ವಚನಾನಂದಶ್ರೀಗೆ ಫಡ್ನವೀಡ್‌, ಡಾ। ರಾಧಾಮೋಹನ್‌ ಫೋನ್‌

| Published : Apr 29 2024, 01:40 AM IST / Updated: Apr 29 2024, 11:51 AM IST

ವಚನಾನಂದಶ್ರೀಗೆ ಫಡ್ನವೀಡ್‌, ಡಾ। ರಾಧಾಮೋಹನ್‌ ಫೋನ್‌
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯ ರಾಜ್ಯಸಭಾ ಸದಸ್ಯ ಲೆಹರ್ ​ಸಿಂಗ್​ ಅವರು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಭೇಟಿ ನೀಡಿ ವಚನಾನಂದ ಸ್ವಾಮೀಜಿ ಅವರ ಜೊತೆ ಚರ್ಚೆ ನಡೆಸಿದರು.

  ಬೆಂಗಳೂರು :  ಬಿಜೆಪಿಯ ರಾಜ್ಯಸಭಾ ಸದಸ್ಯ ಲೆಹರ್ ​ಸಿಂಗ್​ ಅವರು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಭೇಟಿ ನೀಡಿ ವಚನಾನಂದ ಸ್ವಾಮೀಜಿ ಅವರ ಜೊತೆ ಚರ್ಚೆ ನಡೆಸಿದರು.

ಬಿಜೆಪಿ ಹೈಕಮಾಂಡ್​ ಅವರ ಪ್ರತಿನಿಧಿಯಾಗಿ ಹಲವಾರು ವಿಚಾರಗಳನ್ನು ಸ್ವಾಮೀಜಿ ಜೊತೆಗೆ ಚರ್ಚೆ ನಡೆಸಿದರು. ಈ ವೇಳೆ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿರುವ ರಾಧಾಮೋಹನ್​ ಅಗರವಾಲ್ ಅವರು ಸ್ವಾಮೀಜಿಗಳ ಜೊತೆ ದೂರವಾಣಿಯಲ್ಲಿ ಮಾತನಾಡಿದರು. ಅಲ್ಲದೇ ಮಹಾರಾಷ್ಟ್ರದ ಹಾಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಕೂಡ ದೂರವಾಣಿ ಮೂಲಕ ಚರ್ಚೆ ನಡೆಸಿದರು.

ರಾಧಾಮೋಹನ್​ ಅಗರವಾಲ್ ಹಾಗೂ ದೇವೇಂದ್ರ ಫಡ್ನವೀಸ್​ ಅವರ ಜೊತೆಗಿನ ದೂರವಾಣಿ ಚರ್ಚೆಯ ವೇಳೆ ಬಿಜೆಪಿಯಿಂದ ಪಂಚಮಸಾಲಿ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವಲ್ಲಿ ಆಗಿರುವ ಅನ್ಯಾಯವನ್ನು ಜತೆ ಪ್ರಬಲವಾಗಿ ಸ್ವಾಮೀಜಿ ಪ್ರಸ್ತಾಪ ಮಾಡಿದ್ದಾರೆ. ಇದನ್ನು ಮನಗಂಡಿರುವ ಬಿಜೆಪಿ ವರಿಷ್ಠರು ಮುಂಬರುವ ದಿನಗಳಲ್ಲಿ ಜನಪ್ರತಿನಿಧಿಗಳ ಆಯ್ಕೆ ಹಾಗೂ ಪಕ್ಷದ ಹುದ್ದೆಗಳನ್ನು ನೀಡುವಲ್ಲಿ ಪಂಚಮಸಾಲಿ ಸಮುದಾಯವನ್ನು ಪರಿಗಣಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಪೀಠದ ಆಡಳಿತಾಧಿಕಾರಿ ಡಾ.ರಾಜಕುಮಾರ್​ ಪಾಟೀಲ್ ತಿಳಿಸಿದ್ದಾರೆ.