ಸಾರಾಂಶ
ಶ್ರೀ ಕೃಷ್ಣಾಪುರ ಮಠದಲ್ಲಿ ಕೃಷ್ಣ ಸೇವಾ ಬಳಗ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಆರೋಗ್ಯ ಇಲಾಖೆಯ ಅಂಧತ್ವ ನಿವಾರಣಾ ವಿಭಾಗ, ಪ್ರಸಾದ್ ನೇತ್ರಾಲಯ, ಜಿಲ್ಲಾಸ್ಪತ್ರೆಯ ರಕ್ತನಿಧಿಗಳ ಸಹಯೋಗದಲ್ಲಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ನೇತ್ರ ತಪಾಸಣೆ - ಪೊರೆ ಶಸ್ತ್ರಚಿಕಿತ್ಸೆ ಮತ್ತು ರಕ್ತದಾನ ಶಿಬಿರ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿದೇಹದಲ್ಲಿ ಎಲ್ಲ ಅಂಗಾಂಗಕ್ಕಿಂತಲೂ ಕಣ್ಣು ಬಹಳ ಮುಖ್ಯವಾದುದು. ಜೀವನವನ್ನು ಉತ್ತಮವಾಗಿ ಸಾಗಿಸಲು ಅವುಗಳ ರಕ್ಷಣೆ ಅಗತ್ಯ ಎಂದು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಹೇಳಿದರು.ಅವರು ಶ್ರೀ ಕೃಷ್ಣಾಪುರ ಮಠದಲ್ಲಿ ಕೃಷ್ಣ ಸೇವಾ ಬಳಗ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಆರೋಗ್ಯ ಇಲಾಖೆಯ ಅಂಧತ್ವ ನಿವಾರಣಾ ವಿಭಾಗ, ಪ್ರಸಾದ್ ನೇತ್ರಾಲಯ, ಜಿಲ್ಲಾಸ್ಪತ್ರೆಯ ರಕ್ತನಿಧಿಗಳ ಸಹಯೋಗದಲ್ಲಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ನಡೆದ ನೇತ್ರ ತಪಾಸಣೆ - ಪೊರೆ ಶಸ್ತ್ರಚಿಕಿತ್ಸೆ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಕೃಷ್ಣ ಸೇವಾ ಬಳಗದಂತಹ ಸಂಸ್ಥೆಗಳು ಕಾರ್ಯ ಪ್ರವೃತ್ತರಾಗಿರುವುದು ಹೆಮ್ಮೆ ವಿಚಾರವೆಂದು ಕಾರ್ಯಕ್ರಮಕ್ಕೆ ಶುಭ ಕೋರಿದರು.ಪ್ರಸಾದ್ ನೇತ್ರಾಯಲದ ಡಾ. ಶರತ್ ಎಸ್. ಹೆಗ್ಡೆ ಅವರು ಕಣ್ಣಿನ ಆರೋಗ್ಯದ ಬಗ್ಗೆ ಮತ್ತು ಜಿಲ್ಲಾಸ್ಪತ್ರೆಯ ರಕ್ತನಿಧಿ ಘಟಕದ ವೈದ್ಯಾಧಿಕಾರಿ ಡಾ. ವೀಣಾ ಕುಮಾರಿ ರಕ್ತದಾನದ ಮಹತ್ವ ಬಗ್ಗೆ ಮಾತನಾಡಿದರು.ವೇದಿಕೆಯಲ್ಲಿ ತುಳು ಶಿವಳ್ಳಿ ಮಾಧ್ವ ಮಂಡಲಜ ಜಯರಾಮ್ ಆಚಾರ್, ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಚಂದ್ರಕಾಂತ್ ಕೆ. ಎನ್. ಉಪಸ್ಥಿತರಿದ್ದರು. ರಾಘವೇಂದ್ರ ಮುಚ್ಚಿಂತಾಯ ಮತ್ತು ರಾಮಕೃಷ್ಣ ಕಾರಂತ್ ಗುರುವಂದನೆ ಸಲ್ಲಿಸಿದರು.ಕೃಷ್ಣ ಸೇವಾ ಬಳಗದ ಸಂಚಾಲಕ ವಿಷ್ಣುಪ್ರಸಾದ್ ಪಾಡಿಗಾರು ಕಾರ್ಯಕ್ರಮ ನಿರೂಪಿಸಿದರು, ವೃಜನಾಥ್ ಆಚಾರ್ಯ, ರಾಮಕೃಷ್ಣ ಬಲ್ಲಾಳ್ ಸಹಕರಿಸಿದರು.