ಇವರು ಸ್ಥಾಪಿಸಿದ ದ.ಸಂ.ಸ ನಿಂದ ಕರ್ನಾಟಕದ ದಲಿತ ಚಳವಳಿ, ರೈತ ಚಳವಳಿ, ಮಹಿಳಾ ಚಳವಳಿ, ಕನ್ನಡ ಚಳವಳಿ, ಕಾರ್ಮಿಕ ಚಳವಳಿ, ಬಹುಜನ ಚಳವಳಿ, ಬೌದ್ಧ ಚಳವಳಿಗೆ ಪ್ರೇರಣೆ ಮತ್ತು ಶಕ್ತಿ ತುಂಬಿರುವುದು ಇತಿಹಾಸವಾಗಿದೆ. ರಾಜ್ಯದಲ್ಲಿ, ದೇಶದಲ್ಲಿ, ಜಗತ್ತಿನಲ್ಲಿ ಯಾವ ಜಾತಿ, ಧರ್ಮ, ಜನಾಂಗದವರಿಗೆ ಅನ್ಯಾಯವಾದರೂ ಅದರ ವಿರುದ್ಧ ಹೋರಾಡುವ ಎಲ್ಲಾ ಜಾತಿ, ಧರ್ಮದವರನ್ನು ಕೂಡಿಸಿಕೊಂಡು ಚಳವಳಿ ರೂಪಿಸುವುದನ್ನು ಕಲಿಸಿಕೊಟ್ಟ ದಸಂಸ ಬಗ್ಗೆ ಹಗುರವಾಗಿ ಮಾತಾನಾಡಿರುವುದು ಖಂಡನೀಯ ಎಂದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ದಸಂಸ ಹಾಗೂ ನೀಲಿ ಶಾಲಿನ ಬಗ್ಗೆ ಹಗುರವಾಗಿ ಮಾತನಾಡಿ, ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ಗಡಿಪಾರು ಮಾಡಬೇಕೆಂದು ದಸಂಸ ಜಿಲ್ಲಾ ಸಂಚಾಲಕ ಯರಿಯೂರು ಸಿ.ರಾಜಣ್ಣ ಆಗ್ರಹಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟವು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ನೆಲಕ್ಕೆ ಬಾಬಾಸಾಹೇಬ್ ಅಂಬೇಡ್ಕರ್‌ರ ವಿಚಾರಗಳನ್ನು ಹರಡಿದ್ದೇ ಪ್ರೊ. ಬಿ. ಕೃಷ್ಣಪ್ಪ ಮತ್ತು ಇತರೆ ಹಿರಿಯರು.
ಇವರು ಸ್ಥಾಪಿಸಿದ ದ.ಸಂ.ಸ ನಿಂದ ಕರ್ನಾಟಕದ ದಲಿತ ಚಳವಳಿ, ರೈತ ಚಳವಳಿ, ಮಹಿಳಾ ಚಳವಳಿ, ಕನ್ನಡ ಚಳವಳಿ, ಕಾರ್ಮಿಕ ಚಳವಳಿ, ಬಹುಜನ ಚಳವಳಿ, ಬೌದ್ಧ ಚಳವಳಿಗೆ ಪ್ರೇರಣೆ ಮತ್ತು ಶಕ್ತಿ ತುಂಬಿರುವುದು ಇತಿಹಾಸವಾಗಿದೆ. ರಾಜ್ಯದಲ್ಲಿ, ದೇಶದಲ್ಲಿ, ಜಗತ್ತಿನಲ್ಲಿ ಯಾವ ಜಾತಿ, ಧರ್ಮ, ಜನಾಂಗದವರಿಗೆ ಅನ್ಯಾಯವಾದರೂ ಅದರ ವಿರುದ್ಧ ಹೋರಾಡುವ ಎಲ್ಲಾ ಜಾತಿ, ಧರ್ಮದವರನ್ನು ಕೂಡಿಸಿಕೊಂಡು ಚಳವಳಿ ರೂಪಿಸುವುದನ್ನು ಕಲಿಸಿಕೊಟ್ಟ ದಸಂಸ ಬಗ್ಗೆ ಹಗುರವಾಗಿ ಮಾತಾನಾಡಿರುವುದು ಖಂಡನೀಯ ಎಂದರು.ಬಾಬಾಸಾಹೇಬರು ಕೇವಲ ಥಾಟ್ಸ್ ಆನ್ ಪಾಕಿಸ್ತಾನ ಪುಸ್ತಕ ಮಾತ್ರ ಬರೆದಿಲ್ಲ. ಜಾತಿ ವಿನಾಶ, ಭಾರತದಲ್ಲಿ ಜಾತಿಗಳು, ಹಿಂದೂಧರ್ಮದ ಒಗಟುಗಳು, ಶೂದ್ರರು ಯಾರು ಅಸ್ಪೃಶ್ಯರು ಯಾರು?, ಗಾಂಧಿ ಮತ್ತು ಕಾಂಗ್ರೆಸ್ ಅಸ್ಪೃಶ್ಯರಿಗೆ ಮಾಡಿದ್ದೇನು?, ಕ್ರಾಂತಿ ಪ್ರತಿಕ್ರಾಂತಿ ಇಂಥ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ನಿನಗೆ ನಿಜವಾಗಿಯೂ ದೇಶದ ಬಗ್ಗೆ ಕಾಳಜಿ ಇದ್ದರೆ ಇವುಗಳನ್ನು ಓದಿಕೊಂಡು ಬಾಬಾಸಾಹೇಬರ ಬಗ್ಗೆ ಮಾತಾನಾಡುವುದನ್ನು ಕಲಿಯಲಿ ಎಂದರು.
