ಸಾರಾಂಶ
ವಿದ್ಯೆ ಒಂದೇ ನಮ್ಮ ಬದುಕನ್ನು ಪರಿಪೂರ್ಣಗೊಳಿಸುವುದಿಲ್ಲ. ವಿದ್ಯೆ ಜೊತೆಗೆ ವಿನಯ, ಸೌಜನ್ಯ, ಮಾನವೀಯತೆಯ ಮೌಲ್ಯಗಳು, ವಿವಿಧ ಕಲೆಗಳ ಬಗ್ಗೆ ತಿಳಿದು ಕೊಂಡಿರಬೇಕು ಎಂದರು. ಸುಜಯ್ ಚಿತ್ರಕಲಾ ಅಕಾಡೆಮಿ ಆಯೋಜಿಸಿದ್ದ ತಾಲೂಕು ಮಟ್ಟದ ಸಬ್ ಜೂನಿಯರ್, ಜೂನಿಯರ್, ಸೀನಿಯರ್ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ ೨೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಾದ ಚಿತ್ರಕಲೆ, ಸಂಗೀತ, ಕ್ರೀಡೆ, ಫೋಟೋಗ್ರಫಿ ಬಗ್ಗೆ ಉತ್ತೇಜನ ಮೂಡಿಸಿದಾಗ ಕಲಿಕೆಯ ಆಸಕ್ತಿ ಹಾಗೂ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಸಂಸದ ಶ್ರೇಯಶ್ ಪಟೇಲ್ ಅಭಿಪ್ರಾಯಪಟ್ಟರು.
ಪಟ್ಟಣದ ಸೋಷಿಯಲ್ ಕ್ಲಬ್ ಸಭಾಂಗಣದಲ್ಲಿ ಸ್ವಜಯ್ ಚಿತ್ರಕಲಾ ಅಕಾಡೆಮಿಯವರು ಭಾನುವಾರ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯೆ ಒಂದೇ ನಮ್ಮ ಬದುಕನ್ನು ಪರಿಪೂರ್ಣಗೊಳಿಸುವುದಿಲ್ಲ. ವಿದ್ಯೆ ಜೊತೆಗೆ ವಿನಯ, ಸೌಜನ್ಯ, ಮಾನವೀಯತೆಯ ಮೌಲ್ಯಗಳು, ವಿವಿಧ ಕಲೆಗಳ ಬಗ್ಗೆ ತಿಳಿದು ಕೊಂಡಿರಬೇಕು ಎಂದರು. ಸುಜಯ್ ಚಿತ್ರಕಲಾ ಅಕಾಡೆಮಿ ಆಯೋಜಿಸಿದ್ದ ತಾಲೂಕು ಮಟ್ಟದ ಸಬ್ ಜೂನಿಯರ್, ಜೂನಿಯರ್, ಸೀನಿಯರ್ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ ೨೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಪ್ರಖ್ಯಾತ ಚಿತ್ರಕಲಾವಿದರಾದ ದೇಸಾಯಿ ಅವರು ಕೆಲವೇ ನಿಮಿಷಗಳಲ್ಲಿ ಪರಿಸರದ ಚಿತ್ರ ಬಿಡಿಸಿ ಸೋಷಿಯಲ್ ಕ್ಲಬ್‌ಗೆ ಕೊಡುಗೆಯಾಗಿ ನೀಡಿದರು. ವಿಜೇತರಿಗೆ ಸೋಷಿಯಲ್ ಕ್ಲಬ್ ಅಧ್ಯಕ್ಷ ಕೆ.ಎಂ. ಹೊನ್ನಪ್ಪ, ಕಾರ್ಯದರ್ಶಿ ಕೆ.ಆರ್. ಸುದರ್ಶನ್ ಬಾಬು, ಪ್ರಖ್ಯಾತ ಚಿತ್ರಕಲಾವಿದ ದೇಸಾಯಿ, ಶಂಕರ್ ನಾರಾಯಣ್ ಐತಾಳ್, ಅಕಾಡೆಮಿಯ ಶಿಕ್ಷಕಿ ಶ್ವೇತಾ, ಅಜಯ್, ಸುಜಯ್ ಬಹುಮಾನ ವಿತರಿಸಿದರು.