ಅತಿವೃಷ್ಟಿ ಪರಿಹಾರದ ದಾಖಲಾತಿ ಒದಗಿಸುವ ಅವಧಿ ಹೆಚ್ಚಿಸಿ

| Published : Oct 17 2024, 12:02 AM IST

ಅತಿವೃಷ್ಟಿ ಪರಿಹಾರದ ದಾಖಲಾತಿ ಒದಗಿಸುವ ಅವಧಿ ಹೆಚ್ಚಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆಣ್ಣಿಹಳ್ಳ ಹಾಗೂ ತುಪ್ಪರಿ ಹಳ್ಳದ ಪ್ರವಾಹದಿಂದ ಹಾನಿಗೊಳಗಾದ ರೈತರ ಭೂಮಿಯ ದಾಖಲಾತಿ ಸಲ್ಲಿಸಲು ಕೃಷಿ ಇಲಾಖೆ ಅ. 15 ಕೊನೆಯ ದಿನ ಹೇಳಿತ್ತು. ಆದರೆ, ಇಷ್ಟೇ ಅವಧಿಯೊಳಗೆ ವಿತರಿಸಬೇಕು ಎಂಬ ಮಾಹಿತಿ ರೈತರಿಗೆ ತಿಳಿಯದ ಹಿನ್ನೆಲೆಯಲ್ಲು ಇನ್ನೂ ಹಲವು ರೈತರು ದಾಖಲಾತಿ ನೀಡಿಲ್ಲ.

ನವಲಗುಂದ:

ಪ್ರವಾಹ ಹಾಗೂ ಅತಿವೃಷ್ಟಿಯಿಂದ ಬೆಳೆಗಳು ಹಾನಿಯಾದ ರೈತರಿಗೆ 72 ಗಂಟೆ ಒಳಗೆ ಪರಿಹಾರಕ್ಕೆ ದಾಖಲಾತಿ ಒದಗಿಸಬೇಕೆಂದು ಕೃಷಿ ಇಲಾಖೆ ಸೂಚಿಸಿದೆ. ಆದರೆ, ರೈತರಿಗೆ ಸರಿಯಾದ ಮಾಹಿತಿ ದೊರಕದೇ ಇರುವುದರಿಂದ ಇಲಾಖೆಯು ಈ ಕಾಲಮಿತಿ ಅವಧಿ ವಿಸ್ತರಿಸಬೇಕು ಎಂದು ಬಿಜೆಪಿ ಅಧ್ಯಕ್ಷ ಗಂಗಪ್ಪ ಮನಮಿ ಆಗ್ರಹಿಸಿದರು.

ಪಟ್ಟಣದ ತಹಸಿಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಬೆಣ್ಣಿಹಳ್ಳ ಹಾಗೂ ತುಪ್ಪರಿ ಹಳ್ಳದ ಪ್ರವಾಹದಿಂದ ಹಾನಿಗೊಳಗಾದ ರೈತರ ಭೂಮಿಯ ದಾಖಲಾತಿ ಸಲ್ಲಿಸಲು ಕೃಷಿ ಇಲಾಖೆ ಅ. 15 ಕೊನೆಯ ದಿನ ಹೇಳಿತ್ತು. ಆದರೆ, ಇಷ್ಟೇ ಅವಧಿಯೊಳಗೆ ವಿತರಿಸಬೇಕು ಎಂಬ ಮಾಹಿತಿ ರೈತರಿಗೆ ತಿಳಿಯದ ಹಿನ್ನೆಲೆಯಲ್ಲು ಇನ್ನೂ ಹಲವು ರೈತರು ದಾಖಲಾತಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಇದರ ಅವಧಿ ಹೆಚ್ಚಳಕ್ಕೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಸಿದ್ದನಗೌಡ ಪಾಟೀಲ, ಮಂಜುನಾಥ ಇಮ್ಮಡಿ, ನಾಗಪ್ಪ ಹರ್ತಿ, ಜಯಪ್ರಕಾಶ ಬದಾಮಿ, ದೇವರಾಜ ಕರಿಯಪ್ಪನವರ, ಹೊಳೆಯಪ್ಪ ಹೊಳೆಯಣ್ಣವರ, ಮಹ್ಮದ ಬಿಜಾಪುರ, ಸಂತೋಷ ಹೊಸಮನಿ, ಶ್ರೀಧರ ಪಟ್ಟಣಶೆಟ್ಟಿ, ಕಲ್ಮೆಶ ಮಾದರ, ಈರಣ್ಣ ಬಳಿಗೆರ, ಮಲ್ಲಿಕಾರ್ಜುನ ಸಂಗನಗೌಡರ ಸೇರಿದಂತೆ ಹಲವರಿದ್ದರು.