ನೀಲಿ ಶಾಲು, ನೀಲಿ ಬಾವುಟ ಎಂಬುದು ಅಂಬೇಡ್ಕರ್ ವಾದದ ವೈಶಾಲ್ಯತೆ, ಸೌಹಾರ್ದತೆ, ಸಮಾನತೆ, ಸೋದರತೆ, ನ್ಯಾಯ ಮತ್ತು ಸ್ವಾಭಿಮಾನದ ಸಂಕೇತ. ಹಾಗಾಗಿಯೇ ಬಾಬಾ ಸಾಹೇಬರು ತಾವು ಮೊಟ್ಟ ಮೊದಲು ೧೯೩೬ ರಲ್ಲಿ ಸ್ಥಾಪಿಸಿದ ಇಂಡಿಪೆಂಡೆಂಟ್ ಲೇಬರ್ ಪಾರ್ಟಿಗೆ ನೀಲಿ ಬಣ್ಣದ ಬಾವುಟ ಆಯ್ಕೆ ಮಾಡಿಕೊಂಡರು. ಅಂಥ ನೀಲಿ ಶಾಲಿನ ಬಗ್ಗೆ ಅದನ್ನು ಧರಿಸುವ ಸಮುದಾಯಗಳ ಬಗ್ಗೆ ಅವಹೇಳನಕಾರಿ ಮಾತನಾಡಿರುವುದು ಖಂಡನೀಯ, ಕೂಡಲೇ ಮಾಜಿ ಸಂಸದ ಪ್ರತಾಪ್ ಸಿಂಹ ದಸಂಸ ಸಂಘಟನೆಗಳ ಮುಂದೆ ಕ್ಷಮೆ ಕೇಳಬೇಕು ಎಂದರು.ನರಸೀಪುರದಲ್ಲಿ ನಡೆದ ಶೋಭಾಯಾತ್ರೆ ಸಂದರ್ಭದಲ್ಲಿ ಮಸೀದಿ ಮುಂದೆಯೇ ನಿಂತು ಕಾನೂನುಬಾಹಿರವಾಗಿ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿ ಪ್ರಚೋದಿಸಿ ಮಾತನಾಡಿದ್ದು, ಕರ್ತವ್ಯ ಪಾಲಿಸುತ್ತಿದ್ದ ಪೊಲೀಸ್ ಅಧಿಕಾರಿಗೆ ಧಮ್ಕಿ ಹಾಕಿರುವುದರಿಂದ ಈತನ ಮೇಲೆ ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿ ಈತನನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಸಿ.ಎಂ ಶಿವಣ್ಣ ಮಾತನಾಡಿ, ಅ. ೨ರಂದು ಟಿ.ನರಸೀಪುರದಲ್ಲಿ ಪ್ರತಾಪ್‌ಸಿಂಹ ವಿರುದ್ಧ ರ್‍ಯಾಲಿ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕೆಂದು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಬಸವರಾಜು ಕೆರಹಳ್ಳಿ, ಸುರೇಶ್ ರಾಮಸಮುದ್ರ, ಪ್ರಭಾವತಿ, ದೊರೆಸ್ವಾಮಿ, (ಜಾನಿ) ಇದ್ದರು.