ಎಂ.ಫಿಲ್ , ಪಿ.ಎಚ್.ಡಿ ನೋಂದಣಿಗೆ ಅವಧಿ ವಿಸ್ತರಣೆ

| Published : Oct 10 2023, 01:01 AM IST

ಸಾರಾಂಶ

ರಾಮನಗರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2023-24ನೇ ಸಾಲಿನಲ್ಲಿ ಎಂ.ಫಿಲ್ ಮತ್ತು ಪಿ.ಹೆಚ್.ಡಿಗೆ ನೋಂದಣಿಯಾಗಿ ವ್ಯಾಸಂಗ ಮಾಡುತ್ತಿರುವ ಅರ್ಹ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ರಾಮನಗರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2023-24ನೇ ಸಾಲಿನಲ್ಲಿ ಎಂ.ಫಿಲ್ ಮತ್ತು ಪಿ.ಹೆಚ್.ಡಿಗೆ ನೋಂದಣಿಯಾಗಿ ವ್ಯಾಸಂಗ ಮಾಡುತ್ತಿರುವ ಅರ್ಹ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು ಆನ್‌ಲೈನ್ ಮೂಲಕ https://sevasindhu.karnataka.gov.in/sevasindhu/DepartmentServices ಈ ಲಿಂಕ್ ಮೂಲಕ ಎಂ.ಫಿಲ್ ಅಥವಾ ಪಿ.ಹೆಚ್.ಡಿಗಳಲ್ಲಿ ಯಾವುದಾದರೂ ಒಂದು ಕೋರ್ಸ್ ಗೆ ಪ್ರಸ್ತುತ ಅರ್ಜಿಸಲ್ಲಿಸಲು ಅ.31 ಕೊನೆಯ ದಿನವಾಗಿ ವಿಸ್ತರಿಸಲಾಗಿದ್ದು, ಅರ್ಹ ಅಲ್ಪಸಂಖ್ಯಾತರ ಅಭ್ಯರ್ಥಿಗಳು ಅರ್ಜಿ ಸ್ಲಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ರಾಮನಗರ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಚೇರಿ, ಶ್ರೀ ದನ್‌ಜಿ ವೇಲ್ ಜಿ ಪಟೇಲ್ ಕಟ್ಟಡ, 1ನೇ ಮಹಡಿ, ಶ್ರೀ ರಾಮ್ ಕಾಂಪ್ಲೆಕ್ಸ್, ವಿನಾಯಕನಗರ, ಬಿ.ಎಂ. ರಸ್ತೆ, ರಾಮನಗರ ಇಲ್ಲಿಗೆ ಕಚೇರಿಯ ವೇಳೆಯಲ್ಲಿ ಖುದ್ದು ಸಂಪರ್ಕಿಸಬಹುದು ಅಥವಾ ದೂ: 080-27271104 ನ್ನು ಸಂಪರ್ಕಿಸಬಹುದೆಂದು ರಾಮನಗರ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.