ಜಾತ್ರೆ ಮತ್ತು ಹಬ್ಬಗಳು ಕೇವಲ ಆಚರಣೆಗಷ್ಟೆ ಅಲ್ಲ. ಅವು ನಮ್ಮ ಸಮಾಜದಲ್ಲಿನ ಪ್ರತಿಯೊಬ್ಬರಲ್ಲಿ ಸಾಮರಸ್ಯ ಭಾವನೆಗಳನ್ನು ಮೂಡಿಸಿ ಸಮಾಜದಲ್ಲಿ ಏಕತೆಯ ಭಾವವನ್ನು ಮೂಡಿಸುತ್ತಿವೆ ಎಂದು ಕನ್ಹೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ನುಡಿದರು.
ಕನ್ನಡಪ್ರಭ ವಾರ್ತೆ ಸವದತ್ತಿ
ಜಾತ್ರೆ ಮತ್ತು ಹಬ್ಬಗಳು ಕೇವಲ ಆಚರಣೆಗಷ್ಟೆ ಅಲ್ಲ. ಅವು ನಮ್ಮ ಸಮಾಜದಲ್ಲಿನ ಪ್ರತಿಯೊಬ್ಬರಲ್ಲಿ ಸಾಮರಸ್ಯ ಭಾವನೆಗಳನ್ನು ಮೂಡಿಸಿ ಸಮಾಜದಲ್ಲಿ ಏಕತೆಯ ಭಾವವನ್ನು ಮೂಡಿಸುತ್ತಿವೆ ಎಂದು ಕನ್ಹೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ನುಡಿದರು.ಪಟ್ಟಣದಲ್ಲಿ ಗ್ರಾಮದೇವಿಯ ಜಾತ್ರೆಯ ಅಂಗವಾಗಿ ಗಡೇಕಾರ ಪ್ಲಾಟ್‌ನಲ್ಲಿ ನಿರ್ಮಿಸಿರುವ ಶ್ರೀ ಕಾಡಸಿದ್ದೇಶ್ವರ ವೇದಿಕೆಯ ಮೇಲೆ ಗ್ರಾಮದೇವಿ ಜಾತ್ರಾ ಮಹೋತ್ಸವ ಹಾಗೂ ಧಾರ್ಮಿಕ ಸಭೆ ಮತ್ತು ಪ್ರವಚನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ಹಲವು ವರ್ಷಗಳ ನಂತರ ನಡೆಯುತ್ತಿರುವ ಈ ಜಾತ್ರೆಯು ಅತ್ಯಂತ ಸಡಗರದಿಂದ ಸಾಗುತ್ತಿದೆ. ಇದರಲ್ಲಿ ಪ್ರತಿಯೊಬ್ಬರ ಪಾತ್ರವು ಬಹುಮುಖ್ಯವಾಗಿದೆ ಎಂದರು.ಶಾಸಕ ವಿಶ್ವಾಸ ವೈದ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಲವಾರು ವರ್ಷಗಳಿಂದ ಪಟ್ಟಣದ ಜನತೆಯು ಕಾಣುತ್ತಿದ್ದ ಗ್ರಾಮದೇವಿ ಜಾತ್ರೆಯ ಕನಸು ಇಂದು ನನಸಾಗಿದೆ. ಸರ್ವ ಸಮಾಜದ ಜನರು ಈ ಜಾತ್ರೆಯಲ್ಲಿ ಪಾಲ್ಗೊಂಡು ಜಾತ್ರೆಯನ್ನು ಯಶಸ್ಸಿನತ್ತ ಸಾಗಿಸುತ್ತಿದ್ದಾರೆ ಎಂದು ಹೇಳಿದರು.ಗ್ರಾಮದೇವಿ ಜಾತ್ರಾ ಉತ್ಸವ ಸಂಘದ ಅಧ್ಯಕ್ಷ ವಿರುಪಾಕ್ಷ ಮಾಮನಿ ಮಾತನಾಡಿ, ಕಳೆದ ಎಂಟು ತಿಂಗಳಿಂದ ಜಾತ್ರೆಯ ಪೂರ್ವ ತಯಾರಿಯನ್ನು ಮಾಡಿಕೊಂಡು ಬರಲಾಗುತ್ತಿದೆ. ಎಲ್ಲರೂ ಕೂಡಿಕೊಂಡು ಮಾಡಿದಂತೆ ಜಾತ್ರಾ ತಯಾರಿಯು ಇಂದು ಸಾರ್ಥಕತೆಯತ್ತ ಸಾಗುತ್ತಿದೆ. ಇಂದು ಗ್ರಾಮದೇವಿಯರ ಪುರ ಪ್ರವೇಶದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದಂತ ಜನರೇ ಈ ಉತ್ಸವಕ್ಕೆ ಸಾಕ್ಷಿ ಮತ್ತು ಪ್ರೇರಣೆಯಾಗಿದ್ದು, ಜಾತ್ರೆಯಲ್ಲಿ ಯಾರಿಗೂ ತೊಂದರೆಯಾಗದಂತೆ ಎಲ್ಲ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದರು.