ಸಾರಾಂಶ
ಎಕ್ಸಪರ್ಟ್ಸ್ ಪಿಯು ಕಾಲೇಜ್‌ನಲ್ಲಿ 2024-25ನೇ ಸಾಲಿನ ಎಕ್ಸಪರ್ಟ್ಸ್ ಟ್ಯಾಲೆಂಟ್ ಬಹುಮಾನ ವಿತರಣಾ ಕಾರ್ಯಕ್ರಮ ಜರುಗಿತು.
ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಎಕ್ಸಪರ್ಟ್ಸ್ ಪಿಯು ಕಾಲೇಜ್‌ನಲ್ಲಿ 2024-25ನೇ ಸಾಲಿನ ಎಕ್ಸಪರ್ಟ್ಸ್ ಟ್ಯಾಲೆಂಟ್ ಬಹುಮಾನ ವಿತರಣಾ ಕಾರ್ಯಕ್ರಮ ಜರುಗಿತು. 2024-25ನೇ ಸಾಲಿನ ಎಕ್ಸಪರ್ಟ್ಸ್ ಟ್ಯಾಲೆಂಟ್ ಕಾಂಟೆಸ್ಟ್‌ನಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಿಂತ ಮೊದಲು ಮಾದರಿ ವಾರ್ಷಿಕ ಪರೀಕ್ಷೆ ತೆಗೆದುಕೊಳ್ಳಲಾಗಿತ್ತು. ಪರೀಕ್ಷೆಯಲ್ಲಿ ಸುಮಾರು 200ಕ್ಕೂ ಅಧಿಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು, 150ಕ್ಕೂ ಅಧಿಕ ಪ್ರಥಮ ಪಿಯುಸಿ ವಿದ್ಯಾರ್ಥಿಗಳು, 250ಕ್ಕೂ ಅಧಿಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಕಳೆದ ಭಾನುವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ನಿವೃತ್ತ ಸೇನಾಧಿಕಾರಿ ಹಾಗೂ ಚ.ಕಿತ್ತೂರು ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರದ ಸಂಸ್ಥಾಪಕ ಡಾ.ಪರ್ವೀಜ್ ಹವಾಲ್ದಾರ್ ಅವರು ಬಹುಮಾನ ಮತ್ತು ಸ್ಕಾಲರಶಿಪ್ ಕೊಪನ್‌ಗಳನ್ನು ವಿತರಿಸಿ ವಿತರಿಸಿ ಶುಭ ಹಾರೈಸಿದರು.
ಎಕ್ಸಪರ್ಟ್ಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ನಾಗೇಶ್ ದಂಡಾಪುರೆ ಅವರು ಇಟಿಸಿ ಎಕ್ಸಾಮ್‌ನ ಮಹತ್ವ ತಿಳಿಸಿ ₹4 ಲಕ್ಷಕ್ಕೂ ಅಧಿಕ ಸ್ಕಾಲರಶಿಪ್ ಕೂಪನ್‌ಗಳನ್ನು ವಿತರಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಎಕ್ಸಪರ್ಟ್ಸ್ ಪಿಯು ಕಾಲೇಜ್‌ನ ಪ್ರಾಚಾರ್ಯ ರೂಪೇಶ್ ಪಾಟೀಲ ಕಾಲೇಜಿನ ಗುಣಮಟ್ಟ ಶಿಕ್ಷಣದ ಬಗ್ಗೆ ವಿವರಿಸಿದರು. ಕಾಲೇಜಿನ ಕಾರ್ಯನಿರ್ವಾಹಕ ಮೈಲಾರ ತೆನಗಿ ಉಪಸ್ಥಿತರಿದ್ದರು. ಜಬ್ಬರ್ ಸನದಿ ವಂದಿಸಿದರು. ಸಿರಿನ್ ದರ್ಗಾ ಕಾರ್ಯಕ್ರಮವನ್ನು ನಿರೂಪಿಸಿದರು.