ಸಂಕ್ರಾಂತಿ ಹಬ್ಬಕ್ಕೆ ಸಂಬಂಧಿಸಿದ ವ್ಯಾಪಾರ ಜೋರಾಗಿತ್ತು. ಸಂಕ್ರಾಂತಿ ಎಂದರೆ ಎಳ್ಳು-ಬೆಲ್ಲ, ಕಬ್ಬು, ಬಾಳೆಹಣ್ಣು, ಅವರೆಕಾಯಿ ಸೇರಿದಂತೆ ವಿವಿಧ ತರಕಾರಿಗಳು ಪ್ರಮುಖವಾಗಿದ್ದು, ಅವುಗಳ ಖರೀದಿಗೆ ಜನರು ಹೆಚ್ಚಿನ ಆಸಕ್ತಿ ತೋರಿದರು. ಕಬ್ಬು ಜೋಡಿಗೆ ೧೦೦ ರಿಂದ ೧೨೦ ವರೆಗೆ ಮಾರಾಟವಾಗಿದ್ದು, ಪುಟ್ಟಬಾಳೆ ಒಂದು ಕಿಲೋಗೆ ೧೦೦ ರಿಂದ ೧೬೦ರವರೆಗೆ ಬೆಲೆ ಕಂಡುಬಂತು. ಅವರೆಕಾಯಿ ಎರಡು ಕಿಲೋಗೆ ೧೦೦ಕ್ಕೆ ಮಾರಾಟವಾಗಿದ್ದು, ಸೇವಂತಿಗೆ ಹೂವು ಒಂದು ಮರೆಗೆ ೫೦ ರಿಂದ ೧೦೦ರವರೆಗೆ ದರ ಇತ್ತು. ವ್ಯಾಪಾರಿಗಳಿಗೆ ಉತ್ತಮ ವಹಿವಾಟು ನಡೆಯಿತು. ಹಬ್ಬದ ಸಂಭ್ರಮಕ್ಕೆ ತಕ್ಕಂತೆ ಹಾಸನ ನಗರದ ಮಾರುಕಟ್ಟೆಗಳು ಕಳೆಗಟ್ಟಿದ ದೃಶ್ಯ ಕಂಡುಬಂದವು.

ಹಾಸನ: ಸಂಕ್ರಾಂತಿ ಹಬ್ಬ ಹಿನ್ನೆಲೆಯಲ್ಲಿ ಹಬ್ಬದ ಮುನ್ನಾದಿನವಾದ ಬುಧವಾರ ನಗರದಲ್ಲಿ ಭರ್ಜರಿ ವ್ಯಾಪಾರ ಕಂಡುಬಂತು. ಬೆಲೆ ಏರಿಕೆಯ ನಡುವೆಯೂ ಹಬ್ಬದ ಅಗತ್ಯ ವಸ್ತುಗಳನ್ನು ಖರೀದಿಸಲು ಸಾರ್ವಜನಿಕರು ಮಾರುಕಟ್ಟೆಗಳಿಗೆ ಮುಗಿ ಬಿದ್ದರು.

ನಗರದ ಮಹಾವೀರ ವೃತ್ತದ ನಾಲ್ಕು ರಸ್ತೆಗಳ ಬದಿಗಳಲ್ಲಿ ಸಂಕ್ರಾಂತಿ ಹಬ್ಬಕ್ಕೆ ಸಂಬಂಧಿಸಿದ ವ್ಯಾಪಾರ ಜೋರಾಗಿತ್ತು. ಸಂಕ್ರಾಂತಿ ಎಂದರೆ ಎಳ್ಳು-ಬೆಲ್ಲ, ಕಬ್ಬು, ಬಾಳೆಹಣ್ಣು, ಅವರೆಕಾಯಿ ಸೇರಿದಂತೆ ವಿವಿಧ ತರಕಾರಿಗಳು ಪ್ರಮುಖವಾಗಿದ್ದು, ಅವುಗಳ ಖರೀದಿಗೆ ಜನರು ಹೆಚ್ಚಿನ ಆಸಕ್ತಿ ತೋರಿದರು. ಕಬ್ಬು ಜೋಡಿಗೆ ೧೦೦ ರಿಂದ ೧೨೦ ವರೆಗೆ ಮಾರಾಟವಾಗಿದ್ದು, ಪುಟ್ಟಬಾಳೆ ಒಂದು ಕಿಲೋಗೆ ೧೦೦ ರಿಂದ ೧೬೦ರವರೆಗೆ ಬೆಲೆ ಕಂಡುಬಂತು. ಅವರೆಕಾಯಿ ಎರಡು ಕಿಲೋಗೆ ೧೦೦ಕ್ಕೆ ಮಾರಾಟವಾಗಿದ್ದು, ಸೇವಂತಿಗೆ ಹೂವು ಒಂದು ಮರೆಗೆ ೫೦ ರಿಂದ ೧೦೦ರವರೆಗೆ ದರ ಇತ್ತು. ವ್ಯಾಪಾರಿಗಳಿಗೆ ಉತ್ತಮ ವಹಿವಾಟು ನಡೆಯಿತು. ಹಬ್ಬದ ಸಂಭ್ರಮಕ್ಕೆ ತಕ್ಕಂತೆ ಹಾಸನ ನಗರದ ಮಾರುಕಟ್ಟೆಗಳು ಕಳೆಗಟ್ಟಿದ ದೃಶ್ಯ ಕಂಡುಬಂದವು.