ಜಾತ್ರೆಗಳು ಜಾಗೃತಿ ಮೂಡಿಸುವ ಕೇಂದ್ರ

| Published : Mar 24 2024, 01:34 AM IST

ಸಾರಾಂಶ

ಕುಟುಂಬದ ಸಂಪೂರ್ಣ ಹೊಣೆಗಾರಿಕೆ ನಿಭಾಯಿಸಿ ಮನೆಯ ಒಳಗೂ ಹೊರಗೂ ದುಡಿಯುವ ಮಹಿಳೆಯ ಬದುಕಿಗೆ ಭದ್ರತೆಯೇ ಇಲ್ಲದಂತಾಗಿರುವುದು ವಿಷಾದನೀಯ

ಗದಗ: ಜಾತ್ರೆಗಳು ಜನರಲ್ಲಿ ಧಾರ್ಮಿಕ ಭಾವನೆ ಜಾಗೃತಿ ಮಾಡುವದರೊಂದಿಗೆ ಮಾನವೀಯ, ಸಾಮಾಜಿಕ, ನೈತಿಕ, ಧಾರ್ಮಿಕ ಮೌಲ್ಯಗಳನ್ನು ಬಿತ್ತುವ ಜಾಗೃತಿ ಕೇಂದ್ರಗಳಾಗಿವೆ ಎಂದು ಸಾಹಿತಿ ಕವಿತಾ ದಂಡಿನ ಹೇಳಿದರು.

ನಗರದ ಜ. ರೇಣುಕಾಚಾರ್ಯ ಮಂದಿರದಲ್ಲಿ ಜರುಗಿದ ರೇಣುಕಾಚಾರ್ಯ ಜಯಂತಿ ಹಾಗೂ ಜಾತ್ರಾ ಕಾರ್ಯಕ್ರಮದ ಮಹಿಳಾ ಗೋಷ್ಠಿಯಲ್ಲಿ ಮಹಿಳಾ ಜಾಗೃತಿ ವಿಷಯ ಕುರಿತು ಮಾತನಾಡಿ, ಕುಟುಂಬದ ಸಂಪೂರ್ಣ ಹೊಣೆಗಾರಿಕೆ ನಿಭಾಯಿಸಿ ಮನೆಯ ಒಳಗೂ ಹೊರಗೂ ದುಡಿಯುವ ಮಹಿಳೆಯ ಬದುಕಿಗೆ ಭದ್ರತೆಯೇ ಇಲ್ಲದಂತಾಗಿರುವುದು ವಿಷಾದನೀಯ ಎಂದರು.

ಸಾನ್ನಿಧ್ಯ ವಹಿಸಿದ್ದ ಮಲ್ಲಸಮುದ್ರದ ಓಂಕಾರೇಶ್ವರ ಮಠದ ಫಕ್ಕೀರೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಸ್ತ್ರೀಯರು ಶಕ್ತಿಯ ಸ್ವರೂಪ ತಾಳ್ಮೆ, ಸಹನೆಯಿಂದ ಮನೆ ನಿಭಾಯಿಸಿ ಯಶಸ್ವಿಯಾಗಿದ್ದಾರೆ ಎಂದರು.

ಈ ವೇಳೆ ಲಲಿತಾ ಬಾಳಿಹಳ್ಳಿಮಠ, ರಜನಿ ಪಾಟೀಲ, ನಾಗರತ್ನ ಹುಬಳೀಮಠ, ವಿಜಯಲಕ್ಷ್ಮೀ ಬಿರಾದಾರ, ಸಾವಿತ್ರಿ ಶಿಗ್ಲಿ, ಸುನಂದಾ ಜೋಬಾಳೆ, ಗೌರಮ್ಮ ಶಾಬಾದಿಮಠ, ಪಾರ್ವತಿ ಶಾಬಾದಿಮಠ, ಜ್ಯೋತಿ ಚಳಗೇರಿ, ಗಿರಿಜಾ ಕಾಳಗಿ, ಗಿರಿಜಾದೇವಿ ಹಿರೇಮಠ, ಮಂಗಳಾ ಶಾಬಾದಿಮಠ, ಸರ್ವಮಂಗಳ ವೀರಲಿಂಗಯ್ಯನಮಠ, ವಿ.ಕೆ. ಗುರುಮಠ, ಮಂಜುನಾಥ ಬೇಲೇರಿ, ಚಂದ್ರು ಬಾಳಿಹಳ್ಳಿಮಠ, ಮಹೇಶ ಬೇಲೇರಿ, ಶಿದ್ಲಿಂಗಪ್ಪ ಚಳಗೇರಿ, ಸುರೇಶ ಅಬ್ಬಿಗೇರಿ, ಶಕುಂತಲಾ ಬೇಲೇರಿ, ಅನ್ನಪೂರ್ಣ ಗಡಾದ, ಮಂಗಲಾ ಬೇಲೇರಿ, ಶಶಿಕಲಾ ಲಕ್ಕನಗೌಡ್ರ, ಸುನಂದಾ ಮಾಳೇಕೊಪ್ಪಮಠ, ವೀರಭದ್ರಯ್ಯ ಧನ್ನೂರಹಿರೇಮಠ, ವಿ.ಸಿ.ಅಬ್ಬಿಗೇರಿ ಉಪಸ್ಥಿತರಿದ್ದರು.

ರಾಜಶೇಖರ ಶಿವಾಚಾರ್ಯ ಸ್ವಾಮಿಗಳಿಂದ ರೇಣುಕ ದರ್ಶನ ಪ್ರವಚನ ಜರುಗಿತು. ಪಾರ್ವತಿ ಮಾಳೇಕೊಪ್ಪಮಠ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸಂಗಮ್ಮ ಹಿರೇಮಠ ಸ್ವಾಗತಿಸಿದರು. ಲತಾ ಮುತ್ತಿನಪೆಂಡಿಮಠ ನಿರೂಪಿಸಿ, ವಂದಿಸಿದರು.