ಸಾರಾಂಶ
ಜಾತ್ರೆಗಳು ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯ ಪ್ರತೀಕಗಳಾಗಿವೆ. ಜಾತ್ರೆಗಳಲ್ಲಿ ಪರಸ್ಪರ ಸಹೋದರತೆ ಹೆಚ್ಚಿಸುವ ಅವಕಾಶ ನೀಡುತ್ತವೆ ಎಂದು ಮುಕ್ತಿಮಂದಿರದ ವಿಮಲ ರೇಣುಕ ವೀರಮುಕ್ತಿ ಮುನಿ ಸ್ವಾಮಿಗಳು ಹೇಳಿದರು.
ಲಕ್ಷ್ಮೇಶ್ವರ: ಜಾತ್ರೆಗಳು ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯ ಪ್ರತೀಕಗಳಾಗಿವೆ. ಜಾತ್ರೆಗಳಲ್ಲಿ ಪರಸ್ಪರ ಸಹೋದರತೆ ಹೆಚ್ಚಿಸುವ ಅವಕಾಶ ನೀಡುತ್ತವೆ ಎಂದು ಮುಕ್ತಿಮಂದಿರದ ವಿಮಲ ರೇಣುಕ ವೀರಮುಕ್ತಿ ಮುನಿ ಸ್ವಾಮಿಗಳು ಹೇಳಿದರು.
ಸೋಮವಾರ ಸಮೀಪದ ಗುಲಗಂಜಿ ಕೊಪ್ಪ ಗ್ರಾಮದಲ್ಲಿ ನಡೆದ ದುಂಡಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನೂತನ ರಥಕ್ಕೆ ಪೂಜೆ ಸಲ್ಲಿಸಿ ನಂತರ ನಡೆದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು.ನಮ್ಮ ಸಂಸ್ಕೃತಿ, ಸಂಪ್ರದಾಯ ಬೆಳೆಸುವ ನಿಟ್ಟಿನಲ್ಲಿ ಜಾತ್ರೆಗಳ ಕೊಡುಗೆ ಅಪಾರವಾಗಿದೆ. ಧರ್ಮ ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ನಮ್ಮ ಮಕ್ಕಳಿಗೆ ನಮ್ಮ ಪರಂಪರೆ ಹಾಗೂ ಸಂಸ್ಕಾರ ನೀಡುವ ಕಾರ್ಯ ಪಾಲಕರು ಮಾಡಬೇಕು ಎಂದು ಹೇಳಿದರು.
ಈ ವೇಳೆ ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ಮುಕ್ತಿ ಮಂದಿರದಲ್ಲಿ ತ್ರಿಕೋಟಿ ಲಿಂಗ ಸ್ಥಾಪನೆಯಾಗುವ ಮೂಲಕ ಭೂಕೈಲಾಸವಾಗುವ ಕಾರ್ಯ ಸನ್ನಿಹಿತವಾಗಿದೆ ಎಂದು ಹೇಳಿದರು.ಧರ್ಮಸಭೆಯಲ್ಲಿ ಗಂಜಿಗಟ್ಟಿಯ ವೈಜನಾಥ ಶಿವಲಿಂಗೇಶ್ವರ ಸ್ವಾಮಿಗಳು, ಕರೇವಾಡಿಮಠದ ಮಳೆ ಮಲ್ಲಿಕಾರ್ಜುನ ಸ್ವಾಮಿಗಳು, ಹೂವಿನ ಶಿಗ್ಲಿಯ ವಿರಕ್ತ ಮಠದ ಚನ್ನವೀರ ಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿದರು.ಸಭೆಯಲ್ಲಿ ಗೋನಾಳ ಗ್ರಾಪಂ ಅಧ್ಯಕ್ಷ ಕರಿಯಪ್ಪಗೌಡ ಹೊಸಗೌಡರ, ನೀಲಪ್ಪಗೌಡ ಹೊಸಗೌಡರ, ನೀಲಪ್ಪಗೌಡ ದುರಗಣ್ಣವರ, ಸಿದ್ದನಗೌಡ ಬಳ್ಳೊಳ್ಳಿ, ಪ್ರೇಮವ್ವ ರಾಯಣ್ಣವರ, ಸುಧಾ ಮಾದರ, ದುಂಡಪ್ಪ ರಾಯಣ್ಣವರ, ನಿಂಗನಗೌಡ ಹೊಸಮನಿ, ನೀಲಪ್ಪ ಹೊಸ ಗೌಡರ. ಮಹೇಶ ಶಿರಹಟ್ಟಿ, ನಾಗರಾಜ ದ್ಯಾಮನಕೊಪ್ಪ ಇದ್ದರು. ಸಭೆಯಲ್ಲಿ ಅಣ್ಣಪ್ಪ ರಾಮಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲೇಶ ಧೂಳಮ್ಮನವರ ಸ್ವಾಗತಿಸಿ, ವಂದಿಸಿದರು.