ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರುಅಕ್ರಮವಾಗಿ ಇಡಲಾಗಿದ್ದ ಸಿಡಿಮದ್ದು ತಿಂದು ಜಾನುವಾರುಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಜರುಗಿದೆ.
ಕನ್ನಡಪ್ರಭ ವಾರ್ತೆ ಹನೂರು
ಅಕ್ರಮವಾಗಿ ಇಡಲಾಗಿದ್ದ ಸಿಡಿಮದ್ದು ತಿಂದು ಜಾನುವಾರುಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಜರುಗಿದೆ.ಕಿಡಿಗೇಡಿಗಳು ಗ್ರಾಮದ ಹೂರವಲಯದ ಜಮೀನೊಂದರಲ್ಲಿ ಇಡಲಾಗಿದ್ದ ಸಿಡಿಮದ್ದು ತಿಂದು ಗ್ರಾಮದ ರೈತ ಮಹಿಳೆ ಅಕ್ಕಮ್ಮ ಎಂಬವರಿಗೆ ಸೇರಿದ ಹಸುಗಳ ಮುಖದ ಭಾಗಗಳ ಸ್ಥಿತಿ ಗಂಭೀರವಾಗಿದೆ.ಘಟನೆಯ ವಿವರ: ದಿನನಿತ್ಯದಂತೆ ರಾಸುಗಳು ಜಮೀನಿನ ಸಮೀಪ ಮೇವನ್ನು ಅರಸಿ ತೆರಳಿದ್ದ ವೇಳೆ ಕಿಡಿಗೇಡಿಗಳು ಸಿಡಿಮದ್ದನ್ನು ಜೋಳದ ಸಂಡಿನ ಒಳಗಡೆ ಅಡಗಿಸಿಟ್ಟಿದ್ದರು. ಅದನ್ನು ತಿಂದ ಜಾನುವಾರುಗಳು ಮುಖದ ಭಾಗ ಗಂಭೀರವಾಗಿ ಗಾಯಗೊಂಡು ನರಳುತ್ತಿತ್ತು. ಅಧಿಕಾರಿಗಳ ದೌಡು: ಘಟನೆಯ ವಿಚಾರ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ಹಾಗೂ ರಾಮಾಪುರ ಪೊಲೀಸ್ ಠಾಣೆಯ ಅಧಿಕಾರ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಕ್ರಮಕ್ಕೆ ಒತ್ತಾಯ: ಮೂಕ ಪ್ರಾಣಿ ಜಾನುವಾರುಗಳ ಕೊಲ್ಲಲು ಹಾಗೂ ಕಾಡುಪ್ರಾಣಿಗಳ ಬೇಟೆಗಾಗಿ ಇಡಲಾಗಿದ್ದ ಸಿಡಿಮದ್ದು ತಿಂದು ಜಾನುವಾರುಗಳು ಸಾವನ್ನಪ್ಪಿರುವುದು. ರೈತ ಮಹಿಳೆಗೆ ತುಂಬಾ ನಷ್ಟ ಉಂಟಾಗಿದೆ. ಜೊತೆಗೆ ಮೂಕ ಪ್ರಾಣಿಗಳ ಕೊಲ್ಲಲು ಇಡಲಾಗಿರುವ ಸಿಡಿಮದ್ದು ಇಟ್ಟಿರುವ ವ್ಯಕ್ತಿಗಳ ಬಗ್ಗೆ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ ಪತ್ತೆ ಹಚ್ಚಿ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯಿಸಿದ್ದಾರೆ.