ಪ್ರತಿಯೊಬ್ಬ ಅರ್ಹ ಮಹಿಳೆಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕು

ಯಲಬುರ್ಗಾ: ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು, ಸ್ವಾವಲಂಬಿ ಜೀವನ ನಡೆಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರೆಸೆಟ್ ಸಂಸ್ಥೆಯ ನಿರ್ದೇಶಕ ರಾಜೇಶ್ವರ ಪೈ ಹೇಳಿದರು.

ತಾಲೂಕಿನ ಬೇವೂರು ಗ್ರಾಮದ ಎಸ್‌ಕೆಎಸ್ ಸಂಸ್ಥೆ, ಎಸ್‌ಬಿಐ, ಕೊಪ್ಪಳ ರೆಸೆಟ್ ಸಹಯೋಗದಲ್ಲಿ ತಿಂಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತಿಯೊಬ್ಬ ಅರ್ಹ ಮಹಿಳೆಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಎಸ್‌ಕೆಎಸ್ ಸಂಸ್ಥೆಯ ಕಾರ್ಯದರ್ಶಿ ದ್ಯಾಮಣ್ಣ ಗೊಂದಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮ ವರದಾನವಾಗಲಿದೆ. ನಿರಂತರ ಒಂದು ತಿಂಗಳ ಕಾಲ ನಡೆಯುವ ತರಬೇತಿ ಮುಕ್ತಾಯದ ನಂತರ ಪ್ರಮಾಣಪತ್ರ ವಿತರಿಸಲಾಗುವುದು ಎಂದರು.

ರೆಸೆಟ್ ಸಂಸ್ಥೆಯ ಉಪನ್ಯಾಸಕಿ ಗೀತಾ ಬೋಲಾ, ಬ್ಯಾಂಕ್‌ನ ವ್ಯವಸ್ಥಾಪಕ ಶಿವರಾಜ ಮಠಪತಿ ಮಾತನಾಡಿದರು. ಈ ಸಂದರ್ಭ ಗಣ್ಯರಾದ ಮಾಲತಿ ಮಿರಾಜಕರ್, ಬಸಮ್ಮ ದ್ಯಾಮಣ್ಣ, ಮಹಾಲಕ್ಷ್ಮಿ ಮುಂಡರಗಿ, ಮದ್ದೂರ ಮಂಜುಳಾ, ರೇಷ್ಮಾ, ಪ್ರಸಾದಕುಮಾರ, ಸಣ್ಣಹನಮವ್ವ ಹೊಸನಿ, ಭೀಮಪ್ಪ ಲಮಾಣಿ ಸೇರಿದಂತೆ ಮತ್ತಿತರರು ಇದ್ದರು.