ವಾಲ್ಮೀಕಿ ಜಾತ್ರೆಗೆ ಬರುವ ಭಕ್ತರಿಗೆ ಸೌಲಭ್ಯ ಕಲ್ಪಿಸಿ: ಮರಿಯಪ್ಪ ಗ್ವಾತಗಿ

| Published : Feb 08 2025, 12:33 AM IST

ವಾಲ್ಮೀಕಿ ಜಾತ್ರೆಗೆ ಬರುವ ಭಕ್ತರಿಗೆ ಸೌಲಭ್ಯ ಕಲ್ಪಿಸಿ: ಮರಿಯಪ್ಪ ಗ್ವಾತಗಿ
Share this Article
  • FB
  • TW
  • Linkdin
  • Email

ಸಾರಾಂಶ

ಫೆ. 10ರಂದು ಮಹರ್ಷಿ ವಾಲ್ಮೀಕಿ ಜಾತ್ರೆ, ಉಚಿತ ಸಾಮೂಹಿಕ ವಿವಾಹ, ಮದುವೆಗಳು, ರಾಜಾವೀರ ಮದಕರಿ ನಾಯಕ, ವೀರ ಸಿಂಧೂರ ಲಕ್ಷ್ಮಣ ಹಾಗೂ ಮಹಾತ್ಮ ಗಾಂಧಿ ಪುತ್ಥಳಿಗಳ ಅನಾವರಣ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಸಮೀಪದ ತುಮರಿಕೊಪ್ಪ ಗ್ರಾಮದ ಶ್ರೀ ಆದಿಕವಿ ಮಹರ್ಷಿ ವಾಲ್ಮೀಕಿ ಮಠದಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಯಿತು.

ಹನುಮಸಾಗರ: ಫೆ. 10ರಂದು ಮಹರ್ಷಿ ವಾಲ್ಮೀಕಿ ಜಾತ್ರೆ, ಉಚಿತ ಸಾಮೂಹಿಕ ವಿವಾಹ, ಮದುವೆಗಳು, ರಾಜಾವೀರ ಮದಕರಿ ನಾಯಕ, ವೀರ ಸಿಂಧೂರ ಲಕ್ಷ್ಮಣ ಹಾಗೂ ಮಹಾತ್ಮ ಗಾಂಧಿ ಪುತ್ಥಳಿಗಳ ಅನಾವರಣ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಸಮೀಪದ ತುಮರಿಕೊಪ್ಪ ಗ್ರಾಮದ ಶ್ರೀ ಆದಿಕವಿ ಮಹರ್ಷಿ ವಾಲ್ಮೀಕಿ ಮಠದಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ವಾಲ್ಮೀಕಿ ಯುವ ಪಡೆಯ ರಾಜ್ಯಧ್ಯಕ್ಷ ಮರಿಯಪ್ಪ ಗ್ವಾತಗಿ ಮಾತನಾಡಿ, ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರು, ಅತಿಥಿಗಳಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಕೋರಿದರು.

ವಾಲ್ಮೀಕಿ ಸಮಾಜದ ರಾಜನಹಳ್ಳಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ವಾಲ್ಮೀಕಿ ಗುರು ಕಲಾಶ್ರಮದ ಸ್ವಾಮೀಜಿಗಳಾದ ಆತ್ಮಾನಂದ ಸ್ವಾಮೀಜಿ, ಪವನಕುಮಾರ ಸ್ವಾಮೀಜಿ, ರಾಜಾನವೀನಚಂದ್ರ ನಾಯಕ ದೊರೆಗಳು ಸಾನ್ನಿಧ್ಯವನ್ನು ವಹಿಸಲಿದ್ದಾರೆ. ರಾಜ್ಯ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವರಾದ ಅಮರೇಗೌಡ ಪಾಟೀಲ್ ಬಯ್ಯಾಪುರ, ರಮೇಶ ಜಾರಕಿಹೊಳಿ, ಶಿವನಗೌಡ ನಾಯಕ, ನರಸಿಂಹನಾಯಕ ರಾಜುಗೌಡ, ಬಿ. ಶ್ರೀರಾಮುಲು, ಎಂಪಿ ರಾಜಶೇಖರ ಹಿಟ್ನಾಳ, ಅಗ್ನಿಶಾಮಕದಳದ ಡಿಐಜಿ ರವಿ ಡಿ. ಚನ್ನಣ್ಣನವರ ಆಗಮಿಸಲಿದ್ದಾರೆ.

ಗ್ರಾಪಂ ಸದಸ್ಯರಾದ ಹನುಮಂತ ಮೂಗನೂರು, ಮಹಾಂತೇಶ ಪೂಜಾರ, ಎಸ್‌ಡಿಎಂಸಿ ಅಧ್ಯಕ್ಷ ಯಮನೂರಪ್ಪ ಗಾಣದಾಳ, ಗ್ರಾಮಸ್ಥರಾದ ಬಸಣ್ಣ ನಸಗುನ್ನಿ, ಯಮನೂರಗೌಡ ಪರಸಾಪುರ, ದ್ಯಾಮಣ್ಣ ಮೂಗನೂರು, ಹನಮಪ್ಪ ಗುಳಬಾಳ, ಮರಿಯಪ್ಪ ಕಾ. ಗ್ವಾತಗಿ, ದ್ಯಾಮಣ್ಣ ತುಗ್ಗಲಡೋಣಿ, ಲಕ್ಷ್ಮಣ ಹಲಕುರ್ಕಿ, ಪುಟ್ಟರಾಜ ಗಾಣದಾಳ ಇತರರು ಇದ್ದರು.