ಶಾಸಕ ಮಹಾಂತೇಶ ಕೌಜಲಗಿ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಸಾಹೇಬ ಜೊಲ್ಲೆ, ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ, ಗ್ರಾಮದೇವಿಯ ಜಾತ್ರೆಯ ಸೊಬಗು ಎಲ್ಲೆಡೆ ಪರಸರಿಸುತ್ತಿದ್ದು, ಸವದತ್ತಿಯ ಈ ಜಾತ್ರೆ ಮಾದರಿಯಾಗಿ ಹೊರಹೊಮ್ಮಿದೆ ಎಂದು ಶ್ಲಾಘಿಸಿದರು.ಮೂಲಿಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಶ್ರೀದೇವಿ ಮಹಾತ್ಮೆ ಚರಿತಾಮೃತ ಕುರಿತು ಪ್ರವಚನಕ್ಕೆ ಚಾಲನೆ ನೀಡಿದರು. ಮುನವಳ್ಳಿ ಸೋಮಶೇಖರ ಮಠದ ಶ್ರೀ ಮುರಘೇಂದ್ರಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ದಂಡಪಾಣಿ ದೀಕ್ಷಿತರು, ಶ್ರೀ ಪ್ರಸನ್ನ ದೀಕ್ಷಿತರು, ಶ್ರೀ ಗಂಗಾಧರ ದೀಕ್ಷಿತರು, ಹನಮಂತರಾವ್ ಟಕ್ಕಳಗಿ ಸಾನ್ನಿಧ್ಯ ವಹಿಸಿದ್ದರು.ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅರವಿಂದ ಪಾಟೀಲ, ನಾನಾಸಾಹೇಬ ಪಾಟೀಲ, ಮಹಾಂತೇಶ ದೊಡಗೌಡರ, ಡಾ.ಎನ್.ಸಿ.ಬೆಂಡಿಗೇರಿ, ಅಡಿವೆಪ್ಪ ಬೀಳಗಿ, ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ, ಎಂ.ವಿ.ಗುಂಡಪ್ಪಗೋಳ, ಪೌರಾಯುಕ್ತ ಸಂಗನಬಸಯ್ಯ ಗದಗಿಮಠ, ಎಚ್.ಎ.ಕದ್ರಾಪುರ, ಶಿವಪ್ರಕಾಶ ಪಾಟೀಲ, ಅಮೃತ ಸಾಣಿಕೊಪ್ಪ, ತಾಪಂ ಇಒ ಆನಂದ ಬಡಕುಂದ್ರಿ, ಡಾ.ಅನೀಲ ಮರಲಿಂಗಣ್ಣವರ ಉಪಸ್ಥಿತರಿದ್ದರು. ಡಾ.ವೈ.ಎಮ್.ಯಾಕೊಳ್ಳಿ ಸ್ವಾಗತಿಸಿದರು. ಶಿವಾನಂದ ತಾರಿಹಾಳ ನಿರುಪಿಸಿದರು. ಎಂ.ಪಿ.ಪಾಟೀಲ ವಂದಿಸಿದರು.ಪಟ್ಟಣದಲ್ಲಿ ಹಲವು ವರ್ಷಗಳ ನಂತರ ನಡೆಯುತ್ತಿರುವ ಈ ಜಾತ್ರೆಯು ಅತ್ಯಂತ ಸಡಗರದಿಂದ ಸಾಗುತ್ತಿದೆ. ಇದರಲ್ಲಿ ಪ್ರತಿಯೊಬ್ಬರ ಪಾತ್ರವು ಬಹುಮುಖ್ಯವಾಗಿದೆ.
-ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕನ್ಹೇರಿ ಕಾಡಸಿದ್ದೇಶ್ವರ ಮಠ.