ದುರಂಕಾರದ ಮಾತು ಬಿಟ್ಟು, ಕೊಡುಗೆ ನೀಡಿ: ಸಿಎಂ ಸಿದ್ದರಾಮಯ್ಯಗೆ ಮಾಜಿ ಸಿಎಂ ಸಲಹೆ

| Published : Mar 28 2024, 12:53 AM IST

ದುರಂಕಾರದ ಮಾತು ಬಿಟ್ಟು, ಕೊಡುಗೆ ನೀಡಿ: ಸಿಎಂ ಸಿದ್ದರಾಮಯ್ಯಗೆ ಮಾಜಿ ಸಿಎಂ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ನಾವು ಮೈತ್ರಿ ಮಾಡಿಕೊಂಡಿರುವುದು ಅಧಿಕಾರಕ್ಕಾಗಿ ಅಲ್ಲ. ರಾಜ್ಯದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ. ಕಾವೇರಿ, ಕೃಷ್ಣ ಸೇರಿದಂತೆ ಅನೇಕ ಸಮಸ್ಯೆಗಳು ಕಣ್ಣ ಮುಂದಿದೆ. ಅದು ಸರಿಯಾಗಬೇಕಾದರೆ ನಾವು ಒಂದಾಗಬೇಕು. ನಮ್ಮದು ಪ್ರಾದೇಶಿಕ ಪಕ್ಷ, ಹಣಕಾಸು ಸಮಸ್ಯೆ ಇದೆ. ಮತ್ತೆ ಮೋದಿ ಅವರು ಪ್ರಧಾನಿ ಆಗುವುದರಿಂದ ರಾಜ್ಯದ ಸಮಸ್ಯೆ ಬಗೆಹರಿಸಿಕೊಳ್ಳಬಹುದು

ಕನ್ನಡಪ್ರಭ ವಾರ್ತೆ ಮೈಸೂರು

ಮುಖ್ಯಮಂತ್ರಿ ಪದವಿ ಯಾರಿಗೂ ಶಾಶ್ವತ ಅಲ್ಲ. ಎರಡನೇ ಬಾರಿ ಸಿಎಂ ಆಗಿದ್ದೀರಿ. ನಿಮ್ಮ ದುರಂಕಾರದ ಮಾತು ಪಕ್ಕಕ್ಕಿಟ್ಟು, ರಾಜಕೀಯ ಜೀವನ ಕಡೆಘಟ್ಟದಲ್ಲಿರುವ ನೀವು ನಾಡಿನ ಜನರಿಗೆ ಏನಾದು ಕೊಡುಗೆ ನೀಡಿ ಹೋಗಲು ಪ್ರಯತ್ನಿಸಿ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಬುಧವಾರ ನಡೆದ ಬಿಜೆಪಿ- ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ನಾವು ಮೈತ್ರಿ ಮಾಡಿಕೊಂಡಿರುವುದು ಅಧಿಕಾರಕ್ಕಾಗಿ ಅಲ್ಲ. ರಾಜ್ಯದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ. ಕಾವೇರಿ, ಕೃಷ್ಣ ಸೇರಿದಂತೆ ಅನೇಕ ಸಮಸ್ಯೆಗಳು ಕಣ್ಣ ಮುಂದಿದೆ. ಅದು ಸರಿಯಾಗಬೇಕಾದರೆ ನಾವು ಒಂದಾಗಬೇಕು. ನಮ್ಮದು ಪ್ರಾದೇಶಿಕ ಪಕ್ಷ, ಹಣಕಾಸು ಸಮಸ್ಯೆ ಇದೆ. ಮತ್ತೆ ಮೋದಿ ಅವರು ಪ್ರಧಾನಿ ಆಗುವುದರಿಂದ ರಾಜ್ಯದ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದರು.

ನಮ್ಮ ನೀರು, ನಮ್ಮ ಹಕ್ಕು ಎಂದು ಮೇಕೆದಾಟು ಪಾದಯಾತ್ರೆ ನಡೆಸಿದಿರಿ. ಬಳಿಕ ತಮಿಳುನಾಡಿಗೆ ನೀರು ಹರಿಸಿದಿರಿ. ಈಗ ಬಿಜೆಪಿ ಅವರಿಗೆ ಮೇಕೆದಾಟು ಯೋಜನೆಗೆ ಅನುಮತಿ ನೀಡಿ ಎಂದು ಕೇಳುವುದಾದರೆ ಅಂದು ಪಾದಯಾತ್ರೆ ಯಾಕೆ ಮಾಡಿದಿರಿ? ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ. ಎಲ್ಲಾ ಪತ್ರಿಕೆಯ ಮುಖಪುಟದಲ್ಲಿ ನುಡಿದಂತೆ ನಡೆದಿದ್ದೇವೆ ಎಂಬ ಗ್ಯಾರಂಟಿ ಜಾಹೀರಾತು. ಅವರ ಫೋಟೋ ಇದೆ. ಇತ್ತ ಕೇಂದ್ರ ಸರ್ಕಾರ ಹಣ ನೀಡಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ತಾವು 15 ಬಾರಿ ಹಣಕಾಸು ಬಾರಿ ಸಚಿವರಾಗಿ ಬಜೆಟ್ ಮಂಡಿಸಿದರೂ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೇಳುತ್ತಾರೆ. ಉತ್ತರ ಕರ್ನಾಟಕ ಕೂಡಲ ಸಂಗಮದ ಹೆಸರಿನಲ್ಲಿ ಪಾಯಾತ್ರೆ ಮಾಡಿದರು. ಕಾಂಗ್ರೆಸ್ ನಡಿಗೆ ಕೃಷ್ಣದ ಕಡೆಗೆ ಎಂದು ಘೋಷೆ ಕೂಗಿದರು. ಬಳಿಕ ಐದು ವರ್ಷ ಸಿಎಂ ಆದರು. ಆಗ ಕೃಷ್ಣ ನೀರು ಎಲ್ಲಿಗೆ ಹೋಯಿತು. ಅವರ ನಡಿಗೆ ಅಧಿಕಾರದ ಕಡೆಗೆ ಹೋಯಿತು ಎಂದು ಅವರು ಹೇಳಿದರು.

ಬಳಿಕ ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಡಿಎಂಕೆ ಪಕ್ಷ ಕಾಂಗ್ರೆಸ್ ಗೆ ಆಪ್ತವಾಗಿದೆ. ಜತೆಗೆ ಯಾವುದೇ ಕಾರಣಕ್ಕೂ ಮೇಕೆದಾಟು ಕಟ್ಟಲು ಅವಕಾಶ ನೀಡಲ್ಲ ಎಂದು ಡಿಎಂಕೆ ಹೇಳಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ದೇಶದ ಒಂದು ಭದ್ರತೆಗೆ ಹಾಗೂ ಸುಙದ್ರ ಸರ್ಕಾರ ರಚನೆಯಾಗಬೇಕು. ಈ ಹಿನ್ನೆಲೆಯಲ್ಲಿ ಈಗ ಮೊದಲ ಸಭೆ ನಡೆಯುತ್ತಿದೆ. ನನ್ನ ರಾಜಕಾರಣ ಆರಂಭದ ಮೊದಲ ಸಭೆ ಮೈಸೂರಿನಲ್ಲಿ ನಡೆದಿತ್ತು. ಆಗಿನಿಂದ ಈವರೆಗೆ ಇಲ್ಲಿನ ಜನರು ಅಪಾರ ಪ್ರೀತಿ ನೀಡಿದ್ದೀರಿ. ಮೂರು ಬಾರಿ ಹೃದಯ ಚಿಕಿತ್ಸೆ, ಎರಡು ಬಾರಿ ಮೆದಳು ತೊಂದರೆ ಆಗಿದೆ. ಆದರೂ ಉಳಿದಿದ್ದೇನೆ ಎಂದರೆ. ನಾಡಿನ ಬಡಕುಟುಂಬಕ್ಕೆ ಅನುಕೂಲ ಕಲ್ಪಿಸಲು ಉಳಿದಿದ್ದೇನೆ ಎಂಬ ಭಾವನೆ ನನ್ನಲ್ಲಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಅಭ್ಯರ್ಥಿಗಳಾದ ಯದುವೀರ್, ಎಸ್. ಬಾಲರಾಜ್, ಸಂಸದ ಪ್ರತಾಪ ಸಿಂಹ, ಮಾಜಿ ಸಚಿವರಾದ ಅಶ್ವತ್ಥನಾರಾಯಣ್, ಎನ್. ಮಹೇಶ್, ಎಸ್.ಎ. ರಾಮದಾಸ್, ಸಾ.ರಾ. ಮಹೇಶ್, ಶಾಸಕರಾದ ಜಿ.ಟಿ. ದೇವೇಗೌಡ. ಜಿ.ಡಿಯ ಹರೀಶ್ ಗೌಡ, ಎಂ.ಆರ್. ಮಂಜುನಾಥ್, ಸಿ.ಎನ್. ಮಂಜೇಗೌಡ, ಟಿ.ಎಸ್. ಶ್ರೀವತ್ಸ, ಜಿಲ್ಲಾಧ್ಯಕ್ಷ ಎನ್. ನರಸಿಂಹಸ್ವಾಮಿ, ನಗರಾಧ್ಯಕ್ಷ ಟಿ.ಕೆ. ಚಲುವೇಗೌಡ ಮೊದಲಾದವರು ಇದ್ದರು.