ಶ್ರೀ ವಿಶ್ವೇಶ ತೀರ್ಥರ ಅಪರೂಪದ ಛಾಯಾಚಿತ್ರ ಪ್ರದರ್ಶನ

| Published : Dec 29 2023, 01:31 AM IST / Updated: Dec 29 2023, 01:32 AM IST

ಶ್ರೀ ವಿಶ್ವೇಶ ತೀರ್ಥರ ಅಪರೂಪದ ಛಾಯಾಚಿತ್ರ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಪದ್ಮವಿಭೂಷಣ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಪಾಜಕದಲ್ಲಿ ಸ್ಥಾಪಿಸಿದ ಆನಂದತೀರ್ಥ ವಿದ್ಯಾಲಯ ಸಂಸ್ಥೆಯ ದಶಮಾನೋತ್ಸವ ಆಚರಿಸಲಾಗುತ್ತಿದ್ದು, ಶ್ರೀಗಳ ಸಂಸ್ಮರಣೆಗಾಗಿ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಪೇಜಾವರ ಮಠದ ಪದ್ಮವಿಭೂಷಣ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಪಾಜಕದಲ್ಲಿ ಸ್ಥಾಪಿಸಿದ ಆನಂದತೀರ್ಥ ವಿದ್ಯಾಲಯ ಸಂಸ್ಥೆಯ ದಶಮಾನೋತ್ಸವ ಆಚರಿಸಲಾಗುತ್ತಿದ್ದು, ಶ್ರೀಗಳ ಸಂಸ್ಮರಣೆಗಾಗಿ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ.

ಸಂಸ್ಥೆಯ ಅಧ್ಯಕ್ಷ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಕಾರ್ಯಾಧ್ಯಕ್ಷ ಎನ್. ನಾಗರಾಜ ಬಲ್ಲಾಳ್, ಶಿಕ್ಷಣತಜ್ಞ ಮಹಾಬಲೇಶ್ವರ ರಾವ್ ರಾವ್, ಸಂಸ್ಥೆಯ ಟ್ರಸ್ಟಿಗಳಾದ ರೂಪಾ ಬಲ್ಲಾಳ್, ಹರಿ ಭಟ್, ಸುದರ್ಶನ ರಾವ್, ಲಕ್ಷ್ಮೀನಾರಾಯಣ, ಸುದರ್ಶನ ಸಾಮಗ, ಪಿಯು ಕಾಲೇಜಿನ ಪ್ರಾಂಶುಪಾಲ ವಿಜಯ ರಾವ್, ಶಾಲೆಯ ಪ್ರಾಂಶುಪಾಲೆ ಗೀತಾ ಕೋಟ್ಯಾನ್, ಛಾಯಾಚಿತ್ರಗ್ರಾಹಕ ಅರುಣಾಚಲ ಹೆಬ್ಬಾರ್ ಮತ್ತಿತರರಿದ್ದರು.

ಅರುಣಾಚಲ ಹೆಬ್ಬಾರ್ ಅವರು ಶ್ರೀ ವಿಶ್ವೇಶ ತೀರ್ಥರ ಸಾಮಾಜಿಕ, ಧಾರ್ಮಿಕ ಕಾರ್ಯಗಳಿಂದ ಆಕರ್ಷಿತಗೊಂಡು ಅವರೊಂದಿಗೆ ಸಂಚರಿಸಿ ತೆಗೆದಿರುವ ಹಳೆಯ ಛಾಯಾಚಿತ್ರಗಳು ಈ ಪ್ರದರ್ಶನದಲ್ಲಿವೆ. ಪ್ರಮುಖವಾಗಿ ಉತ್ತರ ಭಾರತ ಯಾತ್ರೆ ಸಂದರ್ಭದಲ್ಲಿ ದೆಹಲಿ, ಬೋದ್ ಗಯಾ, ಹರಿದ್ವಾರ, ಕಾಶಿ, ಗಯಾ, ಅಯೋಧ್ಯೆ, ಬದರಿನಾಥ ಮುಂತಾದ ತೀರ್ಥಕ್ಷೇತ್ರಗಳ ಛಾಯಾಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ. ಪ್ರದರ್ಶನವು ಶನಿವಾರದವರೆಗೆ ನಡೆಯಲಿದೆ.