ಸಾರಾಂಶ
ಮಾರ್ಚ್ 3ರಂದು ಟೀಚ್ ಆಡಿಟೋರಿಯಂ ಚೆನ್ನೈನಲ್ಲಿ ಕಲಾಂ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ಅವರು ವಿಶ್ವ ದಾಖಲೆ ಗೌರವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಜಿಲ್ಲೆಯ ಕಂಬಿಹಳ್ಳಿ ನಿವಾಸಿ ಪ್ರಸ್ತುತ ಬೆಂಗಳೂರಿನ ಆರ್.ಟಿ. ನಗರದಲ್ಲಿರುವ ಡಿ.ಎಂ. ಧನಲಕ್ಷ್ಮಿ ಕುಮಾರಿ ಮತ್ತು ಕೆ. ಹುಲಿಯಪ್ಪಗೌಡ ಅವರ 14 ತಿಂಗಳ ಮಗು ಮನಸ್ಮಿತಾ ಅವರನ್ನು ಕಲಾಂ ವರ್ಲ್ಡ್ ರೆಕಾರ್ಡ್ಸ್ ಅವರು ಅಸಾಧಾರಣ ಗ್ರಹಣ ಶಕ್ತಿ ಪ್ರತಿಭೆ ಎಂದು ಗುರುತಿಸಿ ತಮ್ಮ ಪುಸ್ತಕದಲ್ಲಿ ನೋಂದಾಯಿಸಿದ್ದಾರೆಮಾರ್ಚ್ 3ರಂದು ಟೀಚ್ ಆಡಿಟೋರಿಯಂ ಚೆನ್ನೈನಲ್ಲಿ ಕಲಾಂ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ಅವರು ವಿಶ್ವ ದಾಖಲೆ ಗೌರವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಕೇವಲ 14 ತಿಂಗಳಲ್ಲಿ ಈ ಮಗು ದಾಖಲೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಮಗುವಿನ ತಾಯಿ ಡಿ.ಎಂ. ಧನಲಕ್ಷ್ಮಿ ಕುಮಾರಿ ಅವರು ಗೃಹಿಣಿಯಾಗಿದ್ದು, ತಂದೆ ಕೆ. ಹುಲಿಯಪ್ಪಗೌಡ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತಿ ಹೊಂದಿದ್ದಾರೆ. ಮನಸ್ಮಿತಾ ಅವರು ಕನ್ನಡ ಮತ್ತು ಇಂಗ್ಲಿಷ್ ಅಕ್ಷರಮಾಲೆ, ಕರ್ನಾಟಕದಲ್ಲಿ 8 ಜ್ಞಾನಪೀಠ ಪ್ರಶಸ್ತಿ ವಿಜೇತರು, ರಾಷ್ಟ್ರೀಯ ಪ್ರಾಣಿ, ಹಣ್ಣು, ಪಕ್ಷಿ, ಧ್ವಜ, ಹೂವು, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸಂಖ್ಯೆಗಳು, 17 ಹಣ್ಣುಗಳು ಮತ್ತು 26 ತರಕಾರಿಗಳು, 25 ಪಕ್ಷಿಗಳು, 27 ಪ್ರಾಣಿಗಳು, 12 ಕೀಟಗಳು ಮತ್ತು 5 ಸರೀಸೃಪಗಳು, 10 ಸ್ವಾತಂತ್ರ್ಯ ಹೋರಾಟಗಾರರು, 11 ಸಮುದ್ರ ಜೀವಿಗಳು, 7 ದೇಶದ ಧ್ವಜಗಳು, ಭಾರತದಲ್ಲಿನ 7 ಐತಿಹಾಸಿಕ ಸ್ಥಳ, 10 ಹೂವುಗಳು, 7 ಭಾರತೀಯ ಕರೆನ್ಸಿ, 10 ಬಣ್ಣಗಳು ಮತ್ತು 14 ಆಕಾರಗಳು, 7 ಆಟಿಕೆಗಳ ಹೆಸರುಗಳು, 11 ಸಸ್ಯ ಮತ್ತು 5 ಎಲೆಗಳು, 19 ದೇಹದ ಭಾಗಗಳು 7 ವಿಜ್ಞಾನಿಗಳು, 336 ವಿವಿಧ ವಸ್ತುಗಳು, ಒಟ್ಟು 500 ಪದಗಳನ್ನು ಗುರುತಿಸುತ್ತಾರೆ. ಈ ಹಿನ್ನೆಲೆ ಕಲಾಂ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ಮನಸ್ಮಿತಾ ಅವರನ್ನು ಅಸಾಧಾರಣ ಗ್ರಹಣ ಶಕ್ತಿ ಪ್ರತಿಭೆ ಎಂದು ಗುರುತಿಸಿ ಶ್ಲಾಘಿಸಿದೆ.