ಪ್ರತಿನಿತ್ಯ ಜಾತ್ರೆಯ ನಿಮಿತ್ತ ಶ್ರೀಯವರ ಗದ್ದುಗೆಗೆ ಅಭಿಷೇಕ, ಪಂಚಾಮೃತ, ನೈವೇದ್ಯ, ಹೋಮ, ಹವನ ಹೀಗೆ ನಾನಾ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ನ. ೧೬ರಿಂದ ಆರಂಭವಾಗಿ ನ. ೨೯ಕ್ಕೆ ಮುಕ್ತಾಯವಾಗುತ್ತವೆ.
ಹನುಮಸಾಗರ: ಪಟ್ಟಣದ ಹಾಲಕೆರೆ ಶ್ರೀ ಅನ್ನದಾನೇಶ್ವರ ಮಠದಲ್ಲಿ ಇತ್ತೀಚೆಗೆ ಶ್ರೀಮಠದ ಜಾತ್ರೆಯ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ಪ್ರತಿನಿತ್ಯ ಜಾತ್ರೆಯ ನಿಮಿತ್ತ ಶ್ರೀಯವರ ಗದ್ದುಗೆಗೆ ಅಭಿಷೇಕ, ಪಂಚಾಮೃತ, ನೈವೇದ್ಯ, ಹೋಮ, ಹವನ ಹೀಗೆ ನಾನಾ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ನ. ೧೬ರಿಂದ ಆರಂಭವಾಗಿ ನ. ೨೯ಕ್ಕೆ ಮುಕ್ತಾಯವಾಗುತ್ತವೆ. ನ. ೧೬ರಂದು ಷಟ್ಸ್ಥಳ ಧ್ವಜಾರೋಹಣ ನೆರವೇರಿಸಲಾಗುವುದು. ಸಂಜೆ ೭ ಗಂಟೆಗೆ ನಾಗಭೂಷಣ ದೇವರು ಅವರಿಂದ ಅಧ್ಯಾತ್ಮ ಪ್ರವಚನ ಜರಗುತ್ತದೆ. ಇದರೊಂದಿಗೆ ಪ್ರತಿನಿತ್ಯ ಶ್ರೀ ಮಠದಲ್ಲಿ ನಾನಾ ರೀತಿಯ ಧಾರ್ಮಿಕ ಕಾರ್ಯಕ್ರಗಳು ನಡೆಯುತ್ತವೆ. ನ. ೨೯ರಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಮುತ್ತೈದೆ ಮಹಿಳೆಯರ ಕಳಸ ಕನ್ನಡಿ, ಭಾಜಾ ಭಜಂತ್ರಿಯವರೊಂದಿಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಈ ಎಲ್ಲ ಕಾರ್ಯಕ್ರಮಗಳು ಹಾಲಕೇರಿಯ ಮುಪ್ಪಿನ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುತ್ತವೆ.ಇದೇ ವೇಳೆ ಹಾಲಕೆರೆ ಶ್ರೀ ಅನ್ನದಾನೇಶ್ವರ ಮಠದ ಮುಪ್ಪಿನಬಸವಲಿಂಗ ಸ್ವಾಮೀಜಿ, ಕರಿಸಿದ್ಧಪ್ಪ ಕುಷ್ಟಗಿ, ಅಂದಾನಯ್ಯ ಸೊಪ್ಪಿಮಠ, ರಾಚಪ್ಪ ಚಿನಿವಾಲರ, ಸಂಗಯ್ಯ ವಸ್ತ್ರದ, ಮಲ್ಲಯ್ಯ ಕೋಮಾರಿ, ಬಸವರಾಜ ಬಾಚಲಾಪುರ, ಬಸವರಾಜ ಹಳ್ಳೂರ, ವಿಶ್ವನಾಥ ಕನ್ನೂರ, ಶ್ರೀಶೈಲ ಮೋಟಗಿ, ಮಹಾಂತೇಶ ಅಗಸಿಮುಂದಿನ, ಮಹಾಂತಯ್ಯ ಕೋಮಾರಿ, ಬಸವರಾಜ ದ್ಯಾವಣ್ಣನವರ, ಪ್ರಭು ಬ್ಯಾಳಿ, ಸಿದ್ಧಯ್ಯ ಬಾಳಿಹಳ್ಳಮಠ, ರುದ್ರಗೌಡ ಗೌಡಪ್ಪನವರ, ಪ್ರಶಾಂತ ಗಡಾದ, ಶಿವಪ್ಪ ಕಂಪ್ಲಿ, ವಿಜಯ ಕುಷ್ಟಗಿ, ಉಮೇಶ ಬಚಾಲಾಪುರ ಹಾಗೂ ವೀರಶೈವ ಲಿಂಗಾಯತ ಸಮುದಾಯದವರು ಇದ್ದರು.