ಸಾರಾಂಶ
ಚಳ್ಳಕೆರೆ ಇನ್ನರ್‌ವ್ಹೀಲ್ ಕ್ಲಬ್‌ವತಿಯಿಂದ ಡಾಬಸ್‌ಪೇಟೆ ಸರ್ಕಾರಿ ಗ್ರಾಮಾಂತರ ಪ್ರೌಢಶಾಲೆಗೆ ಪ್ರೋಜಕ್ಟರ್‌ನ್ನು ಕೊಡುಗೆಯಾಗಿ ನೀಡಿದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಗ್ರಾಮೀಣ ವಿದ್ಯಾರ್ಥಿಗಳಿಗೆ ಸರ್ಕಾರ ಹಲವಾರು ಸೌಲಭ್ಯಗಳನ್ನು ಒದಗಿಸಿದರೂ ಸಹಿತ ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಸೌಲಭ್ಯಗಳು ದೊರಕುವುದು ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ತಮ್ಮ ಸಹಾಯಸ್ತವನ್ನು ಚಾಚಿದರೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಸಹಾಯಕವಾಗಲಿದೆ ಎಂದು ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಮೀರಾ ರಮೇಶ್ ತಿಳಿಸಿದರು.ಸೋಮವಾರ ಡಾಬಸ್‌ಪೇಟೆ ಸರ್ಕಾರಿ ಗ್ರಾಮಾಂತರ ಪ್ರೌಢಶಾಲೆಗೆ ತುಮಕೂರು ಸೆಂಟ್ರಲ್ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಕಾತ್ಯಾಯಿನಿ ಸಹಯೋಗದೊಂದಿಗೆ ಪ್ರೋಜಕ್ಟರ್‌ನ್ನು ಕೊಡುಗೆಯಾಗಿ ನೀಡಿದರು.
ಗ್ರಾಮಾಂತರ ಶಾಲೆಗಳಿಗೆ ಅಗತ್ಯ ಸೌಲಭ್ಯ ಪಡೆದುಕೊಳ್ಳಲು ಶಾಲೆಯ ಎಸ್‌ಡಿಎಂಸಿ ಸದಸ್ಯರು ಮತ್ತು ಶಿಕ್ಷಕರ ಸಮೂಹ ನೆರವು ಪಡೆದುಕೊಳ್ಳುವಲ್ಲಿ ಯಾವುದೇ ಸಂಶಯಬೇಡ. ಸಮಾಜದಲ್ಲಿ ಹಲವಾರು ಕೊಡುಗೈದಾನಿಗಳಿದ್ದು ಅವರ ಸಹಕಾರ ಪಡೆಯುವಂತೆ ಸಲಹೆ ನೀಡಿದರು.ಈ ವೇಳೆ ಅರುಣ ಸುಬ್ಬರಾಜ್, ಯಶೋಧ, ಸರೋಜಮ್ಮ, ಭುವನೇಶ್ವರಿ, ಚಂದ್ರಕಲಾ, ಮಂಜುಳಾ, ಬಾಬು, ಮಹೇಶ್, ವಿಜಯ್, ನವೀನ್, ಆದಿತ್ಯ, ಶಿಕ್ಷಕ ಚಿಕ್ಕಣ್ಣ ಮುಂತಾದವರು ಉಪಸ್ಥಿತರಿದ್ದರು.