ಮನಸ್ಸುಗಳು ಒಂದುಗೂಡಲು ಜಾತ್ರೆಗಳು ಪೂರಕ: ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ

| Published : Jul 26 2024, 01:37 AM IST

ಮನಸ್ಸುಗಳು ಒಂದುಗೂಡಲು ಜಾತ್ರೆಗಳು ಪೂರಕ: ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಒಡೆದು ಹೋದ ಮನಸ್ಸುಗಳು ಒಂದುಗೂಡಲು ಜಾತ್ರೆಗಳು ಪೂರಕವಾಗಲಿದೆ. ಹಿಂದಿನ ಹಿರಿಯರು ಅನೇಕ ಹಬ್ಬ, ಜಾತ್ರೆ ಮಾಡಿದ್ದಾರೆ ಎಂದು ತೀಕೋಟಾ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಐಗಳಿ

ಒಡೆದು ಹೋದ ಮನಸ್ಸುಗಳು ಒಂದುಗೂಡಲು ಜಾತ್ರೆಗಳು ಪೂರಕವಾಗಲಿದೆ. ಹಿಂದಿನ ಹಿರಿಯರು ಅನೇಕ ಹಬ್ಬ, ಜಾತ್ರೆ ಮಾಡಿದ್ದಾರೆ. ಅವರಲ್ಲಿ ಮುಂದಾಲೋಚನೆ ಇರುವುದರಿಂದ ಅವರು ನಮಗೆ ಮಾರ್ಗದರ್ಶಕವಾಗಿದ್ದಾರೆ ಎಂದು ತೀಕೋಟಾ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಸಿಂಧೂರ ವಸತಿಯ ಅಪ್ಪಯ್ಯ ಸ್ವಾಮಿಗಳ ಸಭಾಭವನದಲ್ಲಿ ಶಿವಾನುಭವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಕುಟುಂಬದಲ್ಲಿ ಎಲ್ಲರೂ ನಗು ನಗುತ್ತಾ ಇರುವುದೇ ಸ್ವರ್ಗ. ಹಸಿದ ಹೊಟ್ಟೆಗೆ ಅನ್ನ ನೀಡುವ ಮನೋಭಾವ ಬೆಳೆಸಿಕೊಳ್ಳಿ. ಸೇವೆಯಿಂದ ನಿವೃತ್ತಿಯೊಂದಿದ ಆದರ್ಶ ಶಿಕ್ಷಕ ಜಿ.ಐ. ಮುಲ್ಲಾ ಅವರನ್ನು ಕಮಿಟಿಯವರು ಸತ್ಕರಿಸಿರುವುದು ಭಾವೈಕ್ಯತೆಯ ಜಾತ್ರೆ ಎಂಬುದು ನಿರೂಪಿಸಿದೆ ಎಂದರು.

ಕನ್ನಾಳದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಲಿಂ. ಅಪ್ಪಯ್ಯ ಸ್ವಾಮಿಗಳಲ್ಲಿ ಒಂದು ಶಕ್ತಿ ಇದೆ, ಅವರು ಪವಾಡ ಪುರುಷರು. ಅನೇಕ ಪವಾಡ ಮಾಡಿ ಶಿವಯೋಗಿಗಳಾಗಿದ್ದಾರೆ. ಲಿಂ.ಮಲ್ಲಪ್ಪ ಶರಣರು ಭವ್ಯ ದೇವಾಲಯ ನಿರ್ಮಿಸಿ ಸ್ವಂತ 2 ಎಕರೆ ಜಮೀನನ್ನು ಕೊಟ್ಟಿದ್ದು, ಅವರಲ್ಲಿರುವ ತ್ಯಾಗ ದೊಡ್ಡದು ಎಂದರು.

ಟ್ರಸ್ಟ್ ಕಮೀಟಿ ಉಪಾಧ್ಯಕ್ಷ ಮಹಾದೇವ ಹಾಲಳ್ಳಿ ಅಧ್ಯಕ್ಷತೆ ವಹಿಸಿ ಜಾತ್ರೆ ನಡೆದು ಬಂದ ದಾರಿ ಬಗ್ಗೆ ವಿವರಿಸಿದರು. ಸೇವೆಯಿಂದ ನಿವೃತ್ತಿ ಹೊಂದಿದ ಆದರ್ಶ ಶಿಕ್ಷಕ ಜಿ.ಐ.ಮುಲ್ಲಾ ಅವರನ್ನು ಜಾತ್ರಾ ಕಮೀಟಿಯ ಪರ ಸತ್ಕರಿಸಲಾಯಿತು.

ಈ ವೇಳೆ ಅಪ್ಪಾಸಾಬ ಪಾಟೀಲ, ಶಿದಗೌಡ ಬಳ್ಳೋಳ್ಳಿ, ಸಿ.ಪಿ.ಐ ಮಲ್ಲಿಕಾರ್ಜುನ ಸಿಂಧೂರ, ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಹುನ್ನೂರ, ಜಗದೀಶ ತೆಲಸಂಗ, ರಾಜು ವಾಘಮೋರೆ, ನಿಂಗನಗೌಡ ಪಾಟೀಲ, ಶಿವನಿಂಗ ಅರಟಾಳ, ಚನ್ನಪ್ಪ ಸಿಂಧೂರ, ಅಪ್ಪಾಸಾಬ ತೆಲಸಂಗ ಸೇರಿದಂತೆ ಅನೇಕರು ಇದ್ದರು. ಜಗದೀಶ ಕೊರಬು ಸ್ವಾಗತಿಸಿದರು. ಕೆ.ಎಸ್. ಬಿರಾದಾರ ನಿರೂಪಿಸಿದರು, ಮಲಗೌಡ ಪಾಟೀಲ ವಂದಿಸಿದರು.