ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮರ್ಥವಾಗಿ ಎದುರಿಸಿ

| Published : Feb 14 2025, 12:34 AM IST

ಸಾರಾಂಶ

ಪ್ರಶ್ನೆಪತ್ರಿಕೆ ಯಾವುದೇ ರೀತಿ ಕೊಟ್ಟರೂ ನೀವು ಉತ್ತರಿಸಲು ಸಿದ್ದರಾಗಿರಬೇಕು, ಅದಕ್ಕೆ ಪರಿಶ್ರಮ ಅಗತ್ಯವಿದೆ, ಕ್ರೀಡೆ, ಆಟ,ಸಿನಿಮಾ ಎಲ್ಲವನ್ನು ಪರೀಕ್ಷೆ ಮುಗಿಯುವವರೆಗೂ ಮರೆತುಬಿಡಿ ನಿಮ್ಮ ಗುರಿ ಕೇವಲ ಉತ್ತಮ ಫಲಿತಾಂಶದತ್ತ. ಮೊಬೈಲ್ ನೋಡದಿರಿ, ಓದಲು ಆಸಕ್ತಿ ಹೆಚ್ಚಲು ಉತ್ತಮ ನಿದ್ದೆಯೂ ಅಗತ್ಯವಿದೆ, ಆರೋಗ್ಯದ ಕಡೆ ಗಮನ ನೀಡಬೇಕು

ಕನ್ನಡಪ್ರಭ ವಾರ್ತೆ ಕೋಲಾರಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್ ವಿವಿಧ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವಂತೆ ಕಿವಿಮಾತು ಹೇಳಿದರು. ಕೋಲಾರ ತಾಲೂಕಿನ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ಕೆಂಬೋಡಿ ಗ್ರಾಮದ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಸಾರ್ವಜನಿಕ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಸದರಿ ೨೦೨೪-೨೫ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಎದರಿಸುತ್ತಿರುವ ನಿಲಯದ ವಿದ್ಯಾರ್ಥಿಗಳೊಟ್ಟಿಗೆ ಕೆಲ ಹೊತ್ತು ಸಮಾಲೋಚನೆ ನಡೆಸಿದರು.ಪ್ರಶ್ನೆಗೆ ಉತ್ತರಿಸಲು ಸಿದ್ಧರಾಗಿ

ಪ್ರಶ್ನೆಪತ್ರಿಕೆ ಯಾವುದೇ ರೀತಿ ಕೊಟ್ಟರೂ ನೀವು ಉತ್ತರಿಸಲು ಸಿದ್ದರಾಗಿರಬೇಕು, ಅದಕ್ಕೆ ಪರಿಶ್ರಮ ಅಗತ್ಯವಿದೆ, ಕ್ರೀಡೆ, ಆಟ,ಸಿನಿಮಾ ಎಲ್ಲವನ್ನು ಪರೀಕ್ಷೆ ಮುಗಿಯುವವರೆಗೂ ಮರೆತುಬಿಡಿ ನಿಮ್ಮ ಗುರಿ ಕೇವಲ ಉತ್ತಮ ಫಲಿತಾಂಶದತ್ತ ಇರಲಿ ಎಂದರು.ಮೊಬೈಲ್ ನೋಡದಿರಿ, ಓದಲು ಆಸಕ್ತಿ ಹೆಚ್ಚಲು ಉತ್ತಮ ನಿದ್ದೆಯೂ ಅಗತ್ಯವಿದೆ, ಆರೋಗ್ಯದ ಕಡೆ ಗಮನ ನೀಡಿ, ಮುರುಕುಲು ತಿಂಡಿ, ಎಣ್ಣೆಯಿಂದ ಕರಿದ ಪದಾರ್ಥ ತಿನ್ನದಿರಿ ಸಲಹೆ ನೀಡಿದರು.

ಊಟದ ಗುಣಮಟ್ಟ ಕಾಪಾಡಿ

ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗಾಗಿ ತಯಾರಿಸಿದ್ದ ಉಟೋಪಚಾರವನ್ನು ಪರಿಶೀಲಿಸಿ ವಿವಿಧ ಆಹಾರ ಉತ್ಪನ್ನಗಳನ್ನು ಗುಣಮಟ್ಟವಾಗಿ ಶೇಖರಿಸಿಡಲು ಅನುಸರಿಸಬೇಕಾದ ಕೆಲವು ಸಾಮಾನ್ಯ ಕ್ರಮಗಳ ಕುರಿತು ನಿಲಯದ ಅಡುಗೆ ಸಿಬ್ಬಂದಿಗೆ ಮಾಹಿತಿ ನೀಡಿದರು. ನಂತರ ಬಯೋ ಮೆಟ್ರಿಕ್ ಹಾಜರಾತಿ ಮತ್ತು ಇನ್ನಿತರೆ ರಿಜಿಸ್ಟರ್ ಗಳ ಸಮರ್ಪಕ ನಿರ್ವಹಣೆ ಕುರಿತು ಮಾಹಿತಿ ನೀಡಲಾಯಿತು.