ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಸಹಕಾರ ಸಂಘಗಳಲ್ಲಿ ಎಲ್ಲಾ ರೀತಿ ರಾಸಾಯನಿಕ ಗೊಬ್ಬರ ಮಾರಾಟ ಮಾಡುವಂತೆ ವ್ಯವಸ್ಥೆ ಮಾಡಿದರೆ ಮತ್ತಷ್ಟು ಅನೂಕುಲವಾಗಲಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್ ಬಸವರಾಜಪ್ಪ ಹೇಳಿದರು.ಇಲ್ಲಿನ ಹನುಮಂತಾಪುರದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 61ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಸದಸ್ಯರು ಸಂಘದಲ್ಲಿ ದೊರೆಯುವ ಸಾಲ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಸಾಲ ನೀಡುವುದು ಸೇರಿ ವಸೂಲಾತಿ ನಿಯಮಿತವಾಗಿ ನಡೆದರೆ ಸಂಘದ ವ್ಯವಹಾರಕ್ಕೆ ಯಾವುದೇ ರೀತಿ ಹಿನ್ನಡೆಯಾಗುವುದಿಲ್ಲ. ಸಂಘದಲ್ಲಿ ವ್ಯವಹಾರ ಮಾಡುವುದು ಉತ್ತಮ. 2023-24ನೇ ಸಾಲಿನಲ್ಲಿ ಹನುಮಂತಾಪುರ ಸಂಘವು ₹13.98 ಲಕ್ಷ ಲಾಭದಲ್ಲಿ ಮುನ್ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ. ಮುಂದಿನ ದಿನಗಳಲ್ಲಿ ಷೇರುದಾರರ ಮರಣೋತ್ತರ ನಿಧಿ ಹೆಚ್ಚಿಸಲು ಕ್ರಮ ಕೈಗೊಳಲಾಗುವುದು.
ಸಾಲ ಮರುಪಾವತಿ ಮುಂದೂಡದೆ ಸಕಾಲದಲ್ಲಿ ಪಾವತಿಸಬೇಕು. ಸಹಕಾರಿ ಇಲಾಖೆಯಿಂದಲೆ ಆಂತರ ಲೆಕ್ಕ ಪರಿಶೋದಕರನ್ನು ನೇಮಕ ಮಾಡಬೇಕು. ಆರೋಗ್ಯಯುತ ಚರ್ಚೆಗಳಿಂದ ಸಭೆಗಳು ಯಶಸ್ವಿಯಾಗುತ್ತವೆ. ₹10 ಕೋಟಿ ಸಾಲ ನೀಡಲಾಗುತ್ತಿದೆ. ಸಕಾಲದಲ್ಲಿ ಸಾಲ ಮರುಪಾವತಿ ಮಾಡುವವರಿಗೆ ಒಂದು ವಾರದಲ್ಲೆ ಮರು ಸಾಲ ನೀಡುವಂತೆ ಒತ್ತಡ ಹಾಕಲಾಗುವುದು. ಹೆಚ್ಚುವರಿ ಸಾಲ ನೀಡುವುದಕ್ಕೆ ಕ್ರಮ ಜರುಗಿಸಲಾಗುವುದು ಎಂದರು.ಮುಖ್ಯಾ ಕಾರ್ಯನಿರ್ವಣಾಧಿಕಾರಿ ಗಿರೀಶ್, ಸಂಘದ ಅಧ್ಯಕ್ಷ ಎಚ್ ಎನ್ ನಾಗರಾಜ್. ಉಪಾಧ್ಯಕ್ಷ ರುದ್ರೇಶ್, ಚಂದ್ರಯ್ಯ, ಸಿ.ಎಚ್ ಜಗದೀಶ್, ಎಂ.ಡಿ ಬಸವರಾಜ್, ಎಸ್.ಎಚ್ ರಾಜಪ್ಪ, ಕುಬೇರಪ್ಪ, ಹನುಮಂತಪ್ಪ, ಪರುಶುರಾಮ್, ಹನುಮಂತರಾವ್, ರುದ್ರೇಶನ್, ಚಂದ್ರಮ್ಮ, ಜಯಮ್ಮ, ಜಿ.ಎಸ್ ಮಾವುರಪ್ಪ, ಬಾಸ್ಕರ್‍ರೆಡ್ಡಿ, ಪೂಜಾ, ಅಭಿಷೇಕ್, ಯೋಗಿಶ್, ಶಿವಮೂರ್ತಿ, ಚಂದ್ರಶೇಖರ್ ಇತರರಿದ್ದರು.