ಸಾರಾಂಶ
ಸಂಡೂರು: ರಥೋತ್ಸವ, ಜಾತ್ರೆಗಳು ಸಮಾಜದಲ್ಲಿನ ಜನರನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.
ತಾಲೂಕಿನ ಸುಶೀಲಾನಗರ ಗ್ರಾಮದಲ್ಲಿ ನಡೆದ ತಾಯಮ್ಮ ದೇವಿಯ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ಸಂಗೀತ ಸಂಜೆ ಕಾರ್ಯಕ್ರಮವನ್ನು ಅವರು ಮಾತನಾಡಿದರು.ತಾಲೂಕಿನಲ್ಲಿ ಎಲ್ಲರೂ ಸಾಮರಸ್ಯದ ಬದುಕನ್ನು ಸಾಗಿಸುತ್ತಿದ್ದೇವೆ. ಸುಶೀಲಾನಗರ ಗ್ರಾಮದಲ್ಲಿ ಗಣಿಮಾಲೀಕ ಬಿ.ನಾಗನಗೌಡ ಸಮಾಜದ ಎಲ್ಲ ವರ್ಗದ ಜನರನ್ನು ಒಂದು ಕಡೆ ಸೇರಿಸಿ ಸಭೆಗಳನ್ನು ನಡೆಸುವ ಮೂಲಕ ಎಲ್ಲರೂ ಸಹ ಒಗ್ಗಟ್ಟಿನಿಂದ ತಾಯಮ್ಮದೇವಿಯ ಜಾತ್ರೆ ಆಚರಿಸುತ್ತಿರುವುದೇ ಇಂತಹ ಒಗ್ಗಟ್ಟಿಗೆ ಸಾಕ್ಷಿಯಾಗಿದೆ ಎಂದರು.
ನಾವು ರಾಜಕೀಯ ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಈ ಹಬ್ಬದಲ್ಲಿ ಸಂತೋಷದಿಂದ ಪಾಲ್ಗೊಂಡು ಮೇಲು ಕೀಳುಗಳನ್ನು ದೂರ ತಳ್ಳಿ ಸಮಾನತೆಯ ತತ್ವದ ಅಡಿಯಲ್ಲಿ ಆಚರಿಸುವುದು ಹೆಮ್ಮೆಯ ಸಂಗತಿ ಎಂದರು.ಶಾಸಕಿ ಈ.ಅನ್ನಪೂರ್ಣ ತುಕರಾಂ ಮಾತನಾಡಿ, ಜಿಲ್ಲೆಯಲ್ಲಿಯೇ ಸಂಡೂರು ತಾಲೂಕು ಸಾಮರಸ್ಯದ ಬೀಡಾಗಿದೆ. ಸುಶೀಲಾನಗರ ಗ್ರಾಮದಲ್ಲಿ ತಾಯಮ್ಮ ಜಾತ್ರೆಯನ್ನು ಎಲ್ಲ ಸಮುದಾಯದವರು ಸೇರಿ ಆಚರಿಸುವ ಮೂಲಕ ಅದನ್ನು ಸಾಬೀತು ಪಡಿಸಿದ್ದಾರೆ. ತಾಯಮ್ಮದೇವಿ ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿಯನ್ನು ನೀಡಲಿ ಎಂದು ಶುಭಹಾರೈಸಿದರು.
ಗ್ರಾಮದ ಮುಖಂಡರು ಹಾಗೂ ಗಣಿಮಾಲೀಕ ಬಿ.ನಾಗನಗೌಡ ಮಾತನಾಡಿ, ಪ್ರತಿಯೊಂದು ಸಮಾಜದ ಸಹಕಾರದೊಂದಿಗೆ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗಿದೆ. ಎಲ್ಲರೂ ಶಾಂತಿಯಿಂದ ಈ ಹಬ್ಬ ಆಚರಿಸಿ ನೆಮ್ಮದಿಯನ್ನು ಪಡೆಯೋಣ. ನಾವು ಹಬ್ಬ ಮಾಡುವುದು ಸಾಮರಸ್ಯದ ಬದುಕಿಗಾಗಿ, ಅದನ್ನು ಇಂದು ಎಲ್ಲರೂ ಸೇರಿ ಆಚರಿಸಿದ್ದೇ ಸಾಕ್ಷಿಯಾಗಿದೆ. ತಾಯಮ್ಮ ಎಲ್ಲರಿಗೂ ನೆಮ್ಮದಿ ನೀಡಲಿ ಎಂದು ಶುಭ ಕೋರಿದರು.ಕಾರ್ಯಕ್ರಮದಲ್ಲಿ ಮುಖಂಡರಾದ ಬಿ.ಕೆ. ಬಸವರಾಜ, ವಿನಾಯಕ ಗೌಡ, ಮಹೇಶ್ ಟಿ. ನಾಗರಾಜ, ಚನ್ನವೀರಪ್ಪ, ಫಕ್ಕೀರಪ್ಪ, ಸಕ್ರಪ್ಪ, ಕೆ.ನಾಗರಾಜ, ಎನ್.ಅಂಜಿನಿ, ಮನೋಹರ, ಶ್ರೀನಿವಾಸ, ಸಂದೀಪ, ಮಹಾಂತೇಶ ಸ್ವಾಮಿ, ವೀರೇಶ ಸ್ವಾಮಿ, ಗುರುಸ್ವಾಮಿ, ಕರಿಬಸವರಾಜ, ಬಸವರಾಜ, ಮಂಜುನಾಥ ಕತ್ತಿ, ಸತೀಶ್, ಪ್ರಕಾಶ್ ಅಚಾರ್, ಕೆರೆಸೆಟ್ಟಪ್ಪ, ಜೆ.ಬಿ.ಟಿ. ಬಸವರಾಜ, ವಿಶ್ವಾಸ ಲಾಡ್, ಚಂದ್ರನಾಯ್ಕ, ಅಂಬರೀಶ್, ಬಾಬುನಾಯ್ಕು, ಜೆ. ಹನುಮನಾಯ್ಕ, ಪ್ರಮುಖರು, ಉಪಸ್ಥಿತರಿದ್ದರು.
ಸರಿಗಮಪ ಖ್ಯಾತಿಯ ಎಲ್ಲಾ ಕಲಾವಿದರು ಸಂಗೀತ ಸಂಜೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.;Resize=(128,128))
;Resize=(128,128))
;Resize=(128,128))