ನ್ಯಾಯಬೆಲೆ ಅಂಗಡಿ, ಆರೋಗ್ಯ ಕೇಂದ್ರಗಳ ಸೇವೆ ಬಡಕುಟುಂಬಗಳಿಗೆ ತಲುಪಬೇಕು: ಶ್ರೀನಿವಾಸ್

| Published : Feb 21 2025, 12:47 AM IST

ಸಾರಾಂಶ

ತರೀಕೆರೆ, ನ್ಯಾಯಬೆಲೆ ಅಂಗಡಿ, ಆರೋಗ್ಯ ಕೇಂದ್ರಗಳ ಬಗ್ಗೆ ಗಮನವಿಟ್ಟು ಕೆಲಸ ಮಾಡಬೇಕು. ಆ ಸೇವೆಗಳು ಅಭಿವೃದ್ಧಿ ಜತೆಗೆ ಬಡ ಕುಟುಂಬಗಳನ್ನು ತಲುಪಬೇಕು ಎಂದು ಬೆಂಗಳೂರು ದಿ ಹಂಗರ್ ಪ್ರಾಜೆಕ್ಟ್ ಚಿಕ್ಕಮಗಳೂರು ಜಿಲ್ಲೆ ಸಂಯೋಜಕ ಶ್ರೀನಿವಾಸ್ ಹೇಳಿದರು.

ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಿಗೆ ಕಾರ್ಯಾಗಾರ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ನ್ಯಾಯಬೆಲೆ ಅಂಗಡಿ, ಆರೋಗ್ಯ ಕೇಂದ್ರಗಳ ಬಗ್ಗೆ ಗಮನವಿಟ್ಟು ಕೆಲಸ ಮಾಡಬೇಕು. ಆ ಸೇವೆಗಳು ಅಭಿವೃದ್ಧಿ ಜತೆಗೆ ಬಡ ಕುಟುಂಬಗಳನ್ನು ತಲುಪಬೇಕು ಎಂದು ಬೆಂಗಳೂರು ದಿ ಹಂಗರ್ ಪ್ರಾಜೆಕ್ಟ್ ಚಿಕ್ಕಮಗಳೂರು ಜಿಲ್ಲೆ ಸಂಯೋಜಕ ಶ್ರೀನಿವಾಸ್ ಹೇಳಿದರು.ಬೆಂಗಳೂರು ದಿ ಹಂಗರ್ ಪ್ರಾಜೆಕ್ಟ್, ತಾಲೂಕು ಚುನಾಯಿತ ಗ್ರಾಪಂ ಮಹಿಳಾ ಸದಸ್ಯರು ಸುಗ್ರಾಮ ಒಕ್ಕೂಟ, ತಾಪಂ ಬೆಂಬಲದೊಂದಿಗೆ ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದರು.

ಇದು ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರ ಕರ್ತವ್ಯವೂ ಹೌದು. ವರ್ಷದ ಯೋಜನೆ ರೂಪಿಸಿ ಅದರಂತೆ ಕೆಲಸ ಮಾಡಬೇಕು. ಡಿ. 2025 ತನಕ ಉತ್ಸುಕರಾಗಿ ಕೆಲಸ ಮಾಡಿ, ಎಲ್ಲಾ ಇಲಾಖೆ ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ಕೆಲಸ ಮಾಡುವ ಜೊತೆಗೆ ಮತ್ತು ಪಂಚಾಯಿತಿ ಒಳಗಡೆ ಅತ್ಯುತ್ತಮವಾಗಿ ಕೆಲಸ ಮಾಡಬೇಕೆಂದು ಮನವಿ ಮಾಡಿದರು. ಅಜ್ಜಂಪುರ ತಾಲೂಕಿನ ಸುಗ್ರಾಮ ಒಕ್ಕೂಟದ ಅಧ್ಯಕ್ಷರಾದ ಶಶಿಕಲಾ ರವರು ಮಾತನಾಡಿ, ಉಳಿದ ಒಂದು ವರ್ಷದಲ್ಲಿ ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು ವಿಶ್ರಮಿಸದೆ ಗ್ರಾಮದ ಪ್ರಧಾನ ಸೇವಕರಾಗಿ ಕೆಲಸ ಮಾಡಿ, ಏನೇ ಸವಾಲುಗಳು ಬಂದರೂ ಅದನ್ನು ಎದುರಿಸಿ ಒಂದು ವರ್ಷವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು

ಸಂಪನ್ಮೂಲ ವ್ಯಕ್ತಿ ಸುಧಾ ಮಾತನಾಡಿ ಪ್ರತಿಯೊಂದು ಇಲಾಖೆ ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ಇಲಾಖೆಗಳಿಂದ ಸಿಗುವ ಸೌಲಭ್ಯ ಮತ್ತು ಪಂಚಾಯಿತಿ ಯೋಜನೆಯಂತೆ ಕೆಲಸ ಮಾಡಲು ಸೂಚಿಸಿದರು.ಹಾದಿಕೆರೆ ಗ್ರಾಪಂ ಅಧ್ಯಕ್ಷೆ ರೇಖಾ ಮಾತನಾಡಿ ನನಗೆ ಈ ದಿನ ತುಂಬಾ ಸಂತೋಷವಾಗಿದೆ. ನನ್ನ ಸಹಪಾಠಿಗಳಾದ ಗ್ರಾಪಂ ಚುನಾಯಿತ ಮಹಿಳಾ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ನನ್ನ ಗ್ರಾಮ ಪಂಚಾಯಿತಿನ ಭೇಟಿ ಮಾಡುವುದಕ್ಕೆ ಬಂದಿರುವುದು ತುಂಬಾ ಸಂತೋಷ. ನಮ್ಮ ಗ್ರಾಪಂನಲ್ಲಿ ಬಹಳ ಮುಖ್ಯವಾಗಿ ಸಾಮಾನ್ಯ ಸಭೆ, ಕೆಡಿಪಿ ಸಭೆ ಮತ್ತು ಆಡಳಿತ ವರ್ಗದವರೊಂದಿಗೆ ಸೇರಿ ಸಮಾಜ ಸೇವೆಯಲ್ಲಿ ತೊಡಗಿ ಅಂಗನವಾಡಿ ಶಾಲೆ ನ್ಯಾಯ ಬೆಲೆ ಅಂಗಡಿ ಆರೋಗ್ಯ ಕೇಂದ್ರಗಳನ್ನ ಅಭಿವೃದ್ಧಿಪಡಿಸಿ ಇದರ ಜೊತೆಗೆ ಕೆರೆ ಮತ್ತು ಸ್ಮಶಾನ ಭೂಮಿಗಳ ಅಭಿವೃದ್ಧಿ, ಕಸ ನಿರ್ವಹಣೆಯನ್ನು ಚೆನ್ನಾಗಿ ಮಾಡುತ್ತಿದ್ದೇವೆ ಎಂದುತಿಳಿಸಿದರು.

ದೋರನಾಳು ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುರೇಶ್ ಮಾತನಾಡಿ ನಮ್ಮ ಗ್ರಾಮ ಪಂಚಾಯಿತಿ ಭೇಟಿಗೆ ಬಂದಿರುವುದು ಬಹಳ ವಿಶೇಷ ಮತ್ತು ಸಂತೋಷಕರ, ನಮ್ಮ ಗ್ರಾಮ ಪಂಚಾಯಿತಿ ಚುನಾಯಿತ ಸಮಿತಿ ಮತ್ತು ಆಡಳಿತ ವರ್ಗ ಮತ್ತು ಸಿಬ್ಬಂದಿ ಎಲ್ಲರೂ ಅತ್ಯುತ್ತಮ ಕೆಲಸ, ಕಾಮಗಾರಿಗಳನ್ನು ಮಾಡಿಸಿದ್ದೇವೆ. ಪಂಚಾಯಿತಿ ಕಟ್ಟಡ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಅಭಿವೃದ್ಧಿ ಮತ್ತು ಅಂಗನವಾಡಿ ಕಟ್ಟಡ ನಿರ್ಮಾಣವಾಗಿದೆ. ಗ್ರಾಮದ ಪ್ರೌಢಶಾಲೆಯ ಅಭಿವೃದ್ಧಿ ಆಟದ ಮೈದಾನ ಅಭಿವೃದ್ಧಿ, ದಾಸೋಹ ಕೊಠಡಿ, ಸಿ ಎಸ್ ಆರ್ ಫಂಡ್ ಅಂದರೆ ಬ್ಯಾಂಕಿನ ಸಹಕಾರದಿಂದ ಊಟದ ಟೇಬಲ್ ಮತ್ತೆ ಕುರ್ಚಿ ಕೊಡಿಸಿದ್ದು, ಮಕ್ಕಳ ಶಿಕ್ಷಣ ಅಭಿವೃದ್ಧಿಗೆ ಹೆಚ್ಚುವರಿ ಕೊಠಡಿ ಮಾಡಿಸಲಾಗಿದೆ. ಎಂದು ಹೇಳಿದರು. ಹಾದಿಕೆರೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಬೈರೇಶ್ ಮಾತನಾಡಿ ಗಾಂಧಿ ಗ್ರಾಮ ಪುರುಸ್ಕಾರ ಪಡೆದಿರುವುದು ಬಹಳ ವಿಶೇಷ. ಇದಕ್ಕಾಗಿ ನಮ್ಮ ಚುನಾಯಿತ ಕಮಿಟಿ ಮತ್ತು ಸಿಬ್ಬಂದಿ ಒಗ್ಗಟ್ಟಾ ಗಿ ಎಲ್ಲ ಹಳ್ಳಿಗಳಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದೇವೆ. ಕಸ ನಿರ್ವಹಣೆ ಘಟಕ ಡಿಜಿಟಲ್ ಗ್ರಂಥಾಲಯ, ಕೂಸಿನ ಮನೆ, ಅಂಗನವಾಡಿ ಕಟ್ಟಡ ಮತ್ತು ಕಾಂಪೌಂಡ್ ಗಳ ಅಭಿವೃದ್ಧಿ, ಶಾಲಾ ಕಟ್ಟಡ, ಆಟದ ಮೈದಾನಗಳ ಅಭಿವೃದ್ಧಿ ಅಂಗನವಾಡಿಗಳ ಮುಂದೆ ಪೌಷ್ಟಿಕ ಆಹಾರದ ಕೈತೋಟ ನಿರ್ಮಾಣ ಮಾಡಲಾಗಿದೆ ಎಂದು ವಿವರಿಸಿದರು. ಯೂನಿಯನ್ ಬ್ಯಾಂಕಿನ ಸಾಕ್ಷರತಾ ಅಧಿಕಾರಿ ಆದ ಎನ್ ಎಸ್ ಜಯಣ್ಣ ಮಾತನಾಡಿ ಎನ್ ಆರ್ ಎಲ್ ಎಂ ಸ್ವಸಹಾಯ ಸಂಘಗಳು ಮತ್ತು ಸಂಜೀವಿನಿ ಒಕ್ಕೂಟ ಮುಂದೆ ಬಂದು ಉದ್ಯೋಗ ಖಾತ್ರಿ ಯೋಜನೆ ಮಾಡಬೇಕು. ಸ್ವ ಉದ್ಯೋಗ ತರಬೇತಿ ಪಡೆದು ಸ್ವಂತ ಉದ್ಯೋಗ ಗಳನ್ನು ಮಾಡುವ ಮುಖಾಂತರ ಕುಟುಂಬದ ಆರ್ಥಿಕತೆ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.ದೋರನಾಳು ಗ್ರಾಪಂ ಅಧ್ಯಕ್ಷ ಮಲ್ಲಪ್ಪ, ತಿಪ್ಪೇಶ್ಸ, ಕರ್ಣ, ಶೀಲಾವತಿ ಮತ್ತು ಜಯಮ್ಮ, ಅಂಗನವಾಡಿ ಶಿಕ್ಷಕಿ ಮತ್ತು ಎಂ.ಬಿ.ಕೆ.ಭಾಗ್ಯ, ಜಿಲ್ಲಾಧ್ಯಕ್ಷೆ ಸುಧಾ, ತರೀಕೆರೆ ತಾಲೂಕ ಅಧ್ಯಕ್ಷೆ ಪುಷ್ಪಾ, ತರಿಕೆರೆ ಮತ್ತು ಅಜ್ಜಂಪುರ ತಾಲೂಕಿನ ಚುನಾಯಿತ ಮಹಿಳಾ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದರು.20ಕೆಟಿಆರ್.ಕೆ.2ಃ

ತರೀಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ದಿ ಹಂಗರ್ ಪ್ರಾಜೆಕ್ಟ್ ಚಿಕ್ಕಮಗಳೂರು ಜಿಲ್ಲಾ ಸಂಯೋಜಕ ಶ್ರೀನಿವಾಸ್ ಮಾತನಾ ಡಿದರು. ದೋರನಾಳು ಗ್ರಾ.ಪಂ.ಅಧ್ಯಕ್ಷ ಮಲ್ಲಪ್ಪ, ಪಿ.ಡಿ.ಒ.ಸುರೇಶ್ ಮತ್ತಿತರರು ಇದ್ದರು.