published : Feb 01 2025, 12:03 AM IST

ವಸ್ತುಪ್ರದರ್ಶನದಿಂದ ಬೌದ್ಧಿಕ ಮಟ್ಟ ಹೆಚ್ಚಳ: ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

Exhibition increases intellectual level: Swamiji

-ವಿಜ್ಞಾನ ವಸ್ತು ಪ್ರದರ್ಶನಕ್ಕೆ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಚಾಲನೆ

-----

ಕನ್ನಡಪ್ರಭ ವಾರ್ತೆ ಗುರುಮಠಕಲ್

ಮಕ್ಕಳಲ್ಲಿ ಅಡಗಿರುವ ಪ್ರತಿಭೆ, ಸೃಜನಾತ್ಮಕತೆ, ವೈಜ್ಞಾನಿಕ ಮನೋಭಾವ, ಕೌಶಲ ಅಭಿವೃದ್ಧಿ ಹೊರಹೊಮ್ಮುತ್ತದೆ. ಅಲ್ಲದೇ ಇಂತಹ ವಿಜ್ಞಾನಕ್ಕೆ ಸಂಬಂಧಿಸಿದ ನೂತನ ಮಾದರಿಗಳನ್ನು ಮಕ್ಕಳು ಮಾಡುವುದರಿಂದ ವೈಜ್ಞಾನಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸುವಲ್ಲಿ ಯಾವುದೇ ಸಂದೇಹವಿಲ್ಲ ಎಂದು ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.

ನಿಧಿ ಪೂರ್ವ ಪ್ರಾಥಮಿಕ ಮತ್ತು ಶಾಂತಿನಿಕೇತನ ಪ್ರೌಢಶಾಲೆಯಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನದಿಂದ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಮಾತಿನಂತೆ ಮಕ್ಕಳಲ್ಲಿನ ನೈಜತೆ, ಕ್ರಿಯಾತ್ಮಕ ಚಟುವಟಿಕೆ ಹಾಗೂ ಮಕ್ಕಳ ಸುಪ್ತವಾದ ಪ್ರತಿಭೆ ಅರಳುತ್ತದೆ. ಅಲ್ಲದೆ ಸಹಜವಾಗಿ ವೀಕ್ಷಣೆ ಕಲೆ ಬೆಳೆಯುತ್ತದೆ ಎಂದರು.

ಶಿಕ್ಷಣ ಇಲಾಖೆ ಅಧಿಕಾರಿ ರವೀಂದ್ರ ಚವ್ಹಾಣ್ ಮಾತನಾಡಿ, ಶಾಲೆಗಳಲ್ಲಿ ಏರ್ಪಡಿಸುವ ವಿಜ್ಞಾನ ವಸ್ತು ಪ್ರದರ್ಶನಗಳು ಮಕ್ಕಳ ಬುದ್ಧಿಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಬೆಳವಣಿಗೆ ಹೆಚ್ಚುತ್ತಿದ್ದು, ಮಕ್ಕಳು ಇಂಥ ವಸ್ತು ಪ್ರದರ್ಶನಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಮತ್ತು ಹೊಸ ವಿಚಾರಗಳನ್ನು ಕಲಿಯಲು ಸಹಕಾರಿಯಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿ ಗಂಗಾ, ವಿಜಯಕುಮಾರ, ವಿ.ಸಿ. ಮೈತ್ರಿ, ಮಲ್ಲಿಕಾರ್ಜುನ ಹಿರೇಮಠ, ಬಾಲಪ್ಪ ಇದ್ದರು.

------

ಫೋಟೊ: ಗುರುಮಠಕಲ್ ಪಟ್ಟಣದ ನಿಧಿ ಪೂರ್ವ ಪ್ರಾಥಮಿಕ ಮತ್ತು ಶಾಂತಿನಿಕೇತನ ಪ್ರೌಢಶಾಲೆಯಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ಮೇಳಕ್ಕೆ ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮೀಜಿ ಚಾಲನೆ ನೀಡಿದರು.

31ವೈಡಿಆರ